ಕಲಬುರಗಿ: ಜಸ್ಟಿಸ್ ಶಿವರಾಜ. ವಿ. ಪಾಟೀಲ ಫೌಂಡೇಶನ (ರಿ) ಮತ್ತು ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ಅಂತರಶಾಲಾ ವಿಷಯಾಧಾರಿತ ರಸಪ್ರಶ್ನೆ” ಕಾರ್ಯಕ್ರಮವನ್ನು ಸರ್ವಜ್ಞ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಐಐಟಿಯನ್ ಅಭಿಷೇಕ್ ಚನ್ನಾರಡ್ಡಿ ಪಾಟೀಲ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐ.ಎ.ಎಸ್., ಐ.ಪಿ.ಎಸ್., ನೀಟ್, ಜೆಇಇ, ಸಿಇಟಿ, ಕೆ.ಪಿ.ಎಸ್.ಸಿ. ಗಳಲ್ಲಿ ಕೇವಲ ಬಹುಆಯ್ಕೆ ಪ್ರಶ್ನೆಗಳಿರುವವು ಹಾಗಾಗಿ 10 ನೇ ತರಗತಿಯಿಂದಲೇ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸಿ ಕೊಳ್ಳಬೇಕೆಂಬ ಉದ್ದೇಶದಿಂದಲೇ ಈ ಹಂತದಲ್ಲಿಯೇ ಬಹು ವಸ್ತುನಿಷ್ಠ ಆಯ್ಕೆ ಪ್ರಶ್ನೆ (ಒ.ಅ.ಕಿ) ಗಳಿರುವ ರಸಪ್ರಶ್ನೆ ನಡೆಸಲಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಜ್ಞಾನ ವೃದ್ಧಿಸಿಕೊಳ್ಳಲು ಹಾಗೂ ಸ್ಪರ್ದಾ ಸಾಮಥ್ರ್ಯ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಸಹಾಯವಾಗುತ್ತದೆ. ಬೇರೆ-ಬೇರೆ ಶಾಲೆಗಳ ಮಕ್ಕಳ ಜೊತೆಗೆ ಭಾಗವಹಿಸುವುದರಿಂದ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುತ್ತದೆ ಎಂದರು.
ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಭಯಪಡದೆ ವಿಷಯನ್ನು ಚೆನ್ನಾಗಿ ಓದಿಕೊಳ್ಳಬೇಕು. ತಮ್ಮ ಶಿಕ್ಷಕರೊಂದಿಗೆ ಪಾಲಕರೊಂದಿಗೆ ಚರ್ಚೆ ಮಾಡಬೇಕು. ಪರೀಕ್ಷೆಯ ದಿನಾಂಕ ಮತ್ತು ಸಮಯವನ್ನು ಬರೆದು ಇಟ್ಟುಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕು. ನಾಳೆ ಪರೀಕ್ಷೆ ಇದ್ದಾಗ ಹಿಂದಿನ ದಿನ ಮಾತ್ರ ಹೆಚ್ಚಾಗಿ ಒತ್ತಡದಿಂದ ಓದದೇ ಮೊದಲಿನಿಂದೆಲೇ ನಿರಂತರವಾಗಿ ಓದಿ ಪರೀಕ್ಷೆಯ ಹಿಂದಿನ ದಿನದವೆರೆಗೆ ಎಲ್ಲವೂ ಓದಿ ಮುಗಿಸಿ ಪುನರಾವರ್ತನೆ ಮಾಡಿಕೊಂಡು ಹಿಂದಿನ ದಿನ ರಿಲ್ಯಾಕ್ಸ್ ಆಗಿದ್ದು ನಿರ್ಭಯದಿಂದ ಪರೀಕ್ಷೆ ಬರೆಯಿರಿ. ಉತ್ತಮ ಅಂಕದೊಂದಿಗೆ ಆರೋಗ್ಯದ ಕಡೆಗೂ ಗಮನ ಕೊಡಬೇಕು. ಏಕಾಗ್ರತೆ, ಕಠಿಣ ಪರಿಶ್ರಮ, ನಿರಂತರ ಪ್ರಯತ್ನ, ಗುರಿ ಸಾಧಿಸುವ ಛಲವಿದ್ದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ಉತ್ತಮ ನಡೆ-ನುಡಿ ಸಂಸ್ಕ್ರತಿಯನ್ನು, ಮಾನವೀಯ ಮಾಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಸತ್ಪ್ರಜೆಯಾಗಿ ಉತ್ತಮ ನಾಗರಿಕನಾಗಿ ಬಾಳಬೇಕೆಂದು ಪ್ರೇರೇಪಿಸಿದರು.
ಸರ್ವಜ್ಞ ಕಾಲೇಜಿನ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಮಾತನಾಡುತ್ತ, ವಿದ್ಯಾರ್ಥಿಗಳಿಗೆ ಪರೀಕ್ಷೆ ಹೇಗೆ ಎದುರಿಸಬೇಕೆಂದು ತಿಳಿಸುತ್ತಾ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ ವಿಷಯಗಳಲ್ಲಿ ವಸ್ತುನಿಷ್ಠ ರಸಪ್ರಶ್ನೆ ಪ್ರಶ್ರೆಗಳು ವಾರ್ಷಿಕ ಪರೀಕ್ಷೆಯ ಮಾದರಿಯಂತಿರುತ್ತವೆ. ಧೈರ್ಯದಿಂದ ಪರೀಕ್ಷಾ ಭಯಪಡದೆ ಎದುರಿಸಬೇಕು. ನಿಮ್ಮ ಶಾಲೆಗಳಲ್ಲಿ ಪೂರ್ವ ಸಿದ್ಧತಾ ಪರೀಕ್ಷೇಗಳು ತಪ್ಪದೇ ಬರೆಯಿರಿ ಮತ್ತು ತಪ್ಪಾದನ್ನು ಸರಿಪಡಿಸಿಕೊಳ್ಳಿ ನಂತರ ವಾರ್ಷಿಕ ಪರೀಕ್ಷೆ ಸರಳವಾಗಿ ಬರೆಯಬಹುದು ಎಂದರು.
ನ್ಯಾಯಮೂರ್ತಿ ಡಾ.ಶಿವರಾಜ. ವಿ. ಪಾಟೀಲ ಅವರು ಹೇಳುವಂತೆ “ ನಾವೇ ನಮ್ಮ ಜೀವನದ ಶಿಲ್ಪಿಗಳು” ಏನಾದರೂ ಸಾಧನೆ ಮಾಡಲೇಬೇಕು. ಇಂತಹ ಕಾರ್ಯಕ್ರಮ ನಿಮ್ಮ ಬದುಕು ರೂಪಿಸುವಲ್ಲಿ ಸಹಾಯಕ ವಾಗುವದರಿಂದ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಒಳ್ಳೆಯ ಸಂಸ್ಕಾರ ಸಂಸ್ಕøತಿಯನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬಾಳಬೇಕೆಂದು ಪ್ರೇರೇಪಿಸಿದರು.
ಒಟ್ಟಾರೆ 74 ಶಾಲೆಗಳಲ್ಲಿ 38-ಇಂಗ್ಲೀಷ ಮಾಧ್ಯಮ, 36-ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಪ್ರವೇಶ ಪರೀಕ್ಷೆ ಇಂಗ್ಲೀಷ, ವಿಜ್ಞಾನ, ಗಣಿತ ವಿಷಯಗಳಿಗೆ ಪರೀಕ್ಷೆ ತೆಗೆದುಕೊಂಡು, ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ಕನ್ನಡ ಮತ್ತು ಇಂಗ್ಲೀಷ ಮಾಧ್ಯಮ ವಿದ್ಯಾರ್ಥಿಗಳಿಗೆ ಬೇರೆ-ಬೇರೆಯಾಗಿ Inter School Subject Plus Quiz ಕಾರ್ಯಕ್ರಮ ಏರ್ಪಡಿಸಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ, ಬಹುಮಾನ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ 38 ಇಂಗ್ಲೀಷ್ ಮಾಧ್ಯಮದ ಶಾಲೆಗಳು, 36 ಕನ್ನಡ ಮಾಧ್ಯಮದ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು. ಎಸ್.ಎಂ.ರಡ್ಡಿ ಅಧ್ಯಕ್ಷರು ಜಸ್ಟಿಸ್ ಶಿವರಾಜ ಪಾಟೀಲ ಫೌಂಡೇಶನ, ಗೀತಾ ಪಾಟೀಲ, ಸಂಗೀತಾ ಅಭಿಷೇಕ ಪಾಟೀಲ, ಶ್ರೀಮತಿ ವಿನುತಾ ಆರ.ಬಿ., ಪ್ರಶಾಂತ ಕುಲಕರ್ಣಿ, ಕರುಣೇಶ ಹಿರೇಮಠ, ಸಿದ್ಧನಗೌಡ ಪಾಟೀಲ, ಪ್ರಭುಗೌಡ ಸಿದ್ದಾರಡ್ಡಿ ಹಾಗು ವಿಷಯ ಪರಿಣಿತರಾದ ಲಕ್ಷ್ಮೀ ಕುಲಕರ್ಣಿ, ಅಶೋಕ ಕಾಬಾ, ಕಾಂಚನಾ ದೇಶಪಾಂಡೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆಯ ಉತ್ತರಗಳನ್ನು ವಿವರಿಸಿದರು. ವಿಜಯಕುಮಾರ ನಾಲವಾರ, ದತ್ತಾತ್ರೇಯ ಕುಲಕರ್ಣಿ, ಶಿವಾನಂದ ಕ್ವಿಜ್ ನಿರ್ವಹಿಸಿದರು, ಗುರುರಾಜ ಕುಲಕರ್ಣಿ ನಿರೂಪಿಸಿದರು.
ಬಹುಮಾನ ವಿಜೇತ ಶಾಲೆಗಳು:
ಇಂಗ್ಲೀಷ ಮಾಧ್ಯಮ: –
1. ಪ್ರಥಮ ಸ್ಥಾನ 25, 000/ ರೂ :- ಎಸ್.ಬಿ.ಆರ್. ಪಬ್ಲಿಕ್ ಸ್ಕೂಲ, ಕಲಬುರಗಿ
2. ದ್ವಿತೀಯ ಸ್ಥಾನ 15, 000/ ರೂ :- ಡಿ.ಎ.ವಿ ಪಬ್ಲಿಕ್ ಸ್ಕೂಲ, ವಾಡಿ
3. ತೃತೀಯ ಸ್ಥಾನ 10, 000/ ರೂ :- ಅಪ್ಪ ಪಬ್ಲಿಕ್ ಸ್ಕೂಲ, ಕಲಬುರಗಿ
ಕನ್ನಡ ಮಾಧ್ಯಮ:-
1. ಪ್ರಥಮ ಸ್ಥಾನ 25, 000/ ರೂ :- ಭೋಗೇಶ್ವರ ಪ್ರೌಢಶಾಲೆ, ಕಲಬುರಗಿ
2. ದ್ವಿತೀಯ ಸ್ಥಾನ 15, 000/ ರೂ :- ಚೌಡಾಪುರಿ ಹಿರೇಮಠ ಪ್ರೌಢಶಾಲೆ, ಕಲಬುರಗಿ
3. ತೃತೀಯ ಸ್ಥಾನ 10, 000/ ರೂ :- ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಕಮಲಾಪುರ