-
ವರದಿ, ಸುನೀಲ್ ರಾಣಿವಾಲ್
ಕಲಬುರಗಿ: ಚುನಾವಣೆ ಸಮಯದಲ್ಲಿ ಮತದಾನಕ್ಕಾಗಿ Eಔಂ ಮೆಶಿನ್ ಬಳಕ್ಕೆಯಿಂದ ಸೂಕ್ತ ಅಭ್ಯರ್ಥಿ ಆಯ್ಕೆಯಾಗದಿರುವುದು ಅನುಮಾನಗಳು ಕಾಡುತ್ತಿವೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ಎಂಬುದು ದೊಡ್ಡ ಶಕ್ತಿಯಾಗಿದೆ. ಈ ಶಕ್ತಿ ಉಳಿಸಿಕೊಳ್ಳಲು EVM ವಿರುದ್ದ ಸಂಘಟನೆಗಳು ಹೋರಾಟ ಮಾಡಲು ಮುಂದಾಗಬೇಕು ಎಂದು ರಮೇಶ್ ಮಾಡ್ಯಾಳಕರ ಹೇಳಿದರು.
ಶನಿವಾರ ಕೆಬಿಎನ್ ಆಸ್ಪತ್ರೆ ಹತ್ತಿರದ ಅಂಜುಮನ್ ತಹೇರಿಕ್ ಸಭಾಗಂಣದಲ್ಲಿ ನಡೆಸಿದ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಮಾತನಾಡಿದರು.
ದಲಿತ ಸೇನೆ ರಾಮವಿಲಾಸ್ ಪಾಸ್ವಾನ್ ಜಿಲ್ಲಾ ಸಮಿತಿ ಆಯೋಜಿಸಿದ್ದ ರಮಾಬಾಯಿ ಅಂಬೇಡ್ಕರ್ ರವರ 126ನೇ ಜಯಂತಿ ಅಂಗವಾಗಿ ಮುಂಬರುವ ದಿನಗಳಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಎಲ್ಲಾ ಸಂಘಟನೆಗಳ ನಾಯಕರು ಹೋರಾಟಕ್ಕೆ ಮುಂದಾಗಿ. ಅಂದಾಗ ಮಾತ್ರ ನಾವು ಬದುಕಲು ಸಾಧ್ಯವಾಗುತ್ತದೆ, ಇಲ್ಲವಾದ್ರೆ ಮುಂದೆ ಸಂವಿದಾನದ ಆಸೆಯನ್ನು ಬದಲಾವಣೆ ಮಾಡಲು ಮನುವಾದಿಗಳು ಮುಂದಾಗಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮ ವ್ಯಾಪ್ತಿಯಲ್ಲಿ ಬರುವ ಗ್ರಾಪಂ ನಲ್ಲಿ ರಸ್ತೆ. ಒಳ್ಳ ಚರಂಡಿ. ಕುಡಿಯುವ ನೀರು ಸೇರಿದಂತೆ ಹಲವು ಮೂಲಭೂತ ಸೌಲಭ್ಯ ಒದಗಿಸಲು ಹೋರಾಟದ ಮೂಲಕ ಅನುದಾನ ಸದುಪಯೋಗ ಪಡೆದುಕೊಳ್ಳಿ, ಶಿಕ್ಷಣವು ಖಾಸಗೀಕರಣವಾಗಿ ಮಾರ್ಪಟ್ಟಿವೆ. ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಮುಂದಾಗಿ. ಅಂದಾಗ ಭವಿಷ್ಯ ಸುಧಾರಿಸಲು ಸಾಧ್ಯವಾಗುತ್ತದೆ ಎಂದರು.
ಅಂಬೇಡ್ಕರ್ ರವರ ಉನ್ನತ ಮಟ್ಟದ ವಿಧ್ಯಾಭ್ಯಾಸ ಮಾಡಿ ಭಾರತಕ್ಕೆ ಸಮಾನತೆ ಸಂವಿಧಾನ ನೀಡಿದ್ದ ರಮಾಬಾಯಿ ಅಂಬೇಡ್ಕರ್ ರವರ ತ್ಯಾಗ ಬಹು ದೊಡ್ಡದು ಎಂದು ಬಣ್ಣಿಸಿದರು. ದಲಿತ ಸೇನೆ ಜಿಲ್ಲಾಧ್ಯಕ್ಷ ಹಾಗೂ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶ್ರವಣಕುಮಾರ ಎಮ್ ಮೋಸಲಗಿ ಅವರು ಮಾತನಾಡಿ, ಹಿಂದೂ ಎಂಬ ಹೆಸರಿನಲ್ಲಿ ಚುನಾವಣೆಯಲ್ಲಿ ಮತದಾನ ಸೆಳೆಯಲು ಪ್ಲಾನ್ ಮಾಡುತ್ತಿದ್ದಾರೆ, ನಾವೇಲ್ಲರೂ ಹಿಂದೂ ಅಂದ್ರೆ ಜಾತಿಯತೆ ಮಾಡಬಾರದು. ಏಕೆ ಜಾತಿಯತೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಹಿಂದೂ ಹೆಸರಿನಲ್ಲಿ ಮತದಾನ ಪಡೆದು ಸಂವಿದಾನದ ವಿರುದ್ಧ ಅಧಿಕಾರ ನಡೆಸಲು ಮುಂದಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದರು. ಹಿಂದೂಳಿದ ಸಮಾಜದ ಜನರು ಜಾಗೃತರಾಗಿ ಅಮೂಲ್ಯವಾದ ಮತದಾನ ನಮ್ಮ ರಕ್ಷಣೆಗೆ ಮತ್ತು ಸಂವಿದಾನದ ಹಾದಿಯಲ್ಲಿ ನಡೆದುಕೊಂಡು ಹೋಗುವವರಿಗೆ ಮತದಾನ ಮಾಡಬೇಕೆಂದು ಕಳವಳ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ದಲಿತ ಸೇನೆ ರಾಜ್ಯ ಪ್ರ.ಕಾರ್ಯದರ್ಶಿ ಹಾಗೂ ನ್ಯಾಯವಾದಿ ನಾಗೇಂದ್ರ ಕೆ.ಜವಳ್ಳಿ, ಖ್ಯಾತ ವಕೀಲರಾದ ರಾಜೇಂದ್ರ ವಿ ಹೊಸಮನಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ. ಪ್ರ. ಕಾರ್ಯದರ್ಶಿ ಮಲ್ಲಿಕಾರ್ಜುನ ಬೋಳಣ್ಗಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಅಲಿ ಬಾಬಾ ಜುಬೈದಿ, ಜಿ. ವಕೀಲರಾದ ಸುನೀಲ್ ಸ್ವಾಗತಿಸಿದರು. ಧರ್ಮಣ್ ಒಂದಿಸಿದರು.