ಕಲಬುರಗಿ; ಮಾದಿಗ ಸಮಾಜದ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಹಾಗೂ ಈಗಾಗಲೇ ನಡೆಯುತ್ತಿರುವ ಸದನದಲ್ಲಿ ಎಲ್ಲಾ ಬೇಡಿಕೆಗಳನ್ನು ಮಂಡಿಸಿ ಜಾರಿಗೆ ತರಬೇಕೆಂದು ಡಾ.ಬಾಬು ಜಗಜೀವನರಾಮ ಅಭಿವೃದ್ಧಿ ಮತ್ತು ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಸಿ.ಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಎಪ್ರಿಲ್ 05ರಂದು ನಡೆಯುವ ಡಾ: ಬಾಬು ಜಗಜೀವನರಾಮ ಜಯಂತ್ಯೋತ್ಸವ ಸರ್ಕಾರಿ ರಜೆ ಘೋಷಣೆ ಮಾಡಬೇಕು, ರಾಜ್ಯ ಸರರ್ಕಾರ ಪಠ್ಯ ಪುಸ್ತಕದಲ್ಲಿ ಡಾ: ಬಾಬು ಜಗಜೀವನರಾಮ ಅವರ ಜೀವನ ಚರಿತ್ರೆ ಆಳವಡಿಸಬೇಕು. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಹೆಚ್ಚಿನ ಗುರಿಗಳನ್ನು ನಿಗಧಿಪಡಿಸಬೇಕು, ಸಚಿವರ ಸಾಂಸ್ಥಿಕ ಕೋಟಾದಡಿಯಲ್ಲಿಯು ಕೂಡ ಆದಿ ಜಾಂಬವ ನಿಗಮದಲ್ಲಿ ಬರುವ ಫಲಾನುಭವಿಗಳಿಗೆ ಹೆಚ್ಚಿನ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಡಾ. ಬಾಬು ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು, ಗುರಿಗಳನ್ನು ಹೆಚ್ಚಿಸಬೇಕು. ವಿವಿಧ ಯೋಜನೆಗಳನ್ನು ಕೇಂದ್ರ ಕಛೇರಿಯವರು ತಡೆ ಹಿಡಿದಿರುವದನ್ನು ಕೂಡಲೇ ಎಲ್ಲಾ ಯೋಜನೆಯ ಅನುದಾನ ಬಿಡುಗಡೆ ಮಾಡಬೇಕು. ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾ ಆಯ್ಕೆ ಸಮಿತಿಯಲ್ಲಿ ಹೆಚ್ಚುವರಿ ಆಗಿ ಆಯ್ಕೆ ಆದಂತಹ ಫಲಾನುಭವಿಗಳಿಗೆ ಡಾ. ಬಾಬು ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕೂಡಲೇ ಸಹಾಯಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಹಾಗೂ ಗುರಿಗಳು ಹೆಚ್ಚಿಸಿ ಶೋಷಿತರಿಗೆ ನ್ಯಾಯ ಒದಗಿಸಬೇಕು, ಪ.ಜಾ. ಜನಾಂಗದ ಸ್ಮಶಾನ ಭೂಮಿಗಳಿಗೆ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಸಚಿವರು ಹೆಚ್ಚಿನ ಅನುದಾನ ನೀಡಬೇಕು. ಪ.ಜಾ. ಜನಾಂಗದವರಿಗೆ ಸ್ಮಶಾನ ಭೂಮಿ ಖರೀದಿ ಮಾಡಲು ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಅನುದಾನ ನಿಗದಿ ಪಡಿಸಬೇಕು, ಈ ವಿಷಯ ಬಗ್ಗೆ ಸುಮಾರು ವರ್ಷಗಳಿಂದ ಜಿಲ್ಲಾಧಿಕಾರಿಗಳ ಮುಖಾಂತರ ನೂರಾರು ಬಾರಿ ಅರ್ಜಿ ಸಲ್ಲಿಸಿದರು. ಕೂಡಾ ಹೋರಾಟ ಮಾಡಿದರು ಕೂಡಾ ಯಾವುದೇ ಪ್ರಯೋಜನೆ ಆಗಿರುವುದಿಲ್ಲ ಎಂದರು.
ಈಗಲಾದರೂ ಅನುದಾನ ನೀಡಬೇಕೆಂದು ಪ.ಜಾ. ಜನಾಂಗದವರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ಡಾ: ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಬರುವ ಫಲಾನುಭವಿಗಳಿಗೆ ರಾಷ್ಟ್ರೀಕೃತ ಬ್ಯಾಂಕಗಳು ಸಾಲ ನೀಡುವುದಕ್ಕೆ ತುಂಬಾ ವಿಳಂಭ ಮಾಡುತ್ತಿದ್ದಾರೆ. ಸಂಬಂಧಪಟ್ಟ ಬ್ಯಾಂಕ ಮೇಲಾಧಿಕಾರಿಗಳಿಗೆ ಸಾಲ ನೀಡಲು ಕೂಡಲೇ ಸೂಚಿಸಬೇಕು.
ಈ ಕೆಳಕಂಡ ಕೊನೆಯ ಬೇಡಿಕೆ ಸದನ ಮುಗಿದಾದ ನಂತರ ಕಲಬುರಗಿ ಜಿಲ್ಲೆಯ ಮಾದಿಗ ಸಮಾಜದ ಮುಖಂಡರುಗಳಾದ ಕಾಂಗ್ರೇಸ್ ಪಕ್ಷಕ್ಕಾಗಿ ಸುಮಾರು ವರ್ಷಗಳಿಂದ ಅಭಿಮಾನ ಇಟ್ಟುಕೊಂಡು ನಿಷ್ಠೆ ಮತ್ತು ನಿಸ್ವಾರ್ಥ ಸಕ್ರೀಯವಾಗಿ ಪಕ್ಷಕಾಗಿ ದುಡಿಯುತ್ತಿರುವ ಮಾದಿಗ ಸಮಾಜದ ಮುಖಂಡರಿಗೆ ವಿಶೇಷವಾಗಿ ಕಲಬುರಗಿ ಜಿಲ್ಲೆಗೆ ನಿಗಮ ಮಂಡಳಿಯಲ್ಲಿ 2 ಅಧ್ಯಕ್ಷ ಸ್ಥಾನ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜು ಎಸ್. ಕಟ್ಟಿಮನಿ, ಮಾದಿಗ ಸಮಾಜ ಯುವ ಮುಖಂಡರಾದ ಹಣಮಂತ ಅಂಕಲಗಿಕರ್, ಮಲ್ಲಪ್ಪ ಚಿಗನೂರ, ಚಂದಪ್ಪ ಎಲ್. ಕಟ್ಟಿಮನಿ, ವೆಂಕಟೇಶ ನಾಟಿಕಾರ, ರವಿ ಸಿಂಗೆ, ಅನೀಲ ಡೊಂಗರಗಾಂವ, ಮಹೇಶ ಮೂಲಿಮನಿ, ಸಚಿನ್ ಆರ್.ಕಟ್ಟಿಮನಿ, ಕುಶಾಲ ಎಲ್.ಕಟ್ಟಮನಿ ಇದ್ದರು.