ವರ್ಚುವಲ್ ಕಾರ್ಯಕ್ರಮದ ಮೂಲಕ ಪ್ರಧಾನಿಯವರಿಂದ ಸಿಯುಕೆಯ ಶೈಕ್ಷಣಿಕ ಕಟ್ಟಡಗಳ ಲೋಕಾರ್ಪಣೆ

0
21

ಕಲಬುರಗಿ: “2047ರಲ್ಲಿ ಭಾರತ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಆಚರಿಸಿಕೊಳ್ಳಲಿದ್ದು, ಆ ಹೊತ್ತಿಗೆ ದೇಶವನ್ನು ವಿಶ್ವಗುರು ಸ್ಥಾನಕ್ಕೆ ಉನ್ನತೀಕರಿಸುವ ಭವಿಷ್ಯದ ಹೊಣೆಗಾರಿಕೆ ದೇಶದ ಯುವಕರ ಮೇಲಿದೆ” ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಅವರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಸಿಯುಕೆಯ ವಿವಿಧ ಶೈಕ್ಷಣಿಕ ಕಟ್ಟಡಗಳ ವರ್ಚುವಲ್ ಕಾರ್ಯಕ್ರಮದ ಮೂಲಕ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಅವರು ಮುಂದುವರೆದು ಮಾತನಾಡಿ “ದೇಶದ ಯುವಕರ ಶಕ್ತಿಯ ಮೇಲೆ ಪ್ರಧಾನಿ ಮೋದಿ ಅವರಿಗೆ ವಿಪರೀತ ವಿಶ್ವಾಸವಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಮಂಡನೆಯಾದ ಮಧ್ಯಂತರ ಮುಂಗಡ ಪತ್ರದಲ್ಲಿ ಸಂಶೋಧನೆ ಮತ್ತು ಅನ್ವೇಷಣಾ ಕ್ಷೇತ್ರದಲ್ಲಿ ಯುವಕರು ತಮ್ಮ ಪ್ರತಿಭೆ ಅನಾವರಣಗೊಳಿಸಲು ಅನುಕೂಲ ಆಗುವಂತೆ ಒಂದು ಲಕ್ಷ ಕೋಟಿ ರೂ. ಅನುದಾನ ಮೀಸಲಿರಿಸಿದ್ದಾರೆ. ಹಾಗಾಗಿ, ಯುವಕರು ದೇಶಕ್ಕಾಗಿ ತಮ್ಮ ಪರಿಶ್ರಮದ ಮೂಲಕ ಸಕಾರಾತ್ಮಕ ಕೊಡುಗೆ ನೀಡಬೇಕು” ಎಂದು ಕಿವಿಮಾತು ಹೇಳಿದರು.

ಮತ್ತಿಷ್ಟು ಮಾತನಾಡಿದ ಅವರು “ಇಂದು ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ನಮ್ಮ ಜಿಡಿಪಿಯ ಬೆಳವಣಿಗೆ ಜಗತ್ತಿನ ಗಮನ ಸೆಳೆಯುತ್ತಿದೆ. ಇದಕ್ಕೆ ಪೂರಕವಾಗಿ 2 ಲಕ್ಷ 60 ಸಾವಿರ ತಜ್ಞರು ಹಾಗೂ ಸಾರ್ವಜನಿಕ ಕ್ಷೇತ್ರದ ಪರಿಣತರಿಂದ ಸಲಹೆಗಳನ್ನು ಪಡೆದು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಇದರಿಂದಾಗಿ, ದೇಶದ ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಗುಣಮಟ್ಟದ ಶಿಕ್ಷಣ ದೊರಕುವಂತಾಗಿದೆ. ಇದೇ ಮಾನದಂಡದ ಮೇಲೆ ದೇಶ 2047ರ ಹೊತ್ತಿಗೆ ಭಾರತದ ವಿಶ್ವಗುರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಭಾರತದ ನಳಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳಲ್ಲಿ ಅಪಾರ ಜ್ಞಾನ ಬೋಧಿಸಲಾಗುತ್ತಿತ್ತು. ಭಾರತೀಯ ವಿಜ್ಞಾನ, ಸಂಸ್ಕøತಿ, ಅಧ್ಯಾತ್ಮ, ಯೋಗ ಹಾಗೂ ಗಣಿತಶಾಸ್ತ್ರ, ಚಿಕಿತ್ಸಾ ಕ್ಷೇತ್ರದಲ್ಲಿ ಭಾರತದ ಕೊಡುಗೆ ಇತಿಹಾಸದಲ್ಲಿ ಮಹೋನ್ನತ ಸ್ಥಿತಿಯಲ್ಲಿತ್ತು. ಹಾಗಾಗಿ, ಅಂದು ವಿಶ್ವಗುರು ಆಗಿದ್ದ ಭಾರತ ಮುಂದಿನ 25 ವರ್ಷಗಳಲ್ಲಿ ಮತ್ತೊಮ್ಮೆ ವಿಶ್ವಗುರು ಆಗಿ ಹೊರಹೊಮ್ಮಲಿದೆ” ಎಂದು ಸಚಿವ ಖೂಬಾ ಹೇಳಿದರು.

“ನಮ್ಮ ಸಂಸ್ಕೃತ ಶ್ಲೋಕಗಳಲ್ಲಿ ಭೂಮಿಯ ಆಕಾರ, ವೈಮಾನಿಕ ತಂತ್ರಜ್ಞಾನದ ಉಲ್ಲೇಖವಿದೆ. ಇದರಜ್ಞಾನ ನಮಗೆ ಬಹಳ ಉಪಯೋಗಕಾರಿಯಾಗಿದೆ ಎಂದು ಚಂದ್ರಯಾನ-3 ಯಶಸ್ವೀ ಉಡಾವಣೆ ಬಳಿಕ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ ಸ್ವತಃ ಅಂದಿನ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸದ್ದಾರೆ” ಎಂದು ಸಚಿವ ಖೂಬಾ ಹೇಳಿದರು.

ಕಳೆದ 50 ವರ್ಷಗಳಲ್ಲಿ ದೇಶ ಕಂಡ ಅಭಿವೃದ್ಧಿಗೆ ಹೋಲಿಸಿದರೆ, ಕೇವಲ 10 ವರ್ಷಗಳ ತಮ್ಮ ಕಾರ್ಯಾವಧಿಯಲ್ಲಿ ಪ್ರಧಾನಿ ಮೋದಿ, ದೇಶವನ್ನು ದುಪ್ಪಟ್ಟು ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಿದ್ದಾರೆ. ಶೈಕ್ಷಣಿಕ ಸಂಸ್ಥೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಎರಿಕೆಯಾಗಿದೆ” ಎಂದು ಅವರು ಹೇಳಿದರು.

ಸಿಯುಕೆ ಉಪಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಮಾತನಾಡಿ “ಸುಮಾರ 84 ಕೋಟಿ ರೂ ಗಳ್ಲಿ ಅತ್ಯಾಧುನಿಕ ತಂತ್ರಜ್ಞಾನ ಇಂಜಿನಿಯರಿಂಗ್ ಲ್ಯಾಬ್, ಇನ್ ಸ್ಟ್ರೂಮೆಂಟೇಷನ್ ಸೆಂಟರ್, ಕ್ಲಾಸ್ ರೂಮ್ ಕಾಂಪ್ಲೆಕ್ಸ್, ಇನ್ಕ್ಯೂಬೇಷನ್ ಮತ್ತು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಗಳನ್ನುನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇವುಗಳ ಸದುಪಯೋಗ ಪಡಿಸಿಕೊಂಡು ಉತ್ತಮ ಸಂಶೋಧನೆ ಮತ್ತು ಕಲಿಕೆ ಮಾಡಬೇಕೆಂದು” ಅವರು ಹೇಳಿದರು.

“ಮಾನ್ಯ ಕೇಂದ್ರ ಮಂತ್ರಿ ಭಗವಂತ ಖೂಬಾ ಅವರು ಸಿಯುಕೆಯಲ್ಲಿ ಒಪನ್ ಜಿಮ್ ನಿರ್ಮಾಣ ಮಾಡಿಕೊಡುವರು ಅದರ ಕಾರ್ಯ ನಾಳೆಯಿಂದಲೇ ಪ್ರಾರಂಭವಾಗಲಿದ್ದು ಒಂದು ತಿಂಗಳಲ್ಲಿ ಕಾಮಗಾರಿ ಮುಗಿಸಲಾಗುವುದೆಂದು” ಮಾನ್ಯ ಕುಲಪತಿ ಪೆÇ್ರ. ಬಟ್ಟು ಸ್ತಯನಾರಾಯಣ ಹೇಳಿದರು.

ಇದೆ ಸಂದರ್ಭದಲ್ಲಿ ವಿಶ್ವ ವಿದ್ಯಾಲಯದ ಇಂಜಿನಿಯರ್ ಇಷ್ಟಲಿಂಗಪ್ಪಾ ಮಹಾಗಾಂಕರ ಹಾಗು ಇತರ ಇಂಜಿನಿಯರರನ್ನು ಸನ್ಮಾನಿಸಲಾಯಿತು.

ಕುಲಸಚಿವ ಪ್ರೊ.ರ. ಆರ್ ಆರ್ ಬಿರಾದಾರ ಅವರು ಎಲ್ಲರನ್ನೂ ವಂದಿಸಿದರು. ಡಾ.ಅಂಕಿತಾ ಸತ್ಪತಿ ಹಾಗೂ ಡಾ.ಸ್ವಪ್ನಿಲ್ ಚಾಪೆಕರ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ಜಯದೇವಿ ಜಂಗಮಶೇಟ್ಟಿ, ಡಾ. ರವಿಕಿರಣ ನಾಕೊಡ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದರು. ಸಮಾರಂಭದಲ್ಲಿ ಕ್ಯಾಂಪಸ್ ಅಭಿವೃದ್ಧಿ ಅಧಿಕಾರಿ ಪ್ರೊ.ರ. ಚನ್ನವೀರ ಆರ್ ಎಂ, ಹಣಕಾಸು ಅಧಿಕಾರಿ ಕೊಟಾ ಸಾಯಿ ಕೃಷ್ಣ, ಪ್ರೊ.ರ. ಪುμÁ್ಪ ಸವದತ್ತಿ, ಪ್ರೊ.ರ. ಬಸವರಾಜ ಡೊಣೂರ, ಪ್ರೊ.ರ. ವಿಕ್ರಮ ವಿಸಾಜಿ, ಪ್ರೊ.ರ. ರವಿಂದ್ರ ಹೆಗಡಿ, ಪ್ರೊ.ರ. ಗಣೇಶ ಪವಾರ, ಎಲ್ಲಾ ಡಿನರು, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಆಡಳಿತಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here