ಸಮಾಜದಲ್ಲಿ ಮೇಲು ಕೀಳು ಎನ್ನುವುದನ್ನು ಎಲ್ಲರು ಬಿಡಬೇಕು

0
20

ಸುರಪುರ: ನಗರದ ತಾಲೂಕು ಪಂಚಾಯತ ಕಚೇರಿ ಆವರಣದಲ್ಲಿ ಜಿಪಂ ಯಾದಗಿರಿ, ತಾಪಂ ಸುರಪುರ, ವಿವಿಧ ಗ್ರಾಪಂಗಳು ಸಂಯುಕ್ತಾಶ್ರಯದಲ್ಲಿ ಬಲಶೆಟ್ಟಿಹಾಳದ ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಮತ್ತು ವಿವಿಧೋದ್ದೇಶ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಸ್ಪøಶ್ಯತೆ ನಿವಾರಣೆ ಕುರಿತು ಜಾಗೃತಿ ಮೂಡಿಸುವ ಬೀದಿನಾಟಕ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಇಓ, ಸಮಾಜದಲ್ಲಿ ಯಾರು ಮೇಲಲ್ಲ, ಯಾರು ಕೀಳಲ್ಲ ಎಲ್ಲರು ಒಂದೇ ಆಗಿದ್ದಾರೆ,ಮೇಲು ಕೀಳು ಎನ್ನುವುದನ್ನು ಎಲ್ಲರು ಅದನ್ನು ಮನಸ್ಸಿನಿಂದ ತೆಗೆದು ಸಮಾಜದಲ್ಲಿ ಎಲ್ಲರೂ ಸರಿ ಸಮಾನರು. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹಕ್ಕುಗಳಿವೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

Contact Your\'s Advertisement; 9902492681

ತಾ.ಪಂ ಇಓ ಬಸವರಾಜ ಸಜ್ಜನ್ ಮಾತನಾಡಿ, ಅಸ್ಪøಶ್ಯತೆ ನಿವಾರಣೆ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಕಾರ್ಯಕ್ರಮಕ್ಕೆ ಸಿಇಓ ಅವರು ಚಾಲನೆ ನೀಡಿದ್ದು,ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಈ ನಾಟಕ ಪ್ರದರ್ಶನ ಮಾಡಲಾಗುವುದು. ಈ ಬೀದಿ ನಾಟಕದಿಂದ ಬರುವ ಒಳ್ಳೆಯ ಸಂದೇಶವನ್ನು ನಾವು ಮನಸ್ಸಿನಲ್ಲಿಟ್ಟುಕೊಂಡು ಪಾಲನೆ ಮಾಡಬೇಕು. ಜೀವನದಲ್ಲಿ ನಮ್ಮ ಸಂವಿಧಾನ ಮೌಲ್ಯಗಳನ್ನು ಅಳವಡಿಸಿಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಂವಿಧಾನದ ಮೌಲ್ಯಗಳಲ್ಲಿರುವ ಸಮಾನತೆ ಸಮಾಜದ ಸಂದೇಶವನ್ನು ಪಾಲಿಸಬೇಕು. ಪ್ರತಿಯೊಬ್ಬರಿಗೂ ಏನೇನು ಹಕ್ಕುಗಳಿವೆ ಎಂಬುದನ್ನು ತಿಳಿದುಕೊಂಡು ಸದ್ಭಳಿಕೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಸೌಹಾರ್ದತೆಯಿಂದ ಜೀವನ ಸಾಗಿಸಬೇಕು. ಸಮಾಜದಲ್ಲಿ ಮುಂದೆ ಬರಲು ಎಲ್ಲರು ಪ್ರಯತ್ನಿಸಬೇಕು ಎಂದರು.

ಈ ಸಂದರ್ಭದಲ್ಲಿ ತಾ.ಪಂ ಎಡಿ ರವಿಚಂದ್ರ ವೇದಿಕೆಯಲ್ಲಿದ್ದರು ವಿವಿಧ ಗ್ರಾಪಂಗಳ ಪಿಡಿಒ,ಕಾರ್ಯದರ್ಶಿಗಳು, ಸಾರ್ವಜನಿಕರು, ಬಲಶೆಟ್ಟಿಹಾಳದ ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಮತ್ತು ವಿವಿಧೋದ್ದೇಶ ಟ್ರಸ್ಟ್ ಅಧ್ಯಕ್ಷ ಜುಮ್ಮಣ್ಣ ಗುಡಿಮನಿ, ಕಲಾವಿದರಾದ ಉಮೇಶ, ಶರಣಯ್ಯಸ್ವಾಮಿ, ರಾಮಣ್ಣ, ಲಲಿತಾ, ಶಶಿಕುಮಾರ, ಗೌರಮ್ಮ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here