ಕಲಬುರಗಿ: ಶಿಕ್ಷಣ ಮಾನವನಾಗಿ ಮಾಡಿದರೆ ಸಂಸ್ಕಾರದ ಶಿಕ್ಷಣ ಮಹಾ ಮಾನವನಾಗಿ ಮಾಡುತ್ತದೆ ಎಂದು ಶ್ರೀನಿವಾಸ ಸರಡಗಿ ಪೂಜ್ಯರಾದ ಡಾ. ರೇವಣಸಿದ್ಧ ಶಿವಾಚಾರ್ಯರು ಹೇಳಿದರು.
ನಗರದ ತಾಜ ಸುಲ್ತಾನಪುರ ರಸ್ತೆಯಲ್ಲಿರುವ ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಇಂದಿನ ಸಂದರ್ಭದಲ್ಲಿ ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಸದೃಢ ಸಮಾಜ ಕಟ್ಟುವ ಕಾರ್ಯ ಸಾಗಬೇಕು.ಅದರಂತೆ ಹೆಸರಿಗೆ ತಕ್ಕಂತೆ ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯು ಒಳ್ಳೆಯ ಶಿಕ್ಷಣ ನೀಡುವುದರೊಂದಿಗೆ ಈ ಭಾಗದ ವಿದ್ಯಾರ್ಥಿಗಳಿಗೆ ಬೇಡಿದ್ದನ್ನು ನೀಡುವ “ಕಲ್ಪವೃಕ್ಷ” ಸಂಸ್ಥೆಯಾಗಿದೆ ಎಂದು ನುಡಿದರು.
ಸಂಸ್ಥೆಯ ಅಧ್ಯಕ್ಷರಾದ ರವಿಕುಮಾರ ಶಹಾಪುರಕರ ಮಾತನಾಡುತ್ತಾ ಕಲ್ಯಾಣ ಕರ್ನಾಟಕ ಭಾಗದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಬೇರೆ ಬೇರೆ ರಾಷ್ಟ್ರದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಶಿಕ್ಷಣ ಸಾಧಕರ ಸ್ವತ್ತಾಗಿದೆ,ಮೈಗಳ್ಳರ ಸ್ವತ್ತಲ್ಲ ಸೇವಾ ಮನೋಭಾವನೆಯಿಂದ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಬೇ ಬೇಕೆಂಬ ಉದ್ದೇಶದಿಂದ ಸಂಸ್ಥೆ ಸ್ಥಾಪಿಸಿ ತಮ್ಮೆಲ್ಲರ ಸಹಕಾರದಿಂದ ದಶಮಾನೋತ್ಸವ ಆಚರಿಸಲಾಗುತ್ತಿರುವುದು ಹೆಮ್ಮೆಯ ವಿಷಯ ತಮ್ಮ ಸಲಹೆ, ಸಹಕಾರ ಮಾರ್ಗದರ್ಶನ ಮುಂದುವರೆಯಲೆಂದು ವಿನಂತಿಸಿಕೊಂಡರು.
ಮುಖ್ಯ ಅತಿಥಿಗಳಾಗಿ ಮಹಾಂತೇಶ ರೂಡಗಿ, ಮಲ್ಲಣ್ಣ ಮಡಿವಾಳ, ಸುಭಾಷ ಓಗಿ, ತಾಜ ಸುಲ್ತಾನಪೂರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಾಜಿದಾ ಬೇಗಂ, ಉಪಾಧ್ಯಕ್ಷರಾದ ಸಂಜು ಕುಮಾರ ಜವರಕರ್, ಮಂಜುನಾಥ ರಾಠೋಡ, ಶಿವಾನಂದ ರಾಠೋಡ, ಶಿಕ್ಷಣ ಅಧಿಕಾರಿ ದೇವಿಂದ್ರಪ್ಪ ಆಗಮಿಸಿದರು. ಅಧ್ಯಕ್ಷತೆಯನ್ನು ಶಶಿಕುಮಾರ ಬಿ. ಶಹಾಪೂರಕರ ವಹಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆಗೆಯುತ್ತಿರುವ ಗುಲ್ಬರ್ಗಾ ವಿಶ್ವವಿದ್ಯಾಲಯ ನಿವೃತ್ತ ಸಿಬ್ಬಂದಿಯಾದ ರೇವಣಸಿದ್ದಯ್ಯ ಸ್ವಾಮಿ ಹೊಸಮಠ, ಜನಪರ ಹೋರಾಟಗಾರ, ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ, ಸರಕಾರಿ ನೌಕರರ ಚಾಲಕರ ಜಿಲ್ಲಾ ಸಂಚಲಕರಾದ ಗುರುಶಾಂತಪ್ಪ ಓಗಿ, ನಿವೃತ್ತ ಶಿಕ್ಷಕರಾದ ಜಯಶ್ರೀ ಎಸ್ ಹಿರೇಮಠ, ಶಿಕ್ಷಕರಾದ ಶಾಂತಾಬಾಯಿ ಎಂ ಪರೀಟ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಮಮತಾ ಬೆನಕನಳ್ಳಿ, ನಾಗರಾಜ ಶಹಾಪುರಕರ್, ಶರಣು ಹಂಗರಗಿ, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಿಂದ ಮಕ್ಕಳ ಪ್ರತಿಭೆ ಅನಾ ವರ್ಣ ಗೊಳಿಸಲಾಯಿತು