ಕಲಬುರಗಿ: ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಹಾಗೂ ಅಜಯಕುಮಾರ್ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ನಗರದ ಸುಲ್ತಾನ್ ಪುರ್ ರಸ್ತೆಯಲ್ಲಿರುವ ಅಕ್ಷರಧಾಮ ಇಂಗ್ಲಿಷ್ ಮೀಡಿಯಂ ಶಾಲೆಯ ಆವರಣದಲ್ಲಿ ಬ್ಲಾಕ್ ಬೆಲ್ಟ್ ಹಾಗೂ ಕಲರ್ ಬೆಲ್ಟ್ ಎಕ್ಸಾಮ್ ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಸುಲ್ತಾನ್ಪುರದ ಸಿಆರ್‍ಪಿ ಜಗನ್ನಾಥ್ ಬಡಿಗೇರ್ ಅವರು ಮಾತನಾಡಿ ಆತ್ಮ ರಕ್ಷಣೆ ಕಲೆಯು ವಿದ್ಯಾರ್ಥಿಗಳಿಗೆ ಅತ್ಯಾಶಕ ಎಂದು ಹೇಳಿದರು.
ಅಕ್ಷರಧಾಮ ಶಾಲೆಯ ಮುಖ್ಯ ಗುರುಗಳಾದ ಕವಿತಾ ಸಿ ಅವರು ಕರಾಟೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಆತ್ಮ ರಕ್ಷಣ ಕಲೆವು ಹೆಣ್ಣು ಮಕ್ಕಳಿಗೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಬೆಂಗಳೂರಿನಿಂದ ಆಗಮಿಸಿದ ಮಾಸ್ಟರ್ ಶ್ರೀನಿವಾಸ್ ರವರು ವಿದ್ಯಾರ್ಥಿಗಳ ಪರೀಕ್ಷೆಯನ್ನು ವೀಕ್ಷಿಸಿ ಆರು ಜನ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಹಾಗೂ ಅನೇಕ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಚೀಫ್ ಕೋಚ್ ರಾಜವರ್ಧನ್ ಜಿ ಚೌಹಾಣ್, ಶ್ರೀಕಾಂತ್ ಪೀಸಾಳ, ಅಂಬರೀಶ್ ಜೋಗಿ, ಪ್ರತಾಪ್ ಸಿಂಗ್ ಪವರ್ ಸುಶ್ಮಿತಾ ರೆಡ್ಡಿ, ದತ್ತಾತ್ರೇಯ, ಸುಪ್ರಿಯಾ, ಪ್ರೇಮ್ ಕುಮಾರ್, ಗಾಯತ್ರಿ ಸಾವಳಿ, ಮಹದೇವ್, ಅನಿಲಕುಮಾರ್, ಸಿದ್ದು, ತೇಜಸ್ ಹಾಗೂ ಅನೇಕ ಕರಾಟೆ ವಿದ್ಯಾರ್ಥಿಗಳು ಪೆÇೀಷಕರು ಉಪಸ್ಥಿತರಿದ್ದರು.