ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಗೆ ಪ್ರಿಯಾಂಕ್ ಖರ್ಗೆ ಆಗ್ರಹ

0
132

ಕಲಬುರಗಿ: ಕರ್ನಾಟಕ ವಿಮೋಚನಾ ದಿನಾಚರಣೆ ಮಾಡುವಂತೆ ರಾಜ್ಯ ಸರಕಾರದ ಆದೇಶ ಹೊರಡಿಸಿದ್ದು‌ ಇದು ಬಸವಣ್ಣನವರನ್ನು ಸೇರಿದಂತೆ ಇತರೆ ಶರಣರಿಗೆ ಮಾಡಿದ ಅಪಚಾರವಾಗಿದೆ ಎಂದು ಬಸವಾಭಿಮಾನಿಗಳು, ಸ್ವಾತಂತ್ರ್ಯ ಹೋರಾಟಗಾರರು, ನಾಗರಿಕರು ಹಾಗೂ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಈ ಕೂಡಲೇ ಸರಕಾರ ಸದರಿ ಆದೇಶವನ್ನು ಹಿಂಪಡೆದು ನಾಡಿನ ಬಸವಾಭಿಮಾನಿಗಳ ಹಾಗೂ ನಾಗರಿಕರ ಭಾವನೆಗಳಿಗೆ ಧಕ್ಕೆಯಾಗದಂತೆ ಹೊಸ ಆದೇಶ ಹೊರಡಿಸಿ ಕಲ್ಯಾಣ ಕರ್ನಾಟಕದ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಒತ್ತಾಯ ಪಡಿಸಿರುವ ಶಾಸಕರು, ಸರಕಾರದ ಆದೇಶದಂತೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಎಂದರೆ ಶರಣರ ವಿಮೋಚನೆ ಎಂಬ ಭಾವನೆ ಬರುತ್ತಿದೆ‌ ಇದು 12 ನೇ ಶತಮಾನದ ಮಹಾಪುರುಷ ಬಸವಣ್ಣನವರು ಸೇರಿರಂತೆ ಇತರ ಶರಣರಿಗೆ ಅವಮಾನ ಮಾಡಿದಂತೆ ಹಾಗಾಗಿ ಕೂಡಲೇ ಆದೇಶ ಹಿಂಪಡೆದು ಹೊಸ ಆದೇಶ ಮಾಡುವಂತೆ ಅವರು ಒತ್ತಾಯಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here