ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಭಾಷೆಯನ್ನು ಮತ್ತಷ್ಟು ಕಟ್ಟಿ ಬೆಳೆಸಿದ್ದಾರೆ

0
93

ಕಲಬುರಗಿ: ಪ್ರತಿಯೊಬ್ಬರೂ ಸಾಹಿತ್ಯಾಭಿಮಾನಿಗಳಾಗಬೇಕು. ಅದರಲ್ಲೂ ಯುವ ಜನತೆ ಕನ್ನಡ ಭಾಷೆ, ನಾಡು-ನುಡಿ, ಸಾಹಿತ್ಯವನ್ನು ಉಳಿಸಿ ಬೆಳೆಸಲು ಮುಂದಾಗಬೇಕು. 12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಭಾಷೆಯನ್ನು ಮತ್ತಷ್ಟು ಕಟ್ಟಿ ಬೆಳೆಸಿದ್ದಾರೆ. ನಾಡಿನ ಅನೇಕ ಕವಿ-ಸಾಹಿತಿಗಳು ನಾಡು-ನುಡಿಯ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಈ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಬಹು ದೊಡ್ಡ ಜವಾಬ್ದಾರಿ ಇಂದಿನ ಹೊಸ ಪೀಳಿಗೆಯ ಮೇಲಿದೆ ಎಂದು ಜಿಲ್ಲಾ ಕಸಾಪ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ಫೆ. 26 ಮತ್ತು 27 ರಂದು ನಗರದ ಡಾ. ಎಸ್ ಎಂ ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಕಲಬುರಗಿ ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನದಂಗವಾಗಿ ನಗರದ ಶ್ರೀ ಬಾಪೂಗೌಡ ದರ್ಶನಾಪೂರ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಬಿಯಂತರರಾದ ಶ್ರೀಮಂತ ಬೆಣ್ಣೂರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉದ್ಯಮಿ ಶಿವರಾಜ್ ಇಂಗಿನಶೆಟ್ಟಿ, ಖ್ಯಾತ ಚಿತ್ರ ಕಲಾವಿದ ಡಾ. ಅಯಾಜುದ್ದೀನ್ ಪಟೇಲ್, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಡಾ. ರೆಹಮಾನ್ ಪಟೇಲ್, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ಮಂಜುಳಾ ಸುತಾರ, ಎಚ್. ಎಸ್. ಬರಗಾಲಿ, ನಾಗನ್ನಾಥ ಯಳಸಂಗಿ, ಸಾಕ್ಷಿ ಸತ್ಯಂಪೇಟೆ, ಕಲ್ಯಾಣಕುಮಾರ ಶೀಲವಂತ, ಶಿವಶಂಕರ ವರ್ಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here