ಕಲಬುರಗಿ: ಹೈಕೋರ್ಟ್ ಪೀಠದ ಆವರಣದಲ್ಲಿ ನ್ಯಾಯ ಮೂರ್ತಿಗಳಾದ ಗೌರವನಿತರಾದ ಎಚ್.ಟಿ. ನರೇಂದ್ರ ಪ್ರಸಾದ, ವಿ.ಶ್ರೀಷಾನಂದ, ಜಿ. ಬಸವರಾಜ, ಸಿ.ಎಂ.ಜೋಶಿ, ಕೆ.ವಿ.ಅರವಿಂದ ಅವರು ಪಕ್ಷಿಗಳಿಗೆ ನೀರುಣಿಸಿ ನ್ಯಾಯದಾನ ಮಾಡುವ ಕೈಗಳಿಂದ ಪಕ್ಷಿಗಳಿಗೆ ನೀರುದಾನ ಮಾಡುವ ಮೂಲಕ ಪಕ್ಷಿ ಪ್ರೇಮ ಮೆರೆದರು.
ಹಿರಿಯ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ ಮಾತನಾಡಿ, ಪಕ್ಷಿ ಪ್ರೇಮಿ, ವಕೀಲ ಎಸ್.ಜಿ.ಮಠ ಕಳಕಳಿಯ ಫಲವಾಗಿ ಪ್ರತಿ ವರ್ಷ ಬೆಸಿಗೆ ಆರಂಭವಾಗುತ್ತಿದ್ದಂತೆ ಪಕ್ಷಿಗಳಿಗೆ ನೀರುಣಿಸುವಂಥ ಪರೋಪಕಾರ ಕೆಲಸ ನಿಜಕ್ಕೂ ಪುಣ್ಯ ತಂದುಕೊಡುವಂತಿದೆ. ಇದು ಕೇವಲ ಒಬ್ಬರಿಬ್ಬರಿಂದ ಸಾಲದು, ಕಲ್ಯಾಣ ಕರ್ನಾಟಕ ಭಾಗದ ಎಲ್ಲ ವಕೀಲರು, ಸಾರ್ವಜನಿಕರು ಸಹ ತಮ್ಮ ತಮ್ಮ ಮನೆ ಮೇಲ್ಬಾವಣಿಯಲ್ಲಿ ಮಣ್ಣಿನ ಪಾತ್ರೆಯಲ್ಲಿ ನೀರಿಟ್ಟು ಬೆಕ್ಕಿಗೆ ಸಿಗದಂತೆ ಪಕ್ಷಿಗಳಿಗೆ ನೀರುಣಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಪಕ್ಷಿ ಪ್ರೇಮಿ ಹಾಗೂ ಹಿರಿಯ ವಕೀಲರಾದ ಶ್ರೀ ಎಸ್.ಜಿ.ಮಠ ಮಾತನಾಡಿ, ಪ್ರತಿವರ್ಷ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಕೋರ್ಟ್‍ಗಳ ನ್ಯಾಯವಾದಿಗಳ ಸಂಘಕ್ಕೆ ಸಂಪರ್ಕಿಸಿ ಬೇಡಿಕೆ ಅನುಸಾರ ಮಣ್ಣಿನ ಪಾತ್ರ ಪೂರೈಸುತ್ತೇನೆ. ಈ ಬಾರಿ ಸಾವಿರಕ್ಕೂ ಹೆಚ್ಚು ಮಣ್ಣಿನ ಪಾತ್ರೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಚ್ಛ ನ್ಯಾಯಾಲಯದ ನ್ಯಾಯವಾದಿಗಳು ಭಾಗವಹಿಸಿದರು.