- ಎಂ.ಡಿ ಮಶಾಕ ಚಿತ್ತಾಪುರ
ಕಲಬುರಗಿ: ಕಸ ವಿಲೇವಾರಿಗಾಗಿ ಬಳಸಿಕೊಂಡ ಟ್ರ್ಯಾಕ್ಟರ್’ಗೆ ಬಾಡಿಗೆ ನೀಡಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮ ಪಂಚಾಯಿತ್ ಪ್ರವೇಶ ದ್ವಾರದ ಮುಂದೆಯೇ ಕಲ್ಲು ಸುರಿದಿರುವ ಘಟನೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಜರುಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಮಧ್ಯೆಭಾಗದಲ್ಲಿರುವ ಗ್ರಾಪಂ ಕಚೇರಿ ಮುಂದೆಯೇ ದೊಡ್ಡ ಗಾತ್ರದ ಕಲ್ಲುಗಳನ್ನು ಸುರಿಯಲಾಗಿದ್ದು ಬಾಡಿಗೆ ನೀಡಿಕೆಯಲ್ಲಿನ ನಿರ್ಲಕ್ಷವೇ ಪ್ರಮುಖ ಕಾರಣ ಎನ್ನಲಾಗಿದೆ.
ಹಲಕರ್ಟಿ ಗ್ರಾಪಂ ಅಧ್ಯಕ್ಷ ರಾಕೇಶ ಶಿಂಧೆ ಹಾಗೂ ಅದೇ ಗ್ರಾಮದ ಟ್ಯಾಕ್ಟರ್ ಮಾಲೀಕ ದೇವಿಂದ್ರ ರಾಮಲಿಂಗ ಸುಣಗಾರ ಮಧ್ಯೆ ಬಾಡಿಗೆ ವಿಷಯಕ್ಕೆ ಮನಸ್ತಾಪ ಉಂಟಾಗಿದೆ. ಚರಂಡಿಯಲ್ಲಿ ಸಂಗ್ರಹವಾಗಿದ್ದ ಕಸ ಹೊರಸಾಗಿಸಲು 20 ಸಾವಿರ ವ್ಯಯಿಸಲಾಗಿದೆ. ಆದರೆ ಗ್ರಾಪಂ ಅಧ್ಯಕ್ಷ ಮಾತ್ರ ಕೇವಲ 6 ಸಾವಿ ಮಾತ್ರ ನೀಡಿದ್ದು ಇನ್ನುಳಿದ ಹಣ ನೀಡುವುದಿಲ್ಲ ಎಂದು ಹೇಳಿರುವುದೇ ಟ್ರ್ಯಾಕ್ಟರ್ ಮಾಲೀಕನ ಆಕ್ರೋಶಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಬೇರೆ ದಾರಿ ಕಾಣದೇ ಪಂಚಾಯತ ಕಚೇರಿಯೊಳಗೆ ಯಾರು ಹೋಗದಂತೆ ಅಡ್ಡಲಾಗಿ ಕಲ್ಲು ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.