ಕಲಬುರಗಿ: ಭಾಗ್ಯವಂತಿ ನಗರದಲ್ಲಿರುವ ಕಲಸ್ಕರ್ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಲಾಸ್ಕರ್ ಆಸ್ಪತ್ರೆಯ ನಿರ್ವಾಹಕರಾದ ಡಾ. ಸಂಗೀತಾ ಕಲಸ್ಕರ್ ನೇತೃತ್ವದಲ್ಲಿ ಗರ್ಭಕಂಠದ ಕ್ಯಾನ್ಸರ್ ಬರುವ ಅಪಾಯವನ್ನು ತಪ್ಪಿಸಲು ಹೆಚ್‍ಪಿವಿ ಲಸಿಕೆ ಪ್ರಾಮುಖ್ಯತೆಯ ಕುರಿತು ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಹಮ್ಮಿಕೊಳಲಾಯಿತು.
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮಕ್ಕಳ ತಜ್ಞವೈದ್ಯರಾದ ಡಾ.ಶರಣಬಸಪ್ಪ, ಡಾ.ಪ್ರತಿಭಾ ಅವರು ಮಾತನಾಡುತ್ತಾ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಸ್ಟಡೀಸ್ ಮೂಲಕ ಗರ್ಭಕಂಠದ ಕ್ಯಾನ್ಸರ್‍ಗೆ ಸಂಬಂಧಿಸಿದ ರೋಗಗಳು ಮತ್ತು ತಡೆಗಟ್ಟುವ ಆರೈಕೆಯ ಬಗ್ಗೆ. ಎಚ್‍ಪಿವಿ ವ್ಯಾಕ್ಸಿನೇಷನ್ (ಹ್ಯೂಮನ್ ಪ್ಯಾಪಿಲೋಮಾ ವೈರಸ್) ಡೋಸೇಜ್‍ಗಳು ಮತ್ತು ಲಸಿಕೆ ಹಾಕಿಸಿಕೊಳ್ಳಲು ವಯಸ್ಸಿನ ಅಗತ್ಯತೆಗಳ ಬಗ್ಗೆ ಹೇಳಿದರು.
ಈ ಸಂದರ್ಭದಲ್ಲಿ ಇನ್ನರವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ಅಧ್ಯಕ್ಷೆ ಪಲ್ಲವಿ ಮುಕ್ಕಾ, ಸಮಾಜ ಸೇವಕಿ ಲಕ್ಷ್ಮಿ ಡಿ. ಪಾಟೀಲ್ ರೇವೂರ ಸೇರಿದಂತೆ ಮಹಿಳೆರು ಇದ್ದರು.