ಮುಖ್ಯ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ; ಮೇಯರಗೆ ಮನವಿ

0
20

ಕಲಬುರಗಿ: 2024 ರ ಬೇಸಿಗೆ ಕಾಲದ ಬಿಸಿಲು ಪ್ರಾರಂಭವಾಗಿರುವುದರಿಂದ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಬರುವ ಎಲ್ಲಾ ಮುಖ್ಯ ಸರ್ಕಲ್ ಮತ್ತು ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ನಗರದ ಉಪಾಧ್ಯಕ್ಷ ಶರಣು ಬಿ.ದ್ಯಾಮಾ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಮೇಯರ್ ವಿಶಾಲ ದರ್ಗಿ ಅವರಿಗೆ ಮನವಿ ಸಲ್ಲಿಸಿದರು.

ಕಲಬುರಗಿ ನಗರದಲ್ಲಿ ಅತೀ ಹೆಚ್ಚು ರಣ ಬಿಸಿಲು ಪ್ರಾರಂಭವಾಗಿರುವ ನಿಮಿತ್ಯ ಸಮಸ್ತ ಕಲಬುರಗಿ ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿನ ಹಾಹಾಕಾರ ಎದುರಿಸುತ್ತಿದ್ದು, ಇದರಿಂದ ರಣ ಬಿಸಿಲಿನಿಂದ ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳಲು ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಕಲಬುರಗಿ ನಗರದಲ್ಲಿರುವ ಮುಖ್ಯ ಸರ್ಕಲ್‍ಗಳಲ್ಲಿ ಹಾಗೂ ಮುಖ್ಯ ಸ್ಥಳಗಳು, ಜನ ಸಂದಣೆ ಇರುವ ಸ್ಥಳಗಳಲ್ಲಿ ತಮ್ಮ ಮಹಾನಗರ ಪಾಲಿಕೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಮತ್ತು ಮುಖ್ಯ ರಸ್ತೆಗಳಿಗೆ ನೀರು ಸಿಂಪಡಿಸುವ ಕಾರ್ಯಗಳನ್ನು ಮಾಡುವುದರಿಂದ ಪ್ರಯಾಣಿಕರಿಗೆ ಮತ್ತು ಪಾದಾಚಾರಿಗಳಿಗೆ ಬಹಳ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿ ಕಾಪಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕ.ಕ.ಪ್ರಧಾನ ಕಾರ್ಯದರ್ಶಿ ಗೋಪಾಲ ನಾಟಿಕಾರ, ಕ.ಕ.ಸಂಚಾಲಕ ಮನೋಹರ ಬಿರನೂರ, ಕ.ಕ.ಉಪಾಧ್ಯಕ್ಷ ಸಂತೋಷ ಚೌಧರಿ, ಜಿಲ್ಲಾಗೌರವ ಅಧ್ಯಕ್ಷ ಮಂಜು ಕುಸನೂರ, ತಾಲೂಕ ಅಧ್ಯಕ್ಷ ವಿಜಯಕುಮಾರ ಅಂಕಲಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here