ಸರ್ಕಾರದ ಸೇವೆಗಳು ಸಾರ್ವಜನಿಕರಿಗೆ, ಮಕ್ಕಳಿಗೆ ಸಕಾಲಕ್ಕೆ ಸೇವೆ ಒದಗಿಸಿ; ಜಿಲ್ಲಾಧಿಕಾರಿ ತರನ್ನುಮ್

0
9

ಕಲಬುರಗಿ; ಪ್ರತಿಯೊಬ್ಬರಿಗೆ ಸರ್ಕಾರದ ಸೇವೆಗಳು ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಸಕಾಲಕ್ಕೆ ಸರಿಯಾಗಿ ಸೇವೆ ಸೌಲಭ್ಯ ಸಿಗುವಂತೆ ನೋಡಿಕೊಂಡು ಮಕ್ಕಳಿಗೆ ಹಾಗೂ ಸಾಮಾನ್ಯ ಜನರಿಗೆ ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಸಲಹೆ ನೀಡಿದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಆರ್‍ಸಿಹೆಚ್ ಕಾರ್ಯಾಲಯದ ಹಾಗೂ ಜಿಮ್ಸ್ ಸರ್ಕಾರಿ ಆಸ್ಪತ್ರೆ ಕಲಬುರಗಿ ಇವರಗಳ ಸಂಯೋಗದಲ್ಲಿ ಜಿಲ್ಲಾ ಜಿಮ್ಸ್ ಆಸ್ಪತ್ರೆಯ, ಮಕ್ಕಳ ಪೌಷ್ಟಿಕ ಪುನಃಶ್ಚೇತನ ಕೇಂದ್ರ ( ಎನ್ ಆರ್ ಸಿ ) ಸಭಾಂಗಣದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮಕ್ಕೆ ಸಸಿಗೆ ನೀರು ಏರಿಯುವ ಮೂಲಕ ಚಾಲನೆ ನೀಡಿದರು.

Contact Your\'s Advertisement; 9902492681

ಮಕ್ಕಳ ತಾಯಿಯೊಂದಿಗೆ ಮಾತನಾಡಿ ಮಕ್ಕಳಿಗೆ ಸರಿಯಾದ ಸಮಯಕ್ಕೆ ಆರೋಗ್ಯದ ತಪಾಸಣೆ ಮಾಡಿಸಿಕೊಂಡು ಅವರ ಅರೋಗ್ಯದ ಗಮನಹರಿಸಿ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾಋಇ ಭಂವರ ಸಿಂಗ್ ಮೀನಾ ಅವರು ಮಾತನಾಡಿದರು.

ಅರ್ ಸಿ ಹೆಚ್ ಅಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ, ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾತನಾಡುತ್ತಾ ಅವರು ಬಿ ಎಸ್ ಕೆ ಯೋಜನೆ ಅಡಿಯಲ್ಲಿ 0-18 ವರ್ಷದ ಎಲ್ಲಾ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಪ್ರತಿ ಒಬ್ಬಳು ತಾಯಿಂದಿಯರು ತಮ್ಮ ಮಗುವಿನ ಅರೋಗ್ಯದ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿ ಹೆಚ್ಚು ಇರಬೇಕು.

ಪ್ರಪ್ರಥಮವಾಗಿ ಜಿಲ್ಲಾ ಮಟ್ಟದಲ್ಲಿ ತೊಂದರೆವುಳ್ಳ ಮಕ್ಕಳನ್ನು ಆರ್ ಬಿ ಎಸ್ ಕೆ ಶಿಬಿರದ ಮುಖಾಂತರ ಉಚಿತವಾಗಿ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಸರಕಾರದ ಯೋಜನೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಅಡಿಯಲ್ಲಿ ಆರ್ ಬಿ ಎಸ್ ಕೆ ತಂಡ ವೈದ್ಯಾಧಿಕಾರಿಗಳ ಮುಖಾಂತರ ಪತ್ತೆ ಹಚ್ಚಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಸಾರ್ವಜನಿಕರು ಆರೋಗ್ಯಕರ ಜೀವನ ನಡೆಸಲು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಶಿಬಿರದಲ್ಲಿ 366 ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗಿತ್ತು ಅಪೌಷ್ಟಿಕತೆ ಮಕ್ಕಳು 120, ತೀವ್ರ ಅಪೌಷ್ಟಿಕತೆ ಮಕ್ಕಳು 62, ಶ್ರವಣ ದೋಷ ಮಕ್ಕಳು 34, ಶಸ್ತ್ರಚಿಕಿತ್ಸೆ ಮಕ್ಕಳು 51, ಇ ಎನ್ ಟಿ , ಚಿಕಿತ್ಸೆ ಮಕ್ಕಳು 42, ಮೇಡಿಷನ್ ಸಾಮಾನ್ಯ ರೋಗಲಕ್ಷಣಗಳ ಮಕ್ಕಳು 60. ಇದರ ಲಾಭ ಪಡೆದುಕೊಂಡರು.

ಜಿಲ್ಲಾ ಶಸ್ತ್ರಜ್ಞರು ಮತ್ತು ಅಧಿಕ್ಷಕರು ಜಿಮ್ಸ್ ಆಸ್ಪತ್ರೆ ಯ ಡಾ. ಅಂಬಾರಾಯ ರುದ್ರವಾಡಿ , ಜಿಮ್ಸ್ ಮೆಡಿಕಲ್ ಮುಖ್ಯಸ್ಥರು ಡಾ. ಶಿವಕುಮಾರ ಜಿಲ್ಲಾ ಮಕ್ಕಳ ವಿಭಾಗದ ಮುಖ್ಯಸ್ಥರು ಡಾ. ರೇವಣಸಿದ್ದಪ್ಪ ಬೊಸ್ಗಿ. ತಾಲ್ಲೂಕು ಆರೋಗ್ಯಾಧಿಕಾರಿಗಳು ಡಾ. ಮಾರುತಿ ಕಾಂಬಳೆ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವಿಠ್ಠಲ ಪತ್ತಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮೇಶೇಕರ್ ಹಂಚಿನಳ, ಬಿಆರ್ ಸಿ ಪ್ರಕಾಶ ರಾಠೋಡ. ಬಿ ಐ ಇ ಆರ್ ಟಿ ಗಳು , ಸಿಡಿಪಿಓ ಭೀಮರಾಯ ಕಣ್ಣೂರ್ ಹಾಗೂ ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here