ಕಲಬುರಗಿ, ಮಾ.೬- ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿಯ ಕನ್ನಡ ವಿಭಾಗದಲ್ಲಿ ಸಂಶೋಧನೆ ಕೈಗೊಂಡಿದ್ದ ಪ್ರೇಮಾ ನಾಗಶೆಟ್ಟಿ ಹೂಗಾರ ಬೀದರ್ ಅವರು ಮಂಡಿಸಿದ `ಕನ್ನಡ ಗಜಲ್ ಕಾವ್ಯ’ ಎಂಬ ಮಹಾಪ್ರಬಂಧಕ್ಕೆ ಗುಲಬರ್ಗ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರಕಟಿಸಿದೆ.
ಗುಲಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರೂ ಆಗಿರುವ ಹಿರಿಯ ಲೇಖಕ ಡಾ.ಎಚ್.ಟಿ.ಪೋತೆ ಅವರು ಮಾರ್ಗದರ್ಶಕರಾಗಿದ್ದರು. ಎಂ.ಎ. ದಲ್ಲಿ ಎಂಟು ಚಿನ್ನದ ಪದಕ ಹಾಗೂ ಪಾಲಿ ಡಿಪ್ಲೋಮಾ ಅಧ್ಯಯನದಲ್ಲಿ ಒಂದು ಚಿನ್ನದ ಪದಕ ಪಡೆದಿದ್ದ ಪ್ರೇಮಾ ಹೂಗಾರ ಬೀದರ್ ಅವರು, ಕನ್ನಡದಲ್ಲಿ ಗಜಲ್ ಪರಂಪರೆಯನ್ನು ಅಧ್ಯಯನ ಮಾಡಿ, ಮಹಾಪ್ರಬಂಧವನ್ನು ಮಂಡಿಸಿದ್ದಾರೆ. ಇದಕ್ಕೂ ಮುನ್ನ `ಪ್ರಣೀತೆ’ ಎಂಬ ಗಜಲ್ ಕೃತಿಯೊಂದನ್ನು ಪ್ರಕಟಿಸಿದ್ದಾರೆ. .
ಇದೂವರೆಗೆ ಸಾಹಿತ್ಯದ ವಿಶೇಷ ಪ್ರಕಾರಗಳಾದ ಕಾವ್ಯ, ಆಧುನಿಕ ವಚನ, ಹೈಕು, ತಾಂಕಾ ಸೇರಿದಂತೆ ವಿವಿಧ ಸುಮಾರು ೧೦ ಕೃತಿಗಳನ್ನು ಹೊರತಂದಿದ್ದಾರೆ.
ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಮಾತೃಛಾಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.