ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಕನ್ನಡಿಗರದು : ಮನು ಬಳಿಗಾರ

0
20

ಕಲಬುರಗಿ: ‘ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ’ ಎಂಬ ವಿಷಯ ಕುರಿತು ಮಾತನಾಡುತ್ತಾ, ಕನ್ನಡ ಸಾಹಿತ್ಯ, ಭಾಷೆ ಉಳಿಸಿ ಬೆಳೆಸುವ ಕೆಲಸ ಕಾರ್ಯಗಳು, ಕಾರ್ಯಕ್ರಮಗಳು ಆಗಬೇಕು. ಇಲ್ಲದಿದ್ದರೆ ಕನ್ನಡ ಭಾಷೆ ಉಳಿಸಿಕೊಳ್ಳುವುದ ಕಷ್ಟವಾಗುತ್ತದೆ. 50 ವರ್ಷದ ಹಿರಿದಾದ ಕನ್ನಡ ಅಧ್ಯಯನ ಸಂಸ್ಥೆ ತನ್ನ ಕಾರ್ಯಚಟುವಟಿಕೆಗಳ ಮೂಲಕ ಶ್ರಮಿಸುತ್ತಿರುವುದು ಖುಷಿಯೆನಿಸುತ್ತದೆ ಎಂದರು.

ಕನ್ನಡ, ಸಾಹಿತ್ಯ ಭಾಷೆ, ಸಂಸ್ಕøತಿ ಕಟ್ಟುವ ಕೆಲಸ ಹೀಗೆಯೇ ನಿರಂತರವಾಗಿ ನಡೆಯಬೇಕು ಅಂದಾಗ ನಾಡು-ನುಡಿಯ ಸಂಸ್ಕøತಿ ಚಲನಶೀಲಗೊಳ್ಳುವುದು ಎಂದು ಹೇಳಿದರು.

Contact Your\'s Advertisement; 9902492681

ಅವರು ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿಯ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಪ್ರಯುಕ್ತ ಸರಣಿ ಉಪನ್ಯಾಸ (ಮಾಲೆ-4)ರಲ್ಲಿ ನಾಡೋಜ ಡಾ. ಮನು ಬಳಿಗಾರ ಅಭಿಪ್ರಾಯಪಟ್ಟರು ನಾವು ಪ್ರತಿಯೊಬ್ಬರು ಕನ್ನಡವನ್ನು ಉಳಿಸಿಬೆಳೆಸುವ ಕೈಂಕರ್ಯಕ್ಕೆ ಸಿದ್ಧರಾಗಬೇಕಾದ ಅನಿವಾರ್ಯತೆಯಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮಾತೃ ಭಾಷೆಯಾದ ಕನ್ನಡ ಸಾಹಿತ್ಯದಲ್ಲಿ ಇರುವ ಮೌಲ್ಯ, ಮಾನವೀಯತೆ, ಜೀವಪರ ಚಿಂತನೆಗಳು ಅರಿತುಕೊಂಡು ವಿಶ್ವಮಾನವನಾಗಲು ಯತ್ನಿಸಬೇಕೆಂದರು. ಪ್ರಾಚೀನ ಕವಿಗಳಾದ ಶ್ರೀವಿಜಯ, ಪಂಪ, ಪೊನ್ನ, ರನ್ನ ಮತ್ತು ಹನ್ನೆರಡನೆಯ ಶತಮಾನದ ಶರಣ-ಶರಣಿಯರ ಮೌಲಿಕ ವಚನಗಳು ಜಾತಿ-ಮತ-ಪಂಥ ಮೀರಿ ವೈಚಾರಿಕ ನೆಲೆಯಲ್ಲಿ ಶ್ರಮಿಸಿದರು.

ನಮ್ಮ ನಾಡಿನ ಸ್ವಾಭಿಮಾನ ಸಂಸ್ಕøತಿ ಹಿರಿಮೆ ಗರಿಮೆಯನ್ನು ಬಿತ್ತರಿಸುವ, ಪರಿಚಯಿಸುವ ಕೆಲಸ ನಡೆಯಬೇಕು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗುವ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಮತ್ತು ಭಾಷೆಯ ಪ್ರಾಚೀನತೆ ಸಾಹಿತ್ಯ ರಚನೆಯ ಉಲ್ಲೇಖಗಳು ಒಂದನೆಯ ಶತಮಾನದಷ್ಟು ಹಳೆಯದಾಗಿದೆ ಎಂಬುದರ ಆಧಾರದ ಮೇಲೆ ಶಾಸ್ತ್ರೀ ಸ್ಥಾನಮಾನ ದೊರೆಯಿತು. ಶಾಸ್ತ್ರೀ ಸ್ಥಾನ ಮಾನ ದೊರೆತ ಕನ್ನಡ ಭಾಷೆಗೆ 1.5 ಕೋಟಿ ಅನುದಾನ ಮಾತ್ರ ನೀಡುತ್ತದೆ, ಅದೇ ತಮಿಳು ಭಾಷೆ ಸಾಹಿತ್ಯಕ್ಕೆ 800 ಕೋಟಿ ನೀಡುತ್ತಿರುವುದು ಅಸಮಾನತೆಯಾಗಿದೆ. ಶಾಸನಗಳೂ, ಪ್ರಾಚೀನ ಕಾವ್ಯಗಳು ಪರಿಚಯಿಸುವಂತಹ ಕೆಲಸ ಇನ್ನುಷ್ಟು ನಡೆಯಬೇಕು ಎಂದರು.

ಕಲ್ಯಾಣ ಕರ್ನಾಟಕ ಭಾಗದ ಒಂಬತ್ತನೆಯ ಶತಮಾನದ ಕವಿರಾಜಮಾರ್ಗ ಕೃತಿ ಆಶಯ ಹಾಗೂ ವಚನ ಸಾಹಿತ್ಯ ದಾಸ ಸಾಹಿತ್ಯ, ಕೀರ್ತನ ಸಾಹಿತ್ಯದ ಮೌಲ್ಯಗಳನ್ನು ತಿಳಿಸಬೇಕು. ಇಂದು ಆಡಳಿತ ಮಾಡುವ ಸರಕಾರಗಳು ಕನ್ನಡ ಸಾಹಿತ್ಯ ಭಾಷೆ, ಸಂಸ್ಕøತಿ ಉಳಿವಿಗಾಗಿ ಶ್ರಮಿಸಬೇಕಾಗಿದೆ. ಯುವಪೀಳಿಗೆ ಕನ್ನಡ ನಾಡು ನುಡಿಯ ಜಾಗೃತಿ ಸ್ವಾಭಿಮಾನ ಬೆಳೆಸಿಕೊಳ್ಳಬೇಕೆಂದರು. ನೆಲ, ಜಲ, ಸಮಾಜ, ಸಂಸ್ಕøತಿ ನಾಡು ನುಡಿಯ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು. ಕನ್ನಡ ಓದುಗರಿಗೆ ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು.

ಜೊತೆಗೆ ಭಾಷೆಯ ಮಹತ್ವ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ‘ವಸುದೇವ ಕುಟುಂಬಕಂ ಮತ್ತು ಸರ್ವಜನ ಸುಖಿನೋ ಭವಂತುತೆಯನ್ನು’ ತತ್ವ ಮೈಗೂಡಿಸಿಕೊಳ್ಳಬೇಕು. ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಪಂಪನ ವಾಣಿಯಂತೆ ನಡೆಯಬೇಕಾಗಿದೆ. ಮಾನವೀಯತೆ ಸಮಾನತೆ, ಲಿಂಗ ಸಮಾನತೆ, ಕಾಯಕ ದಾಸೋಹ ಪದ್ದತಿಯನ್ನು ರೂಢಿಸಿಕೊಳ್ಳಬೇಕೆಂದು ಜಗತ್ತಿಗೆ ಸಾರಿದ ನಾಡು ಈ ಕಲ್ಯಾಣ ಕರ್ನಾಟಕ. ಕನ್ನಡ ಸಾಹಿತ್ಯಕ್ಕೆ ಶಾಸ್ತ್ರೀ ಭಾಷೆಯ ಸ್ಥಾನಮಾನ ಸಿಗುವಲ್ಲಿ ಕಲ್ಯಾಣ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಇದಲ್ಲದೆ ಸಮಾನತೆ ಸಮಾಜದಲ್ಲಿ ಸಮಾನತೆ ಬರುವರವರೆಗೆ ಮೀಸಲಾತಿ ಇರಲೆಬೇಕೆಂದು ಆಶಿಸಿದರು. ವೈಚಾರಿಕತೆ, ಮೌಲಿಕ ಚಿಂತನೆಗಳನ್ನು ಅರಿತು ಶ್ರೀಮಂತ ಕಲೆ, ವಾಸ್ತುಶಿಲ್ಪ, ಸಂಗೀತ, ನೃತ್ಯ, ಸಾಹಿತ್ಯ, ಸಂಸ್ಕøತಿ ಉಳಿಸಿ ಬೆಳೆಸೋಣ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ಎಚ್.ಟಿ. ಪೋತೆ ಅವರು ಮಾತನಾಡುತ್ತಾ ಸಾಹಿತ್ಯ ಸಂಸ್ಕøತಿಗೆ ಆಗುವ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಮಾಜದಲ್ಲಿ ಸಮಾನತೆ, ಸಹೋದರತೆ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದ ವೈಶಿಷ್ಟ್ಯತೆ, ವೈವಿದ್ಯತೆ ಅರಿತು ಹೆಮ್ಮೆಪಡಬೇಕಾಗಿದೆ. ನಮ್ಮ ಭಾಗದ ವಿದ್ಯಾರ್ಥಿಗಳು ನಮ್ಮ ನಾಡಿನ ಶ್ರೀಮಂತಿಕೆ ಸಂಸ್ಕøತಿಯನ್ನು ಇನ್ನೊಬ್ಬರಿಗೆ ತಿಳಿಸಬೇಕಾದ ಅನಿವಾರ್ಯತೆ ಇದೆ. ಕನ್ನಡ ಭಾಷೆಯ ವೈಶಿಷ್ಟ್ಯ, ವೈವಿದ್ಯತೆಯನ್ನು ಉಳಿಸಿ ಬೆಳೆಸಬೇಕಾದುದು ಮತ್ತು ನಾಡು-ನುಡಿ ಉಳಿವಿಗಾಗಿ ಹೋರಾಟದ ಧ್ವನಿ ಮೊಳಗಿಸಬೇಕೆಂಬ ಆಶಯ ವ್ಯಕ್ತ ಪಡಿಸಿದರು.

ನಿರೂಪಣೆ ಕು. ಭಾಗ್ಯಶ್ರೀ, ವಂದನಾರ್ಪಣೆ ಶ್ರೀ ಮಲ್ಲಪ್ಪ ತೊಟ್ನಳ್ಳಿ, ಸ್ವಾಗತ ಡಾ. ವಸಂತ ನಾಶಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here