ಕೃಷಿ ಸಖಿಯರಿಗೆ ನೈಸಿರ್ಗಕ ಕೃಷಿ ತರಬೇತಿ

0
16

ಕಲಬುರಗಿ: ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ,1, ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಾಹಣಾ ಸಂಸ್ಥೆ, ಹೈದ್ರಾಬಾದ ಹಾಗೂ ಸಂಜೀವಿನ ಸಂಸ್ಥೆ, ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಆವರಣದಲ್ಲಿ ಕೃಷಿ ಸಖಿಯರಿಗಾಗಿ 5 ದಿನಗಳ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮವನ್ನು ಡಾ. ಎಸ್.ಬಿ. ಗೌಡಪ್ಪ, ವಿಸ್ತರಣಾ ನಿರ್ದೇಶಕರು, ಕೃ.ವಿ.ವಿ, ರಾಯಚೂರುರವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕೃಷಿ ಸಖಿಯರು ವಿಜ್ಞಾನಿಗಳು ಮತ್ತು ರೈತರ ನಡುವೆ ನೂತನ ತಂತ್ರಜ್ಞಾನಗಳನ್ನು ತಲುಪಿಸಲು ಸೇತುವೆಯಾಗಿ ಕಾರ್ಯನಿರ್ವಹಿಸಬೇಕೆಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ. ಸಿದ್ರಾಮಪ್ಪಾ ಪಾಟೀಲ್, ಧಂಗಾಪೂರ, ಅಧ್ಯಕ್ಷರು, ಕೃಷಿಕ ಸಮಾಜ, ಕಲಬುರಗಿ ಜಿಲ್ಲೆ ರವರು ಮಾತನಾಡಿ ಬದಲಾದ ಪರಿಸ್ಥಿತಿಯಲ್ಲಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದು, ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ತಂತ್ರಜ್ಞಾನಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಿದ್ದಲ್ಲಿ ಕೃಷಿಯನ್ನು ಲಾಭದಾಯಕವಾಗಿ ಮಾಡಬಹುದೆಂದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಕೇಂದ್ರದ ಮುಖ್ಯಸ್ಥರಾದ ಡಾ. ರಾಜು ಜಿ.ತೆಗ್ಗೆಳ್ಳಿರವರು ಮಾತನಾಡಿ ಕೃಷಿ ಸಖಿಯರಿಗೆ ಕ್ಷೇತ್ರದಲ್ಲಿ ಎದುರಾಗುವ ಹಲವು ರೈತರ ಸಮಸ್ಯೆಗಳಿಗೆ ಪರಿಹರಿಸಲು ಕೆವಿಕೆಯ ವಿಜ್ಞಾನಿಗಳು ಸದಾ ಜೊತೆಯಲ್ಲಿರುತ್ತಾರೆ ಭರವಸೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಸಂಯೋಜಕರಾದ ಡಾ. ಶ್ರೀನಿವಾಸ ಬಿ.ವಿ ರವರು ಮಾತನಾಡಿ ರೈತರು ತಮ್ಮ ಜಮೀನಿನ ಮಣ್ಣು ಮತ್ತು ನೀರು ಪರೀಕ್ಷಿಸಿ ಫಲವತ್ತತೆ ಆಧಾರದ ಮೇಲೆ ಸ್ಥಳೀಯ ಪದ್ದತಿಗಳನ್ನು ಅರ್ಥೈಸಿಕೊಂಡು ನೈಸಿರ್ಗಿಕ ಕೃಷಿಯನ್ನಾಗಿ ಪರಿವರ್ತಿಸಿದರೆ ಕ್ರಮೇಣ ರಾಸಾಯನಿಕ ಪರಿಕರಗಳ ಬಳಕೆ ಕಡಿಮೆ ಮಾಡುವುದರ ಮೂಲಕ ಮಣ್ಣಿನ ಆರೋಗ್ಯ ಕಾಪಾಡುವುದರ ಜೊತೆಗೆ ಕಡಿಮೆ ವೆಚ್ಚದಲ್ಲಿ ಕೃಷಿ ಕೈಗೊಂಡು ಆರೋಗ್ಯಯುತ ಸಮಾಜ ನಿರ್ಮಿಸಬಹುದೆಂದರು.

ಕಾರ್ಯಕ್ರಮದಲ್ಲಿ ಡಾ. ಎಂ.ಎಂ. ಧನೋಜಿ, ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ, ಡಾ. ಸಂಗಪ್ಪಾ, ವಿಜ್ಞಾನಿಗಳು (ಕೃಷಿ ವಿಸ್ತರಣೆ) ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ, ಹೈದ್ರಾಬಾದ್, ಡಾ. ರಾಚಪ್ಪಾ ಹಾವೇರಿ, ಡಾ. ವಾಸುದೇವ ನಾಯ್ಕ್, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆವಿಕೆ, ರದ್ದೇವಾಡೆಗಿ ಡಾ. ಹನುಮಂತ ನಾಯ್ಕ್, ನಾಗಿಂದ್ರ ಬಡದಾಳಿ , ಮಹೇಶ ಹುಗಾರ ಹಾಗೂ 30 ಕೃಷಿ ಸಖಿಯರು ಭಾಗವಹಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here