ಸಂಗೀತ ಕಲಾವಿದರಿಗೆ ಸಾಧನೆ ಅಗತ್ಯ

0
39

ಕಲಬುರಗಿ ನಿಜವಾದ ಸಂಗೀತ ಕಲಾವಿದನಿಗೆ ಗುರು ಭಕ್ತಿ ಗುರು ಶ್ರದ್ದೆ ಬೇಕು ಅಂದಾಗ ಮಾತ್ರ ಸಂಗೀತದಲ್ಲಿ ಸಾಧನೆ ಆಗುತ್ತದೆ ಅಂತಹ ಸಾಧನೆ ಮಾಡಿದವರು ಡಾ. ಪಂ ಪುಟ್ಟರಾಜ ಕವಿ ಗವಾಯಿಗಳವರು ಎಂದು ದಿವ್ಯ ಸಾನಿಧ್ಯವಹಿಸಿದ ಷ. ಬ್ರ ಡಾ ಗುರುಮೂರ್ತಿ ಶಿವಾಚಾರ್ಯರು ಹಿರೇಮಠ ಪಾಳಾ ಶ್ರೀಗಳು ಆರ್ಶೀವಚನ ನೀಡಿದರು.

ನಗರದ ಕಲಾ ಮಂಡಳದಲ್ಲಿ ಗಡಿನಾಡ ಸಂಗೀತ ಸೇವಾ ಸಂಸ್ಥೆ (ರಿ) ಕಲಬುರಗಿ ಇವರ ವತಿಯಿಂದ ನಡೆದ ಡಾ. ಪಂ ಪುಟ್ಟರಾಜ ಕವಿ ಗವಾಯಿಗಳವರ 110 ನೇ ಜನ್ಮದಿನೋತ್ಸವದ ಅಂಗವಾಗಿ ಕಾವ್ಯ ಕುಂಚ ಗಾಯನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Contact Your\'s Advertisement; 9902492681

ಹಿರಿಯ ರಾಜಕಾರಣಿ ಅಣ್ಣಾರಾವ ದೂತ್ತರಗಾಂವ ಸಂಗೀತವು ಸಮಾಜದ ಒಂದು ಕಣ್ಣಾಗಿದೆ. ಹಾನಗಲ್ಲ ಕುಮಾರೇಶ್ವರರು ಸಮಾಜದಲ್ಲಿ ಸಂಗೀತ ಸ್ಥಾನ ಮಾನ ದೊರೆಯಲೆಂದು ಹುಟ್ಟು ಕುರುಡರಾದ ಪಂ. ಪಂಚಾಕ್ಷರಿ ಗವಾಯಿಗಳವರನ್ನು ಮಠಕ್ಕೆ ಕರೆತಂದು ಸಂಗೀತವು ಕಲಿಸಿದರು ಮುಂದೆ ಅದೆ ಮಠದಿಂದ ಪಂ. ಪಂಚಾಕ್ಷರಿ ಗವಾಯಿಗಳವರ ಪ್ರೀತಿಯ ಶಿಷ್ಯರೆ ಪಂ. ಪುಟ್ಟರಾಜ ಕವಿ ಗವಾಯಿಗಳವರು ಎಂದು ಪುಟ್ಟರಾಜ ಕವಿ ಗವಾಯಿಗಳವರ ಜೀವನ ಸಾಧನೆಯನ್ನು ತಿಳಿಸಿ ನಿಜವಾದ ಸಂಗೀತ ಕಲಾವಿದನಾಗಬೇಕಾದರೆ ನಿರಂತರವಾದ ಸಂಗೀತ ಸಾಧನೆ ಅವಶ್ಯಕ ಎಂದರು.

ಮುಖ್ಯ ಅತಿಥಿಗಳಾದ ಬಿ. ಎಚ ನಿರಗುಡಿ ಮಾತನಾಡಿ ಪುಟ್ಟರಾಜ ಕವಿ ಗವಾಯಿಗಳವರು ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ನಾಡಿಗೆ ಕೀರ್ತಿಯನ್ನು ತಂದಿದ್ದಾರೆ. ಇವತ್ತಿನ ಈ ವಿಶೇಷ ಕಾರ್ಯಕ್ರಮ ಕಾವ್ಯ ಕುಂಚ ಗಾಯನ ಎಂಬ ಕಾರ್ಯಕ್ರಮ ಇಟ್ಟುಕೊಂಡಿದ್ದು ತುಂಬ ಸಂತೋಷದಾಯಕವಾಗಿದೆ ಎಂದು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯ ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಲ್ಲಿಕಾರ್ಜುನ ಪೋಲೀಸಪಾಟೀಲ ಅವರು ಪ್ರತಿಯೊಬ್ಬ ಸಂಗೀತ ಕಲಾವಿದರು ಸಂಗೀತ ಪರಂಪರೆಯು ಹೊಂದಿಕೊಂಡು ಬಂದವರು. ಅಂದ ಅನಾಥರ ಆಶಾ ಕಿರಣವಾಗಿ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ. ಸಂಗೀತ ವಿದ್ಯೆ. ಶಿಕ್ಷಣ. ನೀಡಿ ಸಮಾಜಕ್ಕೆ ಜೀವಂತ ಗುರುಗಳಾಗಿದ್ದಾರೆ ಎಂದು ಮಾತನಾಡಿದ್ದರು. ಜಾನಕಿ ಹೊಸೂರು. ಡಾ. ಬಸವರಾಜ ಕಲಗುರ್ತಿ ಮಠ. ರೇವಯ್ಯ ವಸ್ತ್ರದಮಠ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾವ್ಯ ಕುಂಚ ಗಾಯನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರಾದ ಕವಿತಾ ಷಣ್ಮುಖ ಪಾಟೀಲ. ರವಿಕುಮಾರ್ ಆಳಂದ. ಪ್ರಶಾಂತ್ ಗೋಲ್ಟಸ್ಮೀತ. ಹಣಮಂತ ಜಮಾದಾರ. ವೀಣಾ ಮಠ ಡಾ. ಕಾಮೇಶ ಕಮಲಾಪೂರ. ಬಸವರಾಜ ಶ್ರೀಂಗೆರಿ. ವಿಕಾಸ ಪಂಚಾಳ ರೇವಣಯ್ಯ ಮಠಪತಿ . ಇವರಿಂದ ಕಾವ್ಯ ಕುಂಚ ಗಾಯನ ಕಾರ್ಯಕ್ರಮಗಳು ನಡೆದವು. ಸೂರ್ಯಕಾಂತ ಶಾಸ್ತ್ರಿ ನಿರೂಪಿಸಿದರು. ಗುರುಶಾಂತಯ್ಯ ಸ್ಥಾವರಮಠ ಸ್ವಾಗತಿಸಿದರು ಸಂಸ್ಥೆಯ ಅಧ್ಯಕ್ಷ ವೀರಭದ್ರಯ್ಯ ಸ್ಥಾವರಮಠ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here