ಲಕ್ಷಾಂತರ ರೂ. ಅವ್ಯವಹಾರ: ಆರೋಪ

0
29

ಕಲಬುರಗಿ: ಇಲ್ಲಿನ ಪ್ರಸಿದ್ದ ದೇವಸ್ಥಾನಗಳಲ್ಲಿ ಭಕ್ತಾದಿಗಳಿಂದ ಪಡೆದ ಲಕ್ಷಾಂತರ ರೂಪಾಯಿ ದೇಣಿಗೆ ಹಣವನ್ನು ಸರಕಾರಕ್ಕೆ ನೀಡದೆ ಅರ್ಚಕರಿಗೆ ನುಂಗಿ ನೀರು ಕುಡಿಯುತ್ತಿದ್ದಾರೆ ಎಂದು ಡಿ ಎಸ್ ಎಸ್ ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಆರೋಪಿಸಿದ್ದಾರೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಅದಿನಿಯಮ 2011 ಸೆಕ್ಷನ್ 25ರನ್ವಯ ಕಲಬುರಗಿ ಜಿಲ್ಲೆಯಲ್ಲಿ ಎ ಪ್ರವರ್ಗದ ದೇವಸ್ಥಾನಗಳಾದ ಗಣಗಾಪುರ ದತ್ತಾತ್ರೇಯ ದೇವಸ್ಥಾನ, ಕೋರವಾರದ ಅಣವೀರಭದ್ರೇಶ್ವರ ದೇವಸ್ಥಾನ, ಚಿತ್ತಾಪುರ ನಾಗಾವಿ ಯಲ್ಲಮ್ಮಾ ದೇವಿ ದೇವಸ್ಥಾನ, ಮೋತಕಪಲ್ಲಿಯ ಬಲಭೀಮಸೇನ ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಯಲ್ಲಿವೆ ಈ ದೆವಸ್ಥಾನದ ನಿರ್ವಹಣೆ ತಾಲೂಕಾ ಆಡಳಿತ ಅಧಿನಕ್ಕೆ ಒಳಪಟ್ಟಿರುತ್ತವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಪ್ರವರ್ಗ ಎ ಮತ್ತು ಬಿ ಅಧಿಸೂಚಕ ಸಂಸ್ಥೆಗಳಲ್ಲಿ ವಿವಿಧ ಸೇವೆಗಳನ್ನು ರಸೀದಿ ಪುಸ್ತಕಗಳ ಮೂಲಕ ನಿರ್ವಹಿಸಲಾಗುತ್ತಿದ್ದು, ಭಕ್ತರಿಗೆ ಸರಿಯಾದ ರೀತಿಯಲ್ಲಿ ರಸೀದಿಗಳನ್ನು ನೀಡದೇ ಲಕ್ಷಾಂತರ ರೂಪಾಯಿಗಳು ದುರುಪಯೋಗವಾಗುತ್ತಿರುವುದು ಹಾಗೂ ಕೆಲವು ದೇವಾಲಯಗಳಲ್ಲಿ ನಕಲಿ ರಸೀದಿ ಪುಸ್ತಕಗಳನ್ನು ಮುದ್ರಿಸಿಕೊಂಡು ವಿತರಣೆ ಮಾಡುತ್ತಾ ಭಕ್ತರನ್ನು ವಂಚಿಸುತ್ತಿರುವ ಹಾಗೂ ದೇವಾಲಯದ ನಿಧಿಗೆ ಅಪಾರ ನಷ್ಟ ಉಂಟು ಮಾಡಲಾಗುತ್ತಿರುವುದು ಹಲವು ಬಾರಿ ಬೆಳಕಿಗೆ ಬಂದಿವೆ ಎಂದರು.

ದುರಾದೃಷ್ಟ ಎಂದರೆ ಈ ವಿಷಯ ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಭಕ್ತಾದಿಗಳಿಂದ ದೇಣಿಗೆ ರೂಪದಲ್ಲಿ ಬಂದ ಹಣ ದೇವಸ್ಥಾನದ ‎ ಅಭಿವೃದ್ಧಿಗೆ ಬಳಸಬೇಕು ಇಲ್ಲಿ ಹುಂಡಿಯಲ್ಲಿನ ಹಣ ಅರ್ಚಕರ ಪಾಲಾಗುತ್ತಿದ್ದರು ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಜರುಗಿಸ ಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಸೂರ್ಯಕಾಂತ ಅಜಾದಪುರ್, ಕಪಿಲ್ ಸಿಂಗೆ, ಮಹೇಶ್ ಕೋಕಿಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here