ಹಲಸಂಗಿ ಗೆಳೆಯರ ಸಾಹಿತ್ಯಿಕ, ಸಾಂಸ್ಕøತಿಕ ಕೊಡುಗೆ ಮಹತ್ವದ್ದು : ಡಾ. ಚೆನ್ನಪ್ಪ ಕಟ್ಟಿ

0
99

ಕಲಬುರಗಿ; ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ‘ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆ-3’ ಕಾರ್ಯಕ್ರಮ ಜರುಗಿತು.

ಸುವರ್ಣ ಕನ್ನಡ ಪಾಕ್ಷಿಕ ಪತ್ರಿಕೆ ಬಿಡುಗಡೆಗೊಳಿಸಿದ ಡಾ. ಬಿ. ಶರಣಪ್ಪ, ಕುಲಸಚಿವರು ಮಾತನಾಡುತ್ತಾ ಕನ್ನಡ ಸಾಹಿತ್ಯಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಆ ನಿಟ್ಟಿನಲ್ಲಿ ಶ್ರಮಿಸಿದವರು ಹಲಸಂಗಿ ಗೆಳೆಯರು ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕೊಡುಗೆ ಮಹತ್ವದ್ದು. ಕನ್ನಡ ಸಾಹಿತ್ಯಕ್ಕೆ ಬಿ.ಎಂ. ಶ್ರೀ ಆದಿಯಾಗಿ ಕನ್ನಡ ಅಸ್ಮಿತೆಯ ಉಳಿಸಿ ಬೆಳೆಸಿದರು ಕೀರ್ತಿಸಲ್ಲುತ್ತದೆ. ನವೋದಯ, ಪ್ರಗತಿಶೀಲ ನವ್ಯ-ದಲಿತ-ಬಂಡಾಯ ಸಾಹಿತ್ಯದ ಕಾಲಘಟ್ಟದಲ್ಲಿ ವಿಫಲವಾಗಿ ಸಾಹಿತ್ಯ ಬೆಳೆಯಿತು.  ಹನ್ನೆರಡನೆ ಶತಮಾನದ ವಚನಕಾರರ ಚಿಂತನೆ, ಮೌಲ್ಯ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಪೂರಕವಾಗುತ್ತವೆ. ಕನ್ನಡ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದಾತ ಬಸವಣ್ಣ. ಈ ಕಾರಣಕ್ಕಾಗಿ ಅನುಭವ ಮಂಟಪದಲ್ಲಿ ಎಲ್ಲ ವರ್ಗದ, ವೃತ್ತಿಯ ಜನಸಾಮಾನ್ಯರನ್ನು ಜಾಗೃತಗೊಳಿಸಿದರು ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ಹಲಸಂಗಿ ಗೆಳೆಯರ ಗುಂಪು ಹೊಸದಾದ ಧ್ವನಿ, ಚಿಂತನೆಯನ್ನು ಮೂಡಿಸಿದರು. ಸಾಹಿತ್ಯ, ಸಾಮಾಜಿಕ ಚಿಂತನೆಗಳನ್ನು ಪ್ರಸಾರಗೊಳಿಸಲು ಪತ್ರಿಕೆ ಹೊರತರುತ್ತಿರುವುದು ತುಂಬಾ ಸಂತೋಷವೆನಿಸುತ್ತದೆ. ಮೌಲ್ಯಗಳನ್ನು ವೈಚಾರಿಕ ಚಿಂತನೆ-ಮಂಥನಗಳು ಓದುಗರಿಗೆ ತಲುಪಿಸುವ ಕೈಂಕರ್ಯಕ್ಕೆ ಮುನ್ನುಲಿ ಎಂದು ಆಶಿಸಿದರು.

ಹಲಸಂಗಿ ಗೆಳೆಯರ ಬಳಗದ ಸೃಜನಶೀಲ ಸಾಹಿತ್ಯ ಎಂಬ ವಿಷಯ ಕುರಿತು ಡಾ. ಚೆನ್ನಪ್ಪ ಕಟ್ಟಿಯವರು ಮಾತನಾಡುತ್ತಾ, ನವೋದಯ ಕಾಲಘಟ್ಟದಲ್ಲಿ ಮೈಸೂರು ಭಾಗದಲ್ಲಿ ಕುವೆಂಪುರವರು, ಮಂಗಳೂರು ಭಾಗದಲ್ಲಿ ಪಂಜೇಮಂಗೇಶರಾಯರು ಧಾರವಾಡ ಭಾಗದಲ್ಲಿ ದ.ರಾ. ಬೇಂದ್ರಯವರು ಮೌಲ್ಯ, ಚಿಂತನೆ, ಸಾಹಿತ್ಯದ ಆಳ ಅಗಲಗಳನ್ನು ತಿಳಿಸುವಂತಹ ಕಾರ್ಯದಲ್ಲಿ ನಿರತರಾಗಿದ್ದರು.

ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಮಧುರ ಚೆನ್ನಪ್ಪ, ಪಿ. ಧೊಲಾ ಸಾಹೇಬ, ಸಿಂಪಿ ಲಿಂಗಣ್ಣ, ಕಾಪಸೆ ರೆವಪ್ಪ ಬಳಗದವರು ಸಾಂಸ್ಕøತಿಕ, ಸಾಹಿತ್ಯಕ ಕೆಲಸವನ್ನು ಸಾಂಘುಕವಾಗಿ ಮಾಡಿದರು. ಕಾವ್ಯ, ಕಥೆ, ನಾಟಕ, ಕಾದಂಬರಿ, ಪ್ರಬಂಧ, ಸಂಶೋಧನೆ, ವಿಮರ್ಶೆ, ಸಂಪಾದನೆ ಪ್ರಕಾರಗಳಲ್ಲಿ ದೂರದರ್ಶಿತ್ವದ ದೃಷ್ಟಿ ಕೋನದೊಂದಿಗೆ ತೊಡಗಿಸಿಕೊಂಡ ಅಪರೂಪದ ಬಳಗ Seಟಜಿ mಚಿಜe ಖಿಚಿiಟoಡಿ ದಂತೆ ಆಗಿದ್ದರು. ಹಲಸಂಗಿ ಪರಿಸರ ಸಾಹಿತ್ಯ ಜನಪರ ಮೌಲ್ಯಗಳನ್ನು ಎತ್ತಿ ಹಿಡಿದವು ಅಧ್ಯಯನಕ್ಕೆ ಯೋಗ್ಯವಾದಂತ ಕೃತಿಗಳನ್ನು ರಚಿಸಿದ್ದಾರೆ. ಈ ಬಳಗದಲ್ಲಿ ಪ್ರಮುಖವಾದ ಸಾಹಿತ್ಯ ಪ್ರಕಾರ ಕಾವ್ಯದಲ್ಲಿ ಮೌಲಿಕ, ಅರ್ಥಪೂರ್ಣ ವಿಚಾರ ಚಿಂತನೆಗಳನ್ನು ಪ್ರತಿಪಾದಿಸಿದ್ದಾರೆ. ಅನುಭಾವದ ನೆಲೆಯಲ್ಲಿ ಸಾಹಿತ್ಯ ಕೃಷಿ ಮಾಡಿದರು.

ಒಬ್ಬ ಸಾಮಾನ್ಯ ವ್ಯಕ್ತಿ, ‘ನನ್ನ ನಲ್ಲ’ ಕಾವ್ಯ ಓದುವುದರಿಂದ ಅನುಭಾವದೆಡೆಗೆ ಹಂತ ಹಂತವಾಗಿ ಒಲವು ಮೂಡಿ ಸಾಧಕನಾಗಬಲ್ಲರು, ಬ್ರಹ್ಮ ಸಂಸ್ಪರ್ಷಾ ಪಡೆದುಕೊಳ್ಳುತ್ತಾರೆ ಎಂದರು. ‘ಹೇಳು ಕುಲವೇ’ ನೀರಿರೂವ ಕಮಲದಿ ಬಂದು ಕೆಸರಲ್ಲಿ ಬಿದ್ದೆ’ ಎಂದು ತಮ್ಮ ಆತ್ಮಾ ಲೋಕನ ಮಾಡಿಕೊಂಡಂವರು ‘ಇದ್ದರೆ ಬಂದೀ, ಇರದಿದ್ದರೆ ಬಿಟ್ಟಿ’ ಎಂದು ಪ್ರಶ್ನಿಸುವ, ಸವಾಲು ಹಾಕುವ ವ್ಯಕ್ತಿತ್ವ ಹಲಸಂಗಿ ಗೆಳೆಯರದು. ದೇವರನ್ನು ಒಲಿಸಿಕೊಳ್ಳುವ ಮೊದಲು ಗೆಳೆಯರನ್ನು ಒಲಿಸಿಕೊಳ್ಳುವುದು ಅವಶ್ಯವೆಂದು ಸಾರಿದಂತವರು.

ಮನುಷ್ಯನ್ನು ನಿಸ್ತರಗಿರಕರಿಸಿಕೊಂತಾಗ ಯೋಗ ಸಾಧನೆಯ ಮೆಟ್ಟಿಲು ಹತ್ತಬಹುದು ಎಂದು ಅರಿತುಕೊಂಡವರು. ಪಿ. ಧೂಲಾಸಾಹೇಬ ಬರೆದ ಒಂದೇ ಒಂದು ಕೃತಿ. ವೀರಪತಿತ ಸಿಂಪಿ ಲಿಂಗಣ್ಣನವರು 110 ಕೃತಿಗಳನ್ನು ರಚಿಸಿದ್ದಾರೆ. ಅವುಗಳ ಆಶಯ ಸಮಾಜ ಮುಖಿಯಾಗಿವೆ. ನೆಲ ಮತ್ತು ಮುಗಿಲನ್ನು ಅಂದರೆ ವಾಸ್ತವ ಮತ್ತು ಅತೌಕ ಜಗತ್ತನ್ನು ಸಮಾನಯಗೊಳಿ ಬರೆದ ಕೀರ್ತಿ ಇವರದು. 14 ನಾಟಕಗಳನ್ನು ರಚಿಸಿದ್ದಾರೆ. ಮರಮುಚುಕ ನಾಟಕ ಇದು ಅಸ್ಪøಶ್ಯತ ನಿವಾರಣಾ ಕುರಿತಾದ ನಾಟಕ. ಹಲಸಂಗಿ ಗೆಳೆಯರ ಬಳಗದ ಸೃಜನಶೀಲ ಸಾಹಿತ್ಯ ಹಲವಾರು ಸಂಶೋಧನೆ ನಡೆಯ, ವಸ್ತು ವಿಷಯ ವಸ್ತುವಿದೆ ಎಂದು ತಿಳಿಸಿದರು.

ಹಲಸಂಗಿ ಗೆಳೆಯರ ಬಳಗದ ಜಾನಪದ ಸಾಧನೆ ಎಂಬ ವಿಷಯ ಕುರಿತು ಡಾ. ಎಂ.ಎಂ. ಪಡಶೆಟ್ಟಿ ಅವರು ಮಾತನಾಡುತ್ತಾ ಜನವಾಣಿಬೇರು. ಕವಿವಾಣಿ ಹೂ ಎಂಬಂತೆ ಕುರಿತೋದಯುರ ಕಾವ್ಯ ಪ್ರಯೋಗ ಪರಿಣಿತ ಮಾಲೆಗಳ್’ ಎಂಬ ಕೃತಿ ಜಾನಪದ ಹಾಡುಗಳ ಸಂಪಾದನೆ ಕೃತಿ ಇದಾಗಿದೆ. ಅದೇ ರೀತಿ ಮಾಡಲು ಹರಿಯುವ ಮುನ್ನ ಮಂಗೋಳಿಯಾಗಿ ಹಾಡಿ ಹಾಡುಗಳನ್ನು ಈ ಹಾಡುಗಳನ್ನು ಗರತಿಯರು, ಹಾಡಿದರು.

ನವೋದಯ ಕಾಲಷಿದ್ವ ಪಂಚಪಾಂಡವರು, ಮದೂರ ಚೆನ್ನ, ಪಿ. ಧೂಲಾ ಸಾಹೇಬ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣ, ಒಲೆಕಾರ ಮಾದಪ್ಪ ಇವರೆಲ್ಲರು ಜನಪರ ಜೀವಪರ ಪರಮೌಲ್ಯಗಳನ್ನು ಅನುಭಾವದ ಮೂಲಕ ಸಾರಿದರು. ದೂರದ ವೀರೇಂದ್ರನಾಥ ಟ್ಯಾಗೋರ, ಪಾಂಡಿಚೇರಿಯ ಅರವಿಂದರ ಸಂಪರ್ಕದೊಂದಿಗೆ ಇದ್ದು ಸಮಯವಾದ ಜೀವನ ಸಂಗೀತ ಮೌಲ್ಯಗಳು ಒಳಗೊಂಡಿದ್ದವು. ಲಾವಣಿ ಪದಗಳು ಈ ಕಾಲದಲ್ಲೆ ಹೇರಳವಾಗಿ ರಚನೆಗೊಂಡವು. ಮಲ್ಲಿಗೆ ದಂಡೆ ಹಾಡುಗಳನ್ನು ಸಂಪ್ರದಾಯದ ಹಾಡುಗಳು, ಅವು ಜನಪ್ರೀಯ ಸರಸವಿರಸಕ್ಕೆ ಸಂಬಂಧಿಸಿದ ಹಾಡುಗಳು ಇವಾಗಿವೆ. ಜನಪದ ಕಥೆಗಳನ್ನು ಕನ್ನಡ ಸಂಗ್ರಹಿಸಿದರು.

75 ಜನ ಪದಕತೆಗಳನ್ನು ಕೇಂದ್ರ ಸಾಹಿತ್ಯ ಅಕಾಡೆಯಿಂದ ಕಟ್ಟಿಸಿದ್ದರು. ಸಂಸಾರ ವೇದನೆ ತಾರಕಲಾಟ, ತಾಳ್ಮೆಯನ್ನು ಒರೆಗಚ್ಚುವಂತಿವೆ. ಉತ್ತರ ಕರ್ನಾಟಕದ ಜನಪದ ಗೀತೆಗಳು, ಇದರಲ್ಲಿ ಗಂಡಸರ ಹಾಡು, ಹೆಣ್ಣು ಮಕ್ಕಳ ಹಾಡು, ಮಕ್ಕಳ ಹಾಡುಗಳು ಮುಂತಾದವುಗಳನ್ನು ಬರೆದಿದ್ದಾರೆ. ಕಿರಿದರಲ್ಲೆ ಹಿರಿದರ್ಥದ ಪದಕ, ಎಂಬಂತ ಗಾದೆ ಮತು, ನುಡಿಗಟ್ಟುಗಳನ್ನು ಬಳಸಿ ಬರೆದ ಹೆಗ್ಗಳಿಕೆ ಹಲಸಂಗಿ ಗೆಳೆಯರ ಬಳಗದ್ದು. ಬಾಳ ಕೈಪಿಡಿ ಎನ್ನುವ ರೀತಿಯಲ್ಲಿ ರಚನೆಗೊಂಡಿವೆ. ಶ್ರಮ ಸಂಸ್ಕøತಿಯ ಪ್ರೇರಕ ಶಕ್ತಿಗಳಾಗಿವೆ. ಎಂದರು. ಹಿನ್ನೆಲೆಯ ಇವರಿಗೆ ಲೋಕಾನುಭಾವ, ನೈತಿಕ ನೀತಿ, ಜೀವನದ ಅನುಭಾವಗಳನ್ನು ಅರ್ಥಪೂರ್ಣವಾಗಿ ರಚಿಸಿದ್ದಾರೆ. ಬದುಕಿನ ಧಾರಣ, ಬೆತ್ರವಣವನ್ನು ಹಾಡಿನ ಮೂಲಕ ಕಟ್ಟಿ ಹಾಡಿದ್ದು ಹಲಸಂಗಿ ಗೆಳೆಯರ ಬಳಗವೆಂದು ಪಡಶೆಟ್ಟಿಯವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ. ರಮೇಶ ರಾಠೋಡ ಅವರು ಮಾತನಾಡುತ್ತಾ ಹಲಸಂಗಿ ಗೆಳೆಯರ ಸಾಹಿತ್ಯ Metaphisocility ಕುರಿತು ಅರಿತುಕೊಂಡವರು ಇಂತಹ ವಿಚಾರಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.

ನಿರೂಪಣೆ ಕು. ಚನ್ನಮ್ಮ ಬಿರಾದಾರ, ವಂದನಾರ್ಪನೆ ಕು. ವೀಣಾ ಗೌರೀಶಂಕರ, ಸ್ವಾಗತ ಡಾ. ಸಂತೋಷಕುಮಾರ ಕಂಬಾರ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here