ಕಲಬುರಗಿ: ಜಿಲ್ಲೆಯ ಚಿಂಚೋಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣಕ್ಕೆ ಗೈರು ಹಾಜರಾದ ಪ್ರಾಂಶುಪಾಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜೈ ಕನ್ನಡಿಗರ ಸೇನೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಕಾಲೇಜು ಪ್ರಾಂಶುಪಾಲರಾದ ಸಂತೋಷ ಕುಮಾರ್ ಕಟಕೆ ಅವರು, ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ಕಾಲೇಜಿನ ಮುಖ್ಯಸ್ಥರು ಆಗಿದ್ದಾರೆ. ಈ ಕಾಲೇಜಿನಲ್ಲಿ ಗಣರಾಜ್ಯೋತ್ಸವದ 75ನೇ ಸಂಭ್ರಮ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಕಾಲೇಜಿನಲ್ಲಿ ಸ್ವಚ್ಚತೆ ಕಾರ್ಯಕ್ರಮ (ಶ್ರಮದಾನ ಶಿಬಿರ) ಸಾಂಸ್ಕøತಿಕ, ಕ್ರೀಡೆ, ಪ್ರಬಂಧ, ಭಾಷಣ ವಿವಿಧಚಟುವಟಿಕೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂವಿಧಾನ ದೇಶ ಪ್ರೇಮದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದ್ದ ಅವರು, ಇದೆಲ್ಲವನ್ನು ಬದಿಗೊತ್ತಿದ್ದಲ್ಲದೇ ಜ.26ರ ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೂ ಗೈರು ಹಾಜರಾಗುವ ಮೂಲಕ ರಾಷ್ಟ್ರೀಯ ಧ್ವಜಕ್ಕೆ ಅಗೌರವ ತೋರಿಸಿದ್ದಾರೆ.
ಇವರ ಗೈರು ಹಾಜರಿಯಿಂದ ಕಾಲೇಜಿನ ಇತರ ಸಿಬ್ಬಂದಿಗಳು ಸಹಗೈರುಹಾಜರಾಗಿರುತ್ತಾರೆ. ಸುಮಾರು 1200 ವಿದ್ಯಾರ್ಥಿಗಳ ಈ ಕಾಲೇಜಿಗೆ ಮತ್ತು ವಿದ್ಯಾರ್ಥಿಗಳಿಗೆ ಆದರ್ಶರಾಗಬೇಕಾದ ಪ್ರಾಂಶುಪಾಲರು ಗೈರು ‘ಹಾಜರಾಗಿ ಕರ್ತವ್ಯಲೋಪ ಎಸಗಿರುತ್ತಾರೆ.
ಆದ್ದರಿಂದ ಕರ್ತವ್ಯಲೋಪ ರಾಷ್ಟ್ರಧ್ವಜ ವಿರೋಧಿ, ಸಂವಿಧಾನ ವಿರೋಧಿ, ಬೇಜವಾಬ್ದಾರಿಯ ಪ್ರಾಂಶುಪಾಲರಾದ ಕಟಕೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜೈ ಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು ಅಪರ ಜಿಲ್ಲಾಧಿಕಾರಿಗೆ ದೂರುಸಲ್ಲಿಸಿಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ರಾಮಾ ಪೂಜಾರಿ, ಅನೀಲ ತಳವಾರ,ಮಲ್ಲು ಆಲಗೂಡ, ಆನಂದ ಕೊಳ್ಳುರ, ರವಿ ಇದ್ದರು.