ವಾಡಿ; ಪಟ್ಟಣದಲ್ಲಿ ಸುಮಾರು ವರ್ಷದಿಂದ ಅಭಿಯಂತರರು ಇಲ್ಲದೇ ಇರುವುದರಿಂದ ಪುರಸಭೆ ನೀದಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಸಮರ್ಪಕವಾಗಿ ಆಗದಂತಾಗಿದೆ ಎಂದು ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.
ಜಿಲ್ಲೆಯಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಪುರಸಭೆ ಇದಾಗಿದೆ,ಆದರೆ ಖಾಯಂ ಅಭಿಯಂತರರು ವರ್ಷದಿಂದ ಇಲ್ಲದಂತಾಗಿದೆ, ತಾತ್ಕಾಲಿಕವಾಗಿ ನಿಯೋಜನೆ ಗೊಂಡು ಸ್ವಲ್ಪ ದಿನಗಳಲ್ಲೆ ಸ್ಥಳಾಂತರ ವಾಗುತ್ತಿದ್ದಾರೆ.ಇದರಿಂದ ಅನೇಕ ಕಾಮಗಾರಿಗಳು ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿವೆ,ಒಂದು ತಿಂಗಳಿಂದ ಇಲ್ಲಿ ಅಭಿಯಂತರಿಲ್ಲದೆ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ ಎಂದರು.
ಮೇಲಾಗಿ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಸಂಭಂದಿಸಿದ ಅಧಿಕಾರಿಗಳು ಪಟ್ಟಣದ ಅಭಿವೃದ್ಧಿಗಾಗಿ ಅಭಿಯಂತರರ ನೇಮಕಕ್ಕೆ ಹಿಂದೇಟು ಹಾಕುತ್ತಿರುವ ಕಾರಣ ಯಾಕೆ ಅಂತ ತಿಳಿಯುತ್ತಿಲ್ಲ, ವಾಡಿ ಜನರ ಕಾಳಜಿಗಾಗಿ ತಕ್ಷಣ ಖಾಯಂ ಅಭಿಯಂತರರ ನೇಮಕ ಮಾಡಬೇಕು ಎಂದು ಸೇಡಂನ ಸಹಾಯಕ ಆಯುಕ್ತರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.