ರಾಷ್ಟ್ರರಕ್ಷಣೆಗೆ ಯುವಕರನ್ನ ಪ್ರೇರೇಪಿಸುತ್ತಿರುವ ಮೋಹನ್ ದಾನಪ್ಪರ ಕಾರ್ಯ ಶ್ಲಾಘನೀಯ; ಸಚಿವ ಸಂತೋಷ್ ಲಾಡ್

0
120

ಬೆಂಗಳೂರು: ದೇಶದ ಯುವಕರು ಸೇನೆ ಸೇರುವಂತೆ ಜಾಗೃತಿಗಾಗಿ ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಕಾರ್ಗಿಲ್ ನಲ್ಲಿ ಮ್ಯಾರಥಾನ್ ಮಾಡಿದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ರವರು ಪತ್ರದ ಮೂಲಕ ಅಭಿನಂದಿಸಿದ್ದಾರೆ.

ಪತ್ರದಲ್ಲಿ ಮೋಹನ್‌ಕುಮಾರ್ ದಾನಪ್ಪ, ವಕೀಲರು, ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಇವರು ‘ಸಲಾಂ ಸೋಲ್ಜರ್ಸ್’ ಶೀರ್ಷಿಕೆಯಡಿಯಲ್ಲಿ ಯುವ ಜನತೆ ಸೇನೆ ಸೇರಲು ‘ಯುವಕರೇ ದೇಶ ಸೇವೆಗೆ ಒಂದಾಗಿ, ಸೇನೆ ಸೇರಲು ಮುಂದಾಗಿ’ ಎನ್ನುವ ಬಗ್ಗೆ ಜಾಗೃತಿಗಾಗಿ ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ಧ ಸ್ಮಾರಕದವರೆಗೂ ಬಲಗೈನಲ್ಲಿ ರಾಷ್ಟ್ರ ಧ್ವಜ ಹಿಡಿದು ಸತತ 5 ಗಂಟೆಗಳ ಕಾಲ 42 ಕಿ.ಮೀ. ಮ್ಯಾರಥಾನ್ ಓಟವನ್ನು ನಡೆಸಿ ಯಶಸ್ವಿಯಾಗಿ ಪೂರ್ಣಗೊಳಿಸಿರುವ ವಿಷಯ ತಿಳಿದು ಬಹಳ ಸಂತೋಷವಾಯಿತು.

Contact Your\'s Advertisement; 9902492681

ಈ ಪ್ರತ್ಯನವು ಹಲವಾರು ದಾಖಲೆಗಳಲ್ಲಿ ದಾಖಲಾಗಿರುವುದು ಮತ್ತಷ್ಟು ಸಂತಸದ ವಿಚಾರ. ರಾಷ್ಟ್ರದ ರಕ್ಷಣೆಗೆ ಯುವಕರನ್ನು ಸೇನೆಗೆ ಸೇರಲು ಪ್ರೇರೇಪಿಸುತ್ತಿರುವ ಮೋಹನ್‌ಕುಮಾರ್‌ ದಾನಪ್ಪರವರು ಕೈಗೊಂಡಿರುವ ಕಾರ್ಯವು ಶ್ಲಾಘನೀಯವಾಗಿದ್ದು, ಇದೇ ರೀತಿ ಇನ್ನೂ ಹಲವಾರು ಸಮಾಜ ಮುಖಿ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡು, ಸಮಾಜಕ್ಕೆ ಅವರ ಸೇವೆ ಹೆಚ್ಚಿನ ಮಟ್ಟದಲ್ಲಿ ದೊರಕಲಿ ಎಂದು ಮನದಾಳದಿಂದ ಮೋಹನ್ ಕುಮಾರ್ ದಾನಪ್ಪನವರಿಗೆ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ರವರು ಅಭಿನಂದನಾ ಪತ್ರದ ಮೂಲಕ ಶುಭ ಹಾರೈಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here