ಅಫಲಪುರ: ತಾಲೂಕಿನ ಸಾಗನೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏರ್ಪಡಿಸಿದ ಭೇಟಿ ಬಚಾವೋ ಭೇಟಿ ಪಡಾವೋ, ಹಾಗೂ ಹೆಣ್ಣು ಮಗುವಿನ ಕಳಂಕ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಜಾಥಾವನ್ನು ಶಾಲೆಯ ವಿದ್ಯಾರ್ಥಿನಿಯಿಂದ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆಯನ್ನು ನೀಡಿದ್ದು ಹೆಣ್ಣು ಮಗುವಿನ ಸಂಭ್ರಮದ ಸಂಕೇತವಾಗಿತ್ತು. ತದನಂತರ ಗ್ರಾಮದ ಬೀದಿಗಳಲ್ಲಿ ಮಕ್ಕಳಿಂದ ತರತರದ ಘೋಷಣೆಗಳನ್ನು ಕೈಯಲ್ಲಿ ಹಿಡಿದು ಕೂಗುತ್ತಾ ಹೆಣ್ಣು ಮಗುವಿನ ಮಹತ್ವವನ್ನು ಸಾರ್ವಜನಿಕರಿಗೆ ಜಾಗೃತಿಗೊಳಿಸಿದರು. ತದನಂತರ ಶಾಲಾ ಆವರಣದಲ್ಲಿ ಕಾರ್ಯಕ್ರಮ ಜರಗಿತು.
ಮುರುಗೇಶ್ ಗುಣಾರಿ ಜಿಲ್ಲಾ ನಿರೂಪಣಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅವರಿಂದ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆಯಾಯಿತು. ಕಾರ್ಯಕ್ರಮ ಕುರಿತು ಮೀನಾಕ್ಷಿ ವಲಯ ಮೇಲ್ವಿಚಾರಕರು ಪ್ರಸ್ತಾವಿಕ ಮಾತುಗಳನ್ನು ಮಾತನಾಡಿ ಅದರ ಉದ್ದೇಶ ತಿಳಿಸಿದರು.
ನಂತರ ಉದ್ಘಾಟಕರು ಮಾತನಾಡಿ ಕಾರ್ಯಕ್ರಮ ಹೆಣ್ಣು ಮಗುವಿನ ರಕ್ಷಣೆಯಲ್ಲಿ ಇಲಾಖೆಯ ಸೌಲಭ್ಯಗಳು ಪ್ರೋತ್ಸಾಹ ಧನಗಳ ಬಗ್ಗೆ ಮಾಹಿತಿ ನೀಡಿದರು. ತದನಂತರ ಹೆಣ್ಣು ಮಗುವಿನ ಕಳಂಕ ಕುರಿತು ಶರಣಪ್ಪ ನಾಟೇಕರ್ ಪ್ರೌಢಶಾಲಾ ಗುರುಗಳು ಮಾಹಿತಿ ನೀಡುತ್ತಾ ಬಾಲ್ಯ ವಿವಾಹ ಕುರಿತು ಮಾಹಿತಿ ನೀಡಿ ಅದರಿಂದ ಆಗುವ ಅನಾಹುತಗಳ ಬಗ್ಗೆ ತಿಳಿಸಿದರು.
ಇನ್ನೋರ್ವ ಗುರುಗಳಾದ ರವಿ ಸರ್ ಮಾತನಾಡಿ ಹೆಣ್ಣು ಮಕ್ಕಳು ನಾಯಕತ್ವದ ಗುಣ ಬೆಳೆಸಿಕೊಳ್ಳುವ ಕುರಿತು ಮಾಹಿತಿ ನೀಡಿದರು. ತದನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬು ರಬಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕರಿ ಶಶಿಧರ್ ಬಳೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಭ್ರೂಣಲಿಂಗ ಪತ್ತೆ ಕಾನೂನಿಗೆ ವಿರುದ್ಧ ವಿಷಯ ಕುರಿತು ಮಾಹಿತಿ ನೀಡುತ್ತಾ ಹೆಣ್ಣು ವಿದ್ಯೆ ಕಲಿತರೆ ರಾಷ್ಟ್ರಪತಿ, ಮುಖ್ಯಮಂತ್ರಿ, ಲೋಕಸಭಾ ಸ್ಪೀಕರ್, ರಾಜ್ಯಪಾಲರು, ಜಿಲ್ಲಾಧಿಕಾರಿಗಳು, ತಸಿಲ್ದಾರರು ಅನೇಕ ಉನ್ನತ ಸ್ಥಾನಗಳನ್ನು ಅಲಂಕರಿಸಿ ನಿಭಾಯಿಸಬಲ್ಲಳು. ಹೆಣ್ಣು ಸಂತತಿ ಕಡಿಮೆಯಾದಲ್ಲಿ ಅನೇಕ ಸಮಸ್ಯೆಗಳು ತಲೆದೋರುವ ಬಗ್ಗೆ ಕುಲಂಕುಶವಾಗಿ ಮಾಹಿತಿ ನೀಡಿದರು.
ಈಗ ಪ್ರಸ್ತುತವಾಗಿ ನಾವು ಹೆಣ್ಣು ಗಂಡಿನ ಲಿಂಗಾನುಪಾತ ಆಘಾತಕಾರಿಯಾಗಿದೆ ಅದಕ್ಕಾಗಿ ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರು ಆತ್ಮವಲೋಕನ ಮಾಡಿಕೊಳ್ಳುವುದು ಅವಶ್ಯ. ಅಲ್ಲದೆ ಭ್ರೂಣ ಹತ್ಯೆ ಕಾಯ್ದೆ ಅಡಿಯಲ್ಲಿ ಎಲ್ಲರೂ ಜಾಗೃತರಾಗಿ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಎಲ್ಲಾ ಜನಪ್ರತಿನಿಧಿಗಳ, ಅಧಿಕಾರಿಗಳ, ಸಾರ್ವಜನಿಕರ ಸಹಾಯದಿಂದ ಕಟ್ಟುನಿಟ್ಟಾಗಿ ಜಾರಿಗೆ ಬಂದಾಗ ಮಾತ್ರ ಹೆಣ್ಣು ಸಂತತಿ ಉಳಿಸಿ, ಅಸಮತೋಲನ ಉಂಟಾಗದಂತೆ ನೋಡಿಕೊಂಡಾಗ ಮಾತ್ರ ಹೆಣ್ಣು ಮಕ್ಕಳ ಸಮಸ್ಯೆಗಳು ತಾನಾಗಿಯೇ ಪರಿಹಾರಗೊಂಡು ಹೆಣ್ಣಿನ ಸ್ಥಾನಮಾನ ರಾರಾಜಿಸುತ್ತದೆ. ಇದು ಅಲ್ಲದೆ ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ತಡೆಗಟ್ಟುವಂತೆ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ತಿಳಿಸಿದರು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಪ್ರೇಮಾನಂದ್ ಚಿಂಚೋಳಿಕರ್, ಗ್ರಾಮ ಪಂಚಾಯಿತಿ ಸದಸ್ಯರಾದ ಈರಣ್ಣ ಸುತ್ತಾರೆ,ಜಿಲ್ಲಾ ಸಂಯೋಜಕರಾದ ವಿಜಯಲಕ್ಷ್ಮಿ,ಆರೋಗ್ಯ ಕ್ಷೇಮ ಕೇಂದ್ರದ ಸಿಬ್ಬಂದಿಗಳಾದ ಶರಣು ದೊಡ್ಡಮನಿ, ಶೃತಿ, ವಸತಿ ಮೇಲ್ವಿಚಾರಕರಾದ ಸುಮಂಗಲ, ವಲಯ ಮೇಲ್ವಿಚಾರದ ಮಲ್ಕಮ್ಮ ಕಂಠಗೋಳ, ಆಶಾ ಕಾರ್ಯಕರ್ತರು ಗಳಾದ ಹುಲಿಗೆಮ್ಮ, ವಿಜಯಲಕ್ಷ್ಮಿ, ಕವಿತಾ, ಅಂಗನವಾಡಿ ಕಾರ್ಯಕರ್ತರಾದ ಶಿವಲೀಲಾ, ಶ್ರೀ ಶಕ್ತಿ ಗುಂಪಿನ ಸದಸ್ಯರುಗಳು, ಶಾಲಾ ಶಿಕ್ಷಕ ಸಿಬ್ಬಂದಿ ವರ್ಗದವರು, ಕೆ ಹೆಚ್ ಪಿ ಸಂಸ್ಥೆಯ ಸುಧೀರ್ ಸಾಲಿಮನಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಗ್ರಾಮದ ಅರ್ಜುನ್ ಕಾರ್ಯಕ್ರಮ ಕುರಿತು ತಮ್ಮ ಅನಿಸಿಕೆಗಳ ಮಾತನಾಡಿ ತಮ್ಮ ಗ್ರಾಮದಲ್ಲಿ ಜರುಗಿದ್ದ ಈ ಕಾರ್ಯಕ್ರಮ ತುಂಬಾ ಮಾಹಿತಿ ಪಡೆದದ್ದಾಗಿ ತಾವೇ ಸ್ವತಃ ಬಂದು ಮಾತನಾಡಿದರು. ಹಾಗೆಯೇ ಶಾಲಾ ವಿದ್ಯಾರ್ಥಿನಿ ಕಾರ್ಯಕ್ರಮ ಕುರಿತು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಹೀಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರೂಪಣೆಯನ್ನು ವಲಯ ಮೇಲ್ವಿಚಾರಕರಾದ ಶಾರದಾ ಆವಂಟಿ ಹಾಗೂ ಗ್ರಾಮದ ಅಂಗನವಾಡಿ ಕಾರ್ಯಕರ್ತರಾದ ಶಾಂತ, ನಿರ್ವಹಿಸಿದ್ದರು