ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ “ಪೋಸ್ಕೋ” ಕಾಯ್ದೆ ಜಾಗೃತಿ ಕಾರ್ಯಕ್ರಮ

0
48

ಚಿತ್ತಪೂರ; ಚಿತ್ತಾಪುರ ತಾಲೂಕಿನ ರೇವಗಿ. ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹೆಬ್ಬಾಳದ ರಾಷ್ಟ್ರೀಯ ಕಿಶೋರ ಸ್ವಾಸ್ಥ ಕಾರ್ಯಕ್ರಮ ಪ್ರಾಥಮಿಕ ಆರೋಗ್ಯ ಕೇಂದ್ರ ಅರಣಕಲ್ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪ್ರಗತಿ ಅಭಿವೃದ್ಧಿ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ” ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ” ಹಾಗೂ “ಪೋಸ್ಕೋ ” ಕಾಯ್ದೆ ಕುರಿತು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಕಲ್ಬುರ್ಗಿ ಜಿಲ್ಲೆಯ ಆರ್‌ಸಿಎಚ್ ಅಧಿಕಾರಿಗಳಾದ ಡಾ. ಶರಣಬಸಪ್ಪ ಕ್ಯಾತನಾಳ ಅವರು ಉದ್ಘಾಟಿಸಿ ಮಾತನಾಡುತ್ತಾ ಅವರು ಹೆಣ್ಣು ಮಕ್ಕಳಲ್ಲಿ ರಕ್ತ ಹೀನತೆ ಹೆಚ್ಚಾಗಿ ಕಂಡುಬರುತ್ತದೆ ಹದಿ ಹರೆಯದ ಮುಟ್ಟಿನ ಸಮಯದಲ್ಲಿ ರಕ್ತ ಹೀನತೆ ಸಾಧ್ಯತೆ ಹೆಚ್ಚು ಹಾಗೆ ಗಂಡು ಮಕ್ಕಳಲ್ಲಿ ಸದಾ ಸುಸ್ತು ಆಯಾಸ ಹೀಗೆ ಇರುವುವರು ಅನೀಮಿಯ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಅವರಿಗೆ ಸಮಾಲೋಚನೆ ಮಾಡಿ ಜಾಗೃತಿ ಮೂಡಿಸುವ ಕೆಲಸ ಅಗಬೇಕು ಪ್ರತಿ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಬೇಂದು ಸಂತಸ ವ್ಯಕ್ತಪಡಿಸಿದ್ದರು.

Contact Your\'s Advertisement; 9902492681

ಕಾನೂನು ಪರಿವಿಕ್ಷಣಾಧಿಕಾರಿಗಳು . ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಲಬುರಗಿ ಭರತೇಶ ಶೀಲವಂತ, ಅವರು ಪೋಸ್ಕೋ ಕಾಯ್ದೆ ಕುರಿತು ಮಾತನಾಡುತ್ತಾ ಅವರು ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ ಪಾಲಕರು ಮತ್ತು ಶಿಕ್ಷಕರು ಲೈಂಗಿಕ ಶೋಷಣೆಯ ವಿಷಯವಾಗಿ ಮಕ್ಕಳಿಗೆ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ ಮಗುವಿನ ದೇಹದ ಖಾಸಗಿ ಭಾಗಗಳನ್ನು ಸಂಕೋಚವಾಗುವ ರೀತಿಯಲ್ಲಿ ಮುಟ್ಟುವುದೆ ಅಸುರಕ್ಷಿತ ಸ್ಪರ್ಶ. ಮಗುವಿನ ಖಾಸಗಿ ಭಾಗಗಳನ್ನು ಮುಟ್ಟುವುದು ಅಪರಾಧವಾಗಿದ್ದು. ಮಕ್ಕಳು ಕೂಡಲೇ ಪಾಲಕರಿಗೆ ಅಥವಾ ತನಗೆ ನಂಬಿಕೆಯುಳ್ಳ ವ್ಯಕ್ತಿಗಳಿಗೆ ತಿಳಿಸುವಂತೆ ಅರಿವು ನೀಡುವ ಬಗ್ಗೆ ಜಾಗೃತಿ ಮೂಡಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ಮಂಜುಳ ವಿ ಪಾಟೀಲ್, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು. ಜಿಲ್ಲಾ ಸಂಯೋಜಕರು ಅರ್ ಕೆ ಎಸ್ ಕೆ , ಕಲಬುರಗಿಯ, ಶಿವಕುಮಾರ್ ಕಾಂಬಳೆ . ಪ್ರಾಂಶುಪಾಲರು ಮು. ದೇ .ವಸತಿ ಶಾಲೆ ರೇವಗ್ಗಿ ಕಲಾವತಿ ರಾಜೇಶ್ವರ್. ವಸತಿ ಶಾಲೆಯ ಮತ್ತು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಪರಿಮಳಾ ಎಂ.ಎಸ್ . ಅಧ್ಯಕ್ಷತೆ ವಹಿಸಿದ್ದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಅರಣಕಲ್ ವೈದ್ಯಾಧಿಕಾರಿಗಳಾದ ಡಾ. ಮಹಮ್ಮದ್ ಸಿಕಂದರ್ ಅಜಾಮ್, ವಲಯ ಮೇಲ್ವಿಚಾರಕರು ಪ್ರಾಥಮಿಕ ಆ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಆಶಾ ಅಂಗನವಾಡಿ ಕಾರ್ಯಕರ್ತೆಯರು ಪ್ರಾಥಮಿಕ ಆರೋಗ್ಯ ಕೇಂದ್ರ ಅರಣಕಲ್ಲ ಆರೋಗ್ಯ ಇಲಾಖೆ ಸಿಬ್ಬಂದಿಗಳು ವಸತಿ ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here