ಕಲಬುರಗಿ: ಗ್ರಾಮೀಣ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಕಳ್ಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿ ಓರ್ವ ಕಳ್ಳನನ್ನು ಬಂಧಿಸಿ ಚಿನ್ನ, ಬೆಳ್ಳಿ ವಶಪಡಿಸಿಕೊಂಡಿದ್ದಾರೆ.
ಉಪ ಪೊಲೀಸ್ ಆಯುಕ್ತರಾದ ಕಿಶೋರ್ ಬಾಬು ನಿರ್ದೇಶನದ ಎಸಿಪಿ ಸುಬೇದಾರ ಮತ್ತು ಪೊಲೀಸ್ ಆರಕ್ಷಕಧಿಕ್ಷ ಸೋಮಲಿಂಗ್ ಅವರು ರಚಿಸಿದ ತಂಡದ ಪಿ.ಎಸ್.ಐ ಎಸ್.ಎಸ್. ದೊಡ್ಡಮನಿ, ಅಪರಾಧ ವಿಭಾಗದ ಪಿ.ಎಸ್.ಐ ಹುಸೇನ್ ಬಾಷಾ, ಅಂಬಾದಾಸ್, ಕಿಶೋರ್, ರಾಜು ಸೇರಿದಂತೆ ಸಿಬ್ಬಂದಿ ವರ್ಗ ಕಾರ್ಯಾಚರಣೆ ನಡೆಸಿ ಬಂಧಿತ ಕಳ್ಳ ಆರೋಪಿ ಚಾಂದ ಪಾಶಾ(20) ಬಂಧಿಸಿದ್ದಾರೆ.
ಚಾಂದಪಾಶ ನಗರದ ಜಫರಾಬಾದ ಕ್ರಾಸ್ ನ ಪಟೇಲ್ ಕಾಲೋನಿ ನಿವಾಸಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯಿಂದ 900 ಗ್ರಾಮ ಚಿನ್ನ ಹಾಗೂ 200 ಬೆಳ್ಳಿ ವಶಪಡಿಸಿಕೊಂಡು ಆರೋಪಗೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.