ಸಾವಿರ ಜನರಿಗೆ ಉದ್ಯೋಗ ನೀಡುವ ಯೋಜನೆ ಕನಸು ಸಾಕಾರ; ಸಂಸದ ಜಾಧವ್

0
20

ಕಲಬುರಗಿ ಬಿಪಿಸಿಎಲ್ ಪೆಟ್ರೋಲಿಯಂ ಉತ್ಪನ್ನ ಸಂಗ್ರಹಾಗಾರ ಪ್ರಧಾನಿಯವರಿಂದ ಲೋಕಾರ್ಪಣೆ

ಕಲಬುರಗಿ; ಇಲ್ಲಿನ ಕೈಗಾರಿಕಾ ಪ್ರದೇಶ ನಂದೂರು (ಕೆ) ಯಲ್ಲಿ ಬಿಪಿಸಿಎಲ್ ನ 246 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಪೆಟ್ರೋಲಿಯಂ ಉತ್ಪನ್ನಗಳ ಹೊಸ ಸಂಗ್ರಹಗಾರ ಮತ್ತು ಹೊಸ ರೈಲ್ವೇ ಸೈಡಿಂಗ್ ಸೌಲಭ್ಯವನ್ನು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಬೇಗುಸರಾಯ್ ನಿಂದ ಆನ್ಲೈನ್ ಮೂಲಕ ಇಂದು (ಮಾರ್ಚ್ 2ರಂದು ಶನಿವಾರ) ಲೋಕಾರ್ಪಣೆಗೊಳಿಸಿದರು.

ಕಲಬುರಗಿಯ ನಂದೂರು(ಕೆ) ಕೈಗಾರಿಕಾ ಪ್ರದೇಶದ 67.2 ಎಕರೆ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದ ಪೆಟ್ರೋಲಿಯಂ ಉತ್ಪನ್ನಗಳ ನೂತನ ಸಂಗ್ರಹಾಗಾರ ಲೋಕಾರ್ಪಣೆಯ ನಂತರ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಈ ಯೋಜನೆಯಿಂದ ಸುಮಾರು ಒಂದು ಸಾವಿರ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ಕಲ್ಪಿಸುವ ಮಹತ್ವದ ಹೆಜ್ಜೆಯಾಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ಎಥೆನಾಲ್ ಲೋಡಿಂಗ್ ಮತ್ತು ಅನ್ಲೋಡಿಂಗ್ ಸೌಲಭ್ಯ ದೊರಕಲಿದೆ.

Contact Your\'s Advertisement; 9902492681

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ,ಕೊಪ್ಪಳ ,ವಿಜಯನಗರ ಹಾಗೂ ವಿಜಯಪುರ ಜಿಲ್ಲೆಗಳ ತೈಲ ಬೇಡಿಕೆ ಸಮಸ್ಯೆ ನೀಗಲಿದೆ ಎಂದರು ಸಂಗ್ರಹಾಗಾರದಲ್ಲಿ ಸುಮಾರು 30 ಸಾವಿರ ಕಿಲೋಮೀಟರು ಸಂಗ್ರಹಣೆ ಸಾಮರ್ಥ್ಯ ಹೊಂದಲಾಗಿದೆ ಇನ್ನು ಮುಂದೆ ಈ ಭಾಗದ ತೈಲ ಗ್ರಹಕರಿಗೆ ತೈಲ ಪೂರೈಕೆ ನಿರಾತಂಕವಾಗಿ ಸಿಗಲಿದೆ. ಈ ಭಾಗದ ಅಭಿವೃದ್ಧಿಯ ಮತ್ತೊಂದು ಮೈಲಿಗಲ್ಲು ಇದಾಗಿದೆ. ಬಿಪಿಸಿಎಲ್ ಕಂಪನಿಯಿಂದ ಸಿಎಸ್ಆರ್ ಫಂಡ್ ಮೂಲಕ ಜಲ ಸಂರಕ್ಷಣೆ ಶಾಲೆಗಳ ಅಭಿವೃದ್ಧಿ ಕೌಶಲ್ಯಾಭಿವೃದ್ಧಿ ಸೇರಿದಂತೆ ಸಮಾಜ ಸೇವ ಕಾರ್ಯವನ್ನು ನಡೆಸುತ್ತಿರುವುದಕ್ಕೆ ನಿಗಮದ ಅಧಿಕಾರಿಗಳಿಗೆ ಅಭಿನಂದನೆ ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸಗಳು ಬರದಿಂದ ಸಾಗುತ್ತಿದ್ದು ಒಂದು ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಮೇಘ ಜವಳಿ ಪಾರ್ಕ್ ಅಮೃತ ಯೋಜನೆ ಅಡಿ ವಾಡಿ ಶಾಬಾದ್ ಕಲಬುರಗಿ ಸ್ಟೇಷನ್ ಗಾಣಾಗಾಪುರ ರೈಲು ನಿಲ್ದಾಣಗಳ ಅಭಿವೃದ್ಧಿಗೆ 110 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಶೀಘ್ರದಲ್ಲೇ ಕಲಬುರಗಿ ಬೆಂಗಳೂರು ನಡುವೆ ರೈಲು ಸಂಚಾರ ಆರಂಭ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಸೌಲಭ್ಯ ಚೆನ್ನೈ ಸೂರತ್ ಭಾರತ್ ಮಾಲ ಯೋಜನೆ ಅಡಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 71 ಕಿಲೋಮೀಟರ್ ರಸ್ತೆ ಅಭಿವೃದ್ಧಿ ರೈಲು ಮೇಲು ಸೇತುವೆ ಕೇಳ ರಸ್ತೆ ಮುಂತಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಾರ್ಮಿಕ ಉದ್ಯೋಗ ಹಾಗೂ ಜವಳಿ ಸಂಸದೀಯ ಸಮಿತಿಯ ಸದಸ್ಯನಾಗಿರುವುದರಿಂದ ಕಾರ್ಮಿಕ ಸ್ನೇಹ ಮತ್ತು ಮಾಲಕಸ್ಮಿ ಅನೇಕ ಕಾನೂನುಗಳನ್ನು ರಚಿಸಿ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲ ಕಲ್ಪಿಸಲಾಗಿದೆ. ಮೋದಿ ಸರಕಾರದಿಂದ ಅಭಿವೃದ್ಧಿಗೆ ವೇಗ ಸಿಕ್ಕಿದ್ದು ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗಿದೆ ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ತತ್ವದ ಅಡಿ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆಯಿಂದ ಇಷ್ಟು ದೊಡ್ಡ ಯೋಜನೆ ಕಲಬುರಗಿಗೆ ಲಭಿಸಿ ಲೋಕಾರ್ಪಣೆ ಮಾಡಿರುವುದಕ್ಕೆ ಪ್ರಧಾನಮಂತ್ರಿ ಯವರಿಗೆ ಹಾಗೂ ಖಾತೆಯ ಸಚಿವರಾದ ಹರ್ ದೀಪ ಸಿಂಗ್ ಪುರಿ ಮತ್ತು ರೈಲ್ವೆ ಖಾತೆಯ ಸಚಿವರಾದ ಅಶ್ವಿನಿ ವೈಷ್ಣವ ಅವರಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಭಾರತ್ ಪೆಟ್ರೋಲಿಯಂ ನಿಗಮದ ಕರ್ನಾಟಕದ ಮುಖ್ಯಸ್ಥರಾದ ವರುಣ್ ಜಾನ್, ಕಲಬುರ್ಗಿ ಬಿಪಿಸಿಎಲ್ ನ ವ್ಯವಸ್ಥಾಪಕರಾದ ಮಹೇಶ್, ಕಾನೂನು ಮಾಪನ ಇಲಾಖೆಯ ಕಲಬುರ್ಗಿ ವಿಭಾಗದ ಉಪ ನಿಯಂತ್ರಕರಾದ ರಫೀಕ್ ಲಾಡ್ ಜಿ ಉಪಸ್ಥಿತರಿದ್ದರು ಸಮಾರಂಭದಲ್ಲಿ ಪೆಟ್ರೋಲಿಯಂ ಡೀಲರ್ ಟ್ರಾನ್ಸ್ಪೋರ್ಟ್ ಮುಖ್ಯಸ್ಥರು ಏಜೆನ್ಸಿಗಳು ಹಾಗೂ ಕಾರ್ಮಿಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here