ಕಲಬುರಗಿ: ಸಪ್ತ ನೇಕಾರ ಸೇವಾ ಕೇಂದ್ರದಲ್ಲಿ ಸದ್ಗುರು ಶ್ರೀದಾಸಿಮಯ್ಯ ಕಾನೂನು ಸಂಸ್ಥೆ ಅಡಿಯಲ್ಲಿ ಮಾದನ ಹಿಪ್ಪರಗಾದ ಆರಾಧ್ಯ ದೈವ ಶ್ರೀ ಶರಣ ಶಿವಲಿಂಗೇಶ್ವರ ಮಹಾರಥೋತ್ಸವ ನಿಮಿತ್ತ ಶರಣೋತ್ಸವ ಕಾರ್ಯಕ್ರಮ ಜರುಗಿತು.
119 ನೇ ಜಾತ್ರಾ ಮಹೋತ್ಸವ ಸಂಜೆ 6 ಗಂಟಗೆ ಜರುಗಲಿದೆ ಎಂದು ತಿಳಿಸಿದರು, ಮೊದಲಿಗೆ, ಕಾನೂನು ಸಂಸ್ಥೆಯ ತಾತ್ಕಾಲಿಕ ಸಂಚಾಲಕ ಜೇ. ವಿನೋದ ಕುಮಾರ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ, ಶರಣ ಶಿವಲಿಂಗೇಶ್ವರ ಪರಮಭಕ್ತರು ಹಾಗೂ ಶ್ರೀ ಚೌಡೇಶ್ವರಿ ಹಣಕಾಸು ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಜೇವೂರ್ ಶಾಂತಮಲಪ್ಪ ಮತ್ತು ಚನ್ನಮಲ್ಲಪ್ಪ ಆಗಮಿಸಿ ಮಾತನಾಡಿ ಶರಣ ಮಹಿಮೆ ಅರಿತು ಕೊಂಡು ಬಾಳಿದರೆ ಜೀವನ ಪಾವನ ವಾಗುತದೆ ಎಂದರು.
ಹಿಂದಿನ ಕಾಲದಲ್ಲಿ ಕರೋನಾ ದಂತೆ ಫೇಲ್ಗ ಬರುತ್ತಿತ್ತು, ಆಗ ಪೂಜೆ ಯಲ್ಲಿ ನಿರತ ಶರಣರ ಪೂಜೆ ಫಲದಿಂದ ಆ ಊರಿಗೆ ಮಹಾಮಾರಿ ರೋಗ ಬರದಂತೆ ತಡೆದು ಪವಾಡ ಮೆರೆದಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಷ್ಟಗಿ ಶಿವಲಿಂಗಪ್ಪಾ ನವರು ಸಂಜೆ ಮಹಾ ಮಹೋತ್ಸವ ಜರಗುತದೆ ಎಲ್ಲರೂ ಆಗಮಿಸಿ ದರ್ಶನ ಪಡೆದು ಪುನೀತ ರಾಗಲು ಕೋರಿದರು. ಕೊನೆಯಲ್ಲಿ ಸತೀಶ ಜಮಖಂಡಿ ಯವರು ವಂದಿಸಿದರು. ಕಾರ್ಯಕ್ರಮದಲ್ಲಿ ಗೀತಾಂಜಲಿ ಮೈನಾಳೆ, ಸುಜಾತಾ ಅಕ್ಕಾ, ಡಾ. ಬಸವರಾಜ ಚನ್ನಾ, ಮ್ಯಾಳಗಿ ಚಂದ್ರಶೇಖರ್, ನಿತ್ಯಾನಂದ ಭಂಡಿ, ಗುರುನಾಥ ಆರೂಢ, ವಿಜಯಕುಮಾರ ತ್ರೀವೇದಿ, ರಾಜಗೋಪಾಲ ಭಂಡಾರಿ ಇತರರು ಉಪಸ್ಥಿತರಿದ್ದರು.