ಸುರಪುರ: ಶರಣಬಸವ ಪಬ್ಲಿಕ್ ಸ್ಕೂಲ್ 12ನೇ ವಾರ್ಷಿಕೋತ್ಸವ

0
8

ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವ ಪಬ್ಲಿಕ್ ಸ್ಕೂಲ್, ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಸನಾಪುರದ 12ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ದಿವ್ಯ ಸಾನಿಧ್ಯವನ್ನು ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದ ಪ್ರಭುಲಿಂಗ ಮಹಾಸ್ವಾಮಿಗಳು,ಲಕ್ಷ್ಮೀಪುರ ಶ್ರೀಗಿರಿ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೊ. ನಿಂಗಮ್ಮ ಪತಂಗಿ ನಿವೃತ್ತ ಪ್ರಾಂಶುಪಾಲರು, ಗೋದುತಾಯಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಕಲಬುರಗಿ ರವರು ಮಾತನಾಡಿ, ನಿಷ್ಠಿ ಮನೆತನದವರಾದ ಪೂಜ್ಯ ಶ್ರೀ ವೀರಪ್ಪ ನಿಷ್ಠಿ ಅವರು ಪ್ರಧಾನ ಮಂತ್ರಿಗಳಾಗಿ ಅಧಿಕಾರ ಸ್ವೀಕರೀಸಿದ್ದರ ಹಿನ್ನಲೆಯನ್ನು ಕುರಿತು ಹೇಳಿದರು.

Contact Your\'s Advertisement; 9902492681

ಆಧುನಿಕ ಜಗತ್ತಿನಲ್ಲಿ ಮಕ್ಕಳನ್ನು ಬೆಳೆಸುವಲ್ಲಿ ಪಾಲಕ ಮತ್ತು ಪೋಷಕರ ಪಾತ್ರ, ಶಿಕ್ಷಕರಾದವರು ಅಗಾಧವಾದ ಪಾಂಡಿತ್ಯವನ್ನು ಹೊಂದಿರಬೇಕು ಅಂದಾಗ ಮಾತ್ರ ಮಕ್ಕಳಿಗೆ ಸೃಜನಶೀಲ ಜ್ಞಾನ ನೀಡಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾದ ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ ನಿಂಬೂರ ಮಾತನಾಡಿ, ಮಕ್ಕಳ ಬೆಳೆವಣಿಗೆಯಲ್ಲಿ ತಂದೆ ತಾಯಿ ಮತ್ತು ಗುರುಗಳ ಪಾತ್ರವನ್ನು ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ದಕ ಸಂಘದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶರಣಬಸಪ್ಪ ವೀ ನಿಷ್ಠಿ ಮಾತನಾಡಿ, ಎಸ್.ಬಿ.ಆರ್ ಪಬ್ಲಿಕ್ ಶಾಲೆ ಕಲಬುರಗಿ ಮಾದರಿಯಲ್ಲಿ ನಮ್ಮ ಸಂಸ್ಥೆ ಸಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಸಮರ್ಥ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಗುರುಗಳ ಪಾತ್ರವನ್ನು ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಾತೋಶ್ರೀ ಡಾ. ಶಾಂತಲಾ ಶ ನಿಷ್ಠಿ ನಿವೃತ್ತ ಮುಖ್ಯಸ್ಥರು ಲಲಿತ ಕಲಾ ವಿಭಾಗ ಶರಣಬಸವೇಶ್ವರ ಪದವಿ ಮಹಾವಿದ್ಯಾಲಯ ಮತ್ತು ಗೌರವಾನ್ವಿತ ಮುಖ್ಯಸ್ಥರು ದೃಶ್ಯ ಕಲಾ ಸ್ನಾತ್ತಕೋತ್ತರ ವಿಭಾಗ ಶರಣಬಸವ ವಿಶ್ವವಿದ್ಯಾಲಯ ಕಲಬುರಗಿ,ರಾಜಾ ಲಕ್ಷ್ಮೀನಾರಾಯಣ ನಾಯಕ ಬಲವಂತ ಬಹರಿ ಬಹದ್ದೂರು ಸುರಪುರ ಸಂಸ್ಥಾನ ಸುರಪುರ,ರಾಜಾ ಮಂಜುನಾಥ ನಾಯಕ ಬಲವಂತ ಬಹರಿ ಬಹದ್ದೂರು ಸುರಪುರ ಸಂಸ್ಥಾನ ಸುರಪುರ, ಖಾದರ ಪಟೇಲ್ ಅಧ್ಯಕ್ಷರು ಕರ್ನಾಟಕ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ, ಸುರಪುರ ರವರ ಭಾಗವಹಿಸಿದ್ದರು.

2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್. ಸಿ ಮತ್ತು ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಿಂದ ಸನ್ಮಾನಿಸಲಾಯಿತು.

ತದನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ರಾಷ್ಟ್ರೀಯ ಭಾವೈಕ್ಯತೆ, ಮೋಬೈಲ್‍ಗಳ ದುಷ್ಪರಿಣಾಮ ಹಾಗೂ ದಾರ್ಮಿಕ ಭಾವೈಕ್ಯತೆ ಮೂಡಿಸುವ ಡ್ರಾಮ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿಗಳಾದ ಶರಣಬಸವಪ್ಪ ವ್ಹಿ ನಿಷ್ಠಿ, ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ಎಸ್ ನಿಷ್ಠಿ, ಪ್ರಾಂಶುಪಾಲರಾದ ಶಿವಾನಂದ ಹವಶೆಟ್ಟಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಮೌನೇಶ ಬಡಿಗೇರ ಸ್ವಾಗತಿಸಿದರು,ರೇವಪ್ಪ ಪಾಟೀಲ ನಿರೂಪಿಸದರು ಮತ್ತು ಶರಣಗೌಡ ಬಿರಾದರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here