ಕಲಬುರಗಿ: ಶಿವಮಂದಿರದಲ್ಲಿ ಶಿವಪಾರ್ವತಿ ಕಲ್ಯಾಣೋತ್ಸವ

0
28

ಕಲಬುರಗಿ: ಮಹಾ ಶಿವರಾತ್ರಿ ನಿಮಿತ್ತ ಜಯನಗರ ಶಿವಮಂದಿರದಲ್ಲಿ ಇಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶಿವ ಪಾರ್ವತಿ ಕಲ್ಯಾಣೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಕವಲಗಾ (ಕೆ) ವೀರಕ್ತ ಮಠದ ಪೀಠಾಧಿಪತಿ ಷ.ಬ್ರ.ಪೂಜ್ಯ ಶ್ರೀ ಷಣ್ಮುಖ ಶಿವಯೋಗಿ ಅವರು ಸಾನಿಧ್ಯ ವಹಿಸಿದ್ದರು.ನಂತರ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿದರು.ಆಶೀರ್ವಚನ ನೀಡಿ ಮಾತನಾಡಿದ ಅವರು ಜಯನಗರ ಶಿವಮಂದಿರದಲ್ಲಿ ಶಿವಪಾರ್ವತಿ ಕಲ್ಯಾಣೋತ್ಸವ ಮಾಡುತ್ತಿರುವುದು ವಿಶೇಷ ಪದ್ಧತಿಯಾಗಿದೆ.ಇಂಥ ಧರ್ಮ ಕಾರ್ಯಗಳು ಎಲ್ಲೆಡೆ ನಡೆಯಬೇಕು.ಶಿವನ ಆಧಾರಿಸುವುದು ಹಾಗೂ ಶಿವನನ್ನು ನೆನೆಯುವುದೇ ಮಹಾಶಿವರಾತ್ರಿ ಆಗಿದೆ.ಶಿವ ಶಿವ ಎಂದರೆ ಭಯವಿಲ್ಲ.ಮನಸ್ಸಿಗೆ ನೆಮ್ಮದಿ ಇರುತ್ತದೆ ಎಂದರು.

Contact Your\'s Advertisement; 9902492681

ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ಸುಮಾರು 12 ವರ್ಷದಿಂದ ಜಯನಗರ ಶಿವಮಂದಿರದಲ್ಲಿ ಶಿವಪಾರ್ವತಿ ಕಲ್ಯಾಣೋತ್ಸವ ಮಾಡಲಾಗುತ್ತಿದೆ.ಈ ವರ್ಷವೂ ವಿಜ್ರಂಭಣೆಯಿಂದ ಆಚರಿಸಲಾಯಿತು.ಇದಕ್ಕೆಲ್ಲ ಎಲ್ಲರ ಸಹಕಾರ ಸಿಕ್ಕಿದೆ ಎಂದರು.

ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ಟ್ರಸ್ಟ್ ಪದಾಧಿಕಾರಿಗಳಾದ ವಿರೇಶ ದಂಡೋತಿ, ಸೂರ್ಯಕಾಂತ ಕೆ.ಬಿ, ಬಸವರಾಜ ಮಾಗಿ , ಸಿದ್ಧಲಿಂಗ ಗುಬ್ಬಿ,ಬಂಡಪ್ಪ ಕೇಸೂರ, ಶಿವಪುತ್ರಪ್ಪ ಮರಡಿ, ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಸುನೀಲ್ ಬಿಡಪ್, ನಾಗರಾಜ ಖೂಬಾ,ಭೀಮಾಶಂಕರ ಶೆಟ್ಟಿ, ವಾಸುದೇವ ಮಾಲಿಬಿರಾದಾರ, ಎಂ.ಡಿ.ಮಠಪತಿ, ಎಸ್.ಡಿ.ಸೇಡಂಕರ,ಅಶೋಕ ಪಾಟೀಲ, ಶಿವಕುಮಾರ ಪಾಟೀಲ್,ಶ್ರೀಮತಿ ಅನುರಾಧ ಕುಮಾರಸ್ವಾಮಿ, ಸುಜಾತಾ ಭೀಮಳ್ಳಿ,ಸುನೀಲ್ ಬಿಡಪ ಮಹಿಳಾ ಘಟಕದ ಪದಾಧಿಕಾರಿಗಳಾದ ಶೈಲಜಾ ವಾಲಿ, ಅನಿತಾ ನವಣಿ, ಸುರೇಖಾ ಬಾಲಕೊಂದೆ, ವಿಜಯಾ ದಂಡೋತಿ, ಗೀತಾ ಸಿರಗಾಪೂರ , ಪಾರ್ವತಿ ಶೆಟ್ಟಿ, ಶಕುಂತಲಾ ಮರಡಿ, ಮಹಾಲಿಂಗಮ್ಮ ಮಠಪತಿ ಸೇರಿದಂತೆ ಅನೇಕ ಮಹಿಳೆಯರು ಮತ್ತು ಮಕ್ಕಳು ಹಾಗೂ ಹಿರಿಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here