ಸುರಪುರ: ಬಣಗಾರ ಪೌಂಡೇಷನ್ ಹಾಗೂ ಕನ್ನಡ ಸಾಹಿತ್ಯ ಸಂಘ ಸುರಪುರ ಇವರುಗಳ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಇದೇ ಮಾರ್ಚ್ 9ನೇ ತಾರಿಖು ಬೆಳಿಗ್ಗೆ 10 ಗಂಟೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಮತ್ತು ವಿಶೇಷ ಉಪನ್ಯಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಣಗಾರ ಪೌಂಡೇಷನ್ ಅಧ್ಯಕ್ಷ ವಸಂತಕುಮಾರ (ಪ್ರಕಾಶ) ಬಣಗಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ರಾಣಿ ಪುಷ್ಪಲತಾ ಅವರು ಉದ್ಘಾಟಿಸಲಿದ್ದು,ನ್ಯಾಯವಾದಿ ಜಯಲಲಿತಾ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ,ಲತಾಬಾಯಿ ಜೈನ್,ರೂಪಾ ರುಮಾಲ,ನಿರ್ಮಲಾ ಗುಳಗಿ ಗೌರವ ಉಪಸ್ಥಿತರಿರಲಿದ್ದು,ಲಿಂಗಸೂಗುರಿನ ಸಂಗೀತಾ ಮಜ್ಜಗಿ ಅವರು ವಿಶೇಷ ಉಪನ್ಯಾಸ ನೀಡುವರು.
ಪ್ರಮುಖರಾದ ಸುನಂದ ನಾಲವಾರ,ಶಕುಂತಲಾ ಜಾಲವಾದಿ,ಅರುಣಾ ಚಿನ್ನಾಕಾರ,ಬೋರಮ್ಮ ಯಾಳವಾರ,ವಿಮಲಾಕ್ಷೀ ಸಿಂದಗಿ,ಸುಜಾತಾ ಪುರ್ಲೆ,ಸುವರ್ಣ ದೊಡ್ಮನಿ,ವಂದನಾ ಬಣಗಾರ,ಸೈಯ್ಯದಾಬಿ ಜಾಮದಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ.ಬಾಲಪ್ರತಿಭೆ ಡಾ:ವೀರಭದ್ರ ವಿರೇಶ ಮಜ್ಜಿಗಿಗೆ ವಿಶೇಷ ಸನ್ಮಾನ ಹಾಗೂ ಸಾಧಕರಾದ ಡಾ:ತಿಪ್ಪಮ್ಮ ಬಿರಾದಾರ (ಪೌರಾಡಳಿತ),ಶರಣಮ್ಮ ದೊಡ್ಮನಿ (ಸಾಹಿತ್ಯ),ಅನ್ನಪೂರ್ಣ ಜಕರೆಡ್ಡಿ (ಸಹಕಾರಿ),ಭಾಗ್ಯಶ್ರೀ ಎಲಿಗಾರ (ಆರೋಗ್ಯ ಇಲಾಖೆ),ಮಲ್ಲಮ್ಮ (ಕಂದಾಯ),ಯಶಸ್ವಿ ಭವಾನಿ ಭಟ್ಟ (ಭರತನಾಟ್ಯ),ಆರತಿ.ಎಂ ದೇವಪುರ ಮತ್ತು ಸೈಯದ್ ಸಬಿಹಾ ಬಾನು (ಶಿಕ್ಷಣ),ಸವಿತಾ ಬಿರಾದಾರ (ಸಮಾಜ ಸೇವೆ), ಪದ್ಮಾಕ್ಷಿ ಬಸೆಟ್ಟಿ ಜೈನೂರು (ಸಂಗೀತ) ಕ್ಷೇತ್ರ ಒಟ್ಟು 10 ಜನ ಮಹಿಳಾ ಸಾಧಕಿಯರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಪ್ರಕಾಶ ಬಣಗಾರ ತಿಳಿಸಿದ್ದಾರೆ.