ಕಲಬುರಗಿ ಉತ್ತರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ:39, ಸಮತಾ ಕಾಲೋನಿ ಟವರ್ ಗಾಜರೆ ಹಾಸ್ಟೇಲ್ ಹತ್ತಿರದಲ್ಲಿರುವ ಸಿ.ಸಿ. ರಸ್ತೆ ಮತ್ತು ಅದೇ ರಸ್ತೆಯ ಹತ್ತಿರ ಭೋರವೆಲ್ ಹಾಗೂ ಚೇಂಬರ್ ಡಕನ್‍ಗಳ ಕಾಮಗಾರಿಗಳನ್ನು ಮಾಡಲು ಸಂಬಂಧಪಟ್ಟ ಅಧಿಕಾರಿ ಶಾಸಕರಿಗೆ ಆದೇಶಿಸಬೇಕೆಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯರಾಜ್ ಇಲಾಖೆ ಮತ್ತು ಐ.ಟಿ.ಬಿ.ಟಿ ಸಚಿವ ಪ್ರೀಯಾಂಕ ಖರ್ಗೆ ಅವರಿಗೆ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಹಾಗೂ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ದಲಿತ ಸೇನೆಯ ತಾಲೂಕ ಉಪಾಧ್ಯಕ್ಷ ಸಮೀರ್ ಅವುಟಿ ಸರಕಾರ ಮತ್ತು ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಮ್ ಮೀಯಾ ಗಬ್ಬುರಿಯಾ ಮನವಿ ಸಲ್ಲಿಸಿದರು.
ಉತ್ತರ ವಿಧಾನಸಭಾ ಮತಕ್ಷೇತ್ರದಲ್ಲಿ ಬರುವ ವಾರ್ಡ ನಂ:39. ಸಮತಾ ಕಾಲೋನಿ ಟವರ್ ಗಾಜರೆ ಹಾಸ್ಟೇಲ್ ಹತ್ತಿರ ಮೊದಲಿರುವ ರಸ್ತೆ ಹಾಳಾಗಿ, ಸಾರ್ವಜನಿಕರಿಗೆ. ಮಹಿಳೆ. ಮಕ್ಕಳಿಗೆ. ದ್ವೀಚಕ್ರ ಸವಾರರಿಗೆ ಓಡಾಡಲು ಅತೀವ ತೊಂದರೆಯಾಗಿರುತ್ತದೆ. ಹೀಗಿದ್ದು, ಅಭಿವೃದ್ಧಿ ಹರಿಕಾರರಾಗಿರುವ ಉತ್ತರ ಮತಕ್ಷೇತ್ರದಲ್ಲಿ ಬರುವ ಈ ವಾರ್ಡನ 400 ಮೀಟರ್ ಸಿ.ಸಿ. ರಸ್ತೆಯನ್ನು (ಮೀರಾಸಾಬ ಸುಂಟನೂರ ಮನೆಯಿಂದ ಚಾಂದಬೀ ಮನೆಯವರೆಗೆ) ಸಿ.ಸಿ. ರಸ್ತೆಯನ್ನು ನಿರ್ಮಿಸುವುದು ಅತಿ ಅವಶ್ಯಕವಾಗಿರುತ್ತದೆ ಮತ್ತು ಅದೇ ರಸ್ತೆಯಲ್ಲಿ ಭೋರವೆಲ್ ನಿರ್ಮಾಣ ಹಾಗೂ ಚೆಂಬರ್‍ಗಳ ಡಕನ್ ಕಾಮಗಾರಿಗಳನ್ನು ಮಾಡಲು ಮಾನ್ಯ ಶಾಸಕರು ಉತ್ತರ ಮತಕ್ಷೇತ್ರ ಕಲಬುರಗಿ ರವರಿಗೆ ನಿರ್ದೇಶನ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.