ವಾಡಿ: ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಅಯೋಧ್ಯೆ ದಿಂದ ತಂದ ಸರಯೊ ನದಿಯ ಪವಿತ್ರ ತೀರ್ಥ,ಶ್ರೀ ರಾಮಲಲ್ಲಾ ಸನ್ನಿಧಿಯಲ್ಲಿನ ಭಸ್ಮದೊಂದಿಗೆ ಗಾಂಧಿ ವೃತ್ತದಲ್ಲಿನ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ಹಾಗೂ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರೀರಾಮನ ಜೈಘೋಷ್ ಮೂಳಗಿಸಿದರು.
ಕಳೆದ ಸೋಮವಾರ ದಿನಾಂಕ 04/03/24ರಂದು ವಿಶೇಷ ರೈಲಿನಲ್ಲಿ ಅಯೋಧ್ಯೆಗೆ ತೆರಳಿದ ಕೆಲ ಬಿಜೆಪಿ ಕಾರ್ಯಕರ್ತರು ಯಾತ್ರೆ ಕೈಗೊಂಡು,ಇಂದು ಪಟ್ಟಣಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಶ್ರೀರಾಮನ ದರ್ಶನ ಭಾಗ್ಯ ದಿಂದ ನಮ್ಮ ಜೀವನ ಪಾವನವಾಗಿದಂತಾಗಿದೆ.
ನಮ್ಮ ಹಿಂದುತ್ವದ ಅಸ್ತಿತ್ವಕ್ಕೆ ಸಾಕ್ಷಿಯಾಗಿ ನಮ್ಮೆಲ್ಲರ ವಿಶ್ವಾಸವೇ ರಾಮನಾಗಿದ್ದಾನೆ.ಸಾವಿರಾರು ವರ್ಷಗಳಿಂದ ಮತ್ತೆ ನಮಗೆ ದರ್ಶನ ಭಾಗ್ಯ ಒದಗಿಸುತ್ತಿದ್ದಾನೆ.ಈ ಅಯೋಧ್ಯೆ ಕ್ಷೇತ್ರ ಜಗತ್ತಿನಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಗೆ ಮುನ್ನಡಿಯಾಗಲಿದೆ.ಪಕ್ಷದ ಹಿರಿಯರು ನಮ್ಮ ಮೇಲಿನ ಕಾಳಜಿ ಯಿಂದ ಇಂತಹ ಸೌಭಾಗ್ಯ ದೊರೆತಿದೆ. ಇನ್ನೂ ಹೆಚ್ಚಿನ ಕಾರ್ಯಕರ್ತರಿಗೆ ಈ ಅವಕಾಶ ದೊರೆಯಲಿದೆ ಎಂದು ಹೇಳಿದರು.
ಯಾತ್ರೆ ಕೈಗೊಂಡಿದ್ದ ಮಹಿಳಾ ಮೂರ್ಚಾದ ಸದಸ್ಯರಾದ ಯಂಕಮ್ಮ ಗೌಡಗಾಂವ, ಉಮಾದೇವಿ ಗೌಳಿ, ದೆವಕ್ಕಿ ಪೂಜಾರಿ ಹಾಗೂ ಆಶಾ ರಾಠೋಡ ಅವರು ಅಯೋಧ್ಯೆ ದಿಂದ ತಂದಂತಹ ತೀರ್ಥ,ಭಸ್ಮ ಮತ್ತು ಪ್ರಸಾದ ಪೂಜೆಗೆ ಅರ್ಪಿಸಿದರು.
ಮುಖಂಡರಾದ ರಾಮಚಂದ್ರ ರಡ್ಡಿ, ಭೀಮರಾವ ದೊರೆ,ಗೋಪಾಲರಾವ ಸುತ್ರಾವೆ,ಸುನಿಲ ವರ್ಮಾ,ಹರಿ ಗಲಾಂಡೆ,ಯಮನಪ್ಪ ಪೂಜಾರಿ,ಸಿದ್ದಣ್ಣ ಸಾವಳಗಿ, ಭಾಗಣ್ಣ ದೊರೆ,ಸುನಿಲ ಪಂಚಾಳ, ಆನಂದ ಬೂಬ್,ಮಹಾಂತಪ್ಪ ಧರ್ಮಪುರ,ಸ್ಯಾಮಸನ್ ರಡ್ಡಿ,ಪಾಂಡುರಂಗ ಕಾನಕುರ್ತೆ, ಸುಭಾಷ ಬಳಚಡ್ಡಿ, ಬಸವರಾಜ ಪಗಡಿಕರ ಸೇರಿದಂತೆ ಅನೇಕರು ಇದ್ದರು.