ಎಲ್ಲ ವಿಷಯಗಳ ಜ್ಞಾನ ಅವಶ್ಯಕ: ಪ್ರೊ. ಅಲಿ ರಜಾ ಮೂಸ್ವಿ

0
14

ಕಲಬುರಗಿ: ಇಂದಿನ ದಿನಮಾನಗಳಲ್ಲಿ ಎಲ್ಲ ಕ್ಷೆತ್ರಗಳಲ್ಲಿ ಕ್ರಾಂತಿಗಳಾಗುತ್ತಿವೆ. ಸ್ಪೆಷಲಿಟಿ, ಸೂಪರ್ ಸ್ಪೆಷಲಿಟಿ ಕೂಡ ನಾವು ಕಾಣುತ್ತೇವೆ. ಯಾವುದೇ ವಿಷಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ಒಂದೇ ವಿಷಯದ ಜ್ಞಾನ ಸಾಕಾಗದು. ಹಾಗಾಗಿ ವಿವಿಧ ವಿಷಯಗಳ ಜ್ಞಾನ ಅವಶ್ಯಕ ಎಂದು ನಗರದ ಖಾಜಾ ಬಂದಾನವಾಜ ವಿವಿಯ ಉಪ ಕುಲಪತಿ ಪ್ರೊ. ಅಲಿ ರಜಾ ಮೂಸ್ವಿ ಹೇಳಿದರು.

ಖಾಜಾ ಬಂದಾನವಾಜ ವಿವಿಯ ಭಾಷಾ, ಕಲಾ, ಮಾನವಿಕತೆಯ, ಸಮಾಜ ವಿಜ್ಞಾನ, ವಿಜ್ಞಾನ, ಕಾನೂನು, ವಾಣಿಜ್ಯ ಮತ್ತು ಶಿಕ್ಷಣ ನಿಕಾಯ ಬುಧವಾರ ಆಯೋಜಿಸಿದ್ದ “ಬ್ರಿಡ್ಜ್ಯಿಂಗ್ ನೋಲೆಜ್ ಫ್ರೋಮ್ ಡೈವರ್ಸ್ ಡಿಸಿಪ್ಲೈನಸ ಫಾರ್ ಗ್ಲೋಬಲ್ ಚೇಂಜ” ಕುರಿತ 2 ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ವಿವಿಯಲ್ಲಿ ಇಂತಹ ಸಮ್ಮೆಳನಗಳು ಜರುಗುತ್ತಿರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದರು. ಕೆಬಿಎನ್ ವಿವಿಯ ಪ್ರಭಾರಿ ಕುಲಸಚಿವೆ ಡಾ. ರುಕ್ಸರ ಫಾತಿಮಾ ಮಾತನಾಡುತ್ತ, ಎಲ್ಲ ಉಪನ್ಯಾಸಕರು ಪಿಹೆಚ್ ಡಿ ಪದವಿದರರಾಗಿದ್ದಾರೆ. ನಂತರ ಸಂಶೋಧನೆ ಲೇಖನಗಳನ್ನು ನಿಲ್ಲಿಸಬೇಡಿ. ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ತೊಡಗಲು ಪ್ರೇರೆಪಿಸಿ ಎಂದರು.

ಗುಲ್ಬರ್ಗ ವಿವಿಯ ಉಪಕುಲಪತಿ ಪ್ರೊ. ದಯಾನಂದ ಅಗಸರ ಇವರು ಬಹು ಶಿಸ್ತೀಯ ಸಂಶೋಧನೆಯ ಸವಾಲುಗಳು ಮತ್ತು ಪ್ರಾಸ್ಪೆಕ್ಟಸ್ ಕುರಿತು ಮುಖ್ಯ ಭಾಷಣ ಮಾಡಿದರು.

ಈ ಕಾರ್ಯಕ್ರಮದಲ್ಲಿ 600 ಅಭ್ಯರ್ಥಿಗಳು ನೋಂದಣಿ ಮಾಡಿದ್ದಾರೆ. ಪ್ರೀತಿ ಮಾಥುರ, ಡಾ. ಪ್ರಿಯಾ ಶಾಹ ಹಸನ್, ಸಯ್ಯದ ನಜಮುಲ್ ಹಸನ್, ಡಾ. ಅರ್ಥಾರ್ ಫರ್ನಾಡಿಸ್, ಡಾ. ರೆಚಲ ಜೋಸೆಫ್ ವಿವಿದ ವಿಷಯಗಳ ಬಗ್ಗೆ ಮಾತನಾಡಿದರು.

ವಿವಿಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿಕಾಯದ ಎಲ್ಲ ಸಹಾಯಕ ಪ್ರಾಧ್ಯಾಪಕರು ಹಾಜರಿದ್ದರು.

ಸಮದ್ ಪ್ರಾರ್ಥಿಸಿದರು. ಡಾ ಸ್ಯೆದ್ ಅಬ್ರಾರ ಸ್ವಾಗತಿಸಿದರೆ ಡೀನ್ ಡಾ. ನಿಶಾತ ಆರೀಫ್ ಹುಸ್ಸೇನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಹೀನಾ ಮತ್ತು ಡಾ. ಸನಾ ಇಜಾಜ ನಿರೂಪಿಸಿದರೆ ಡಾ. ಆಥಿಯಾ ಸುಲ್ತಾನಾ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here