ಆರ್.ಎಸ್.ಪಿ ಪಕ್ಷ ಕರ್ನಾಟಕದ 28 ಕ್ಷೇತ್ರಗಳಲ್ಲಿ ಸ್ಪರ್ಧೆ

0
15

ಕಲಬುರಗಿ : ರಾಷ್ಟ್ರೀಯ ಸಮಾಜ ಪಕ್ಷವು ಕರ್ನಾಟಕ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಹಾಗೂ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕ ಉಪಚುನಾವಣೆ ಅಭ್ಯರ್ಥಿ ಕುರಿತು ಸ್ಪರ್ಧೆ ಮಾಡಲಿದ್ದಾರೆ ಎಂದು ಆರ್ ಎಸ್ ಪಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ್, ರಾಜ್ಯಾಧ್ಯಕ್ಷ ಧರ್ಮಣ್ಣ ತೋಟಪುರ್ ತಿಳಿಸಿದ್ದಾರೆ.

ಬೀದರ್, ಕಲಬುರಗಿ, ಬಾಗಲಕೋಟ್, ಬಿಜಾಪುರ ಮತ್ತು ಬೆಳಗಾಂ ಜಿಲ್ಲೆಗಳ ಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಸಾಮಾಲೋಚನೆ ಸಭೆ ಅಂತಿಮಗೊಂಡಿದೆ. ಉತ್ತರ ಕರ್ನಾಟಕದ ಹಾಗೂ ದಕ್ಷಿಣ ಬೆಂಗಳೂರು ಗ್ರಾಮಾಂತರ ರಾಮನಗರ .ಕೋಲಾರ ಸೇರಿದಂತೆ ಉಳಿದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಆರ್ ಎಸ್ ಪಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ್ ನೇತೃತ್ವದ ತಂಡ ಆಯಾ ಜಿಲ್ಲೆಗಳಿಗೆ ಭೇಟಿಕೊಟ್ಟು ಅಭ್ಯರ್ಥಿಗಳ ಆಯ್ಕೆ ನಡೆಸಲಿದೆ. ಪಕ್ಷವು ಚುನಾವಣಾ ಬಹಿರಂಗ ಸಭೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಆರ್ ಎಸ್ ಪಿ ಪಕ್ಷಕ್ಕೆ ಈಗಾಗಲೇ ನೂರಾರು ಜನ ಅಭ್ಯರ್ಥಿಗಳು ಪಕ್ಷದ ಟಿಕೆಟ್ಗಾಗಿ ಮನವಿ ಸಲ್ಲಿಸಿದ್ದಾರೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಳೀಯ ಕಾರ್ಯಕರ್ತರ ಸಭೆ ಸೇರಿ ನಮ್ಮ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಹಾಗೂ ಅಭ್ಯರ್ಥಿಗಳ ಆಯ್ಕೆ ಜೊತೆ ಜೊತೆಗೆ ನಡೆದಿದೆ ಎಂದರು.

ಆಯಾ ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಪಕ್ಷದ ಗುರಿ ಹಾಗೂ ಜನರ ಪರ ಯೋಜನೆಗಳನ್ನು ಬದ್ಧತೆಯಿಂದ ಕ್ರಿಯಾ ಯೋಜನೆ ಕುರಿತು ಪ್ರಣಾಳಿಕೆಯಲ್ಲಿ ತಿಳಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಲಬುರ್ಗಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯದರ್ಶಿ ಶರಣಬಸಪ್ಪ ದೊಡ್ಮನಿ, ದೇವಾನಂದ ಕೋಲಿ, ರಾಜ್ಯ ಉಪಾಧ್ಯಕ್ಷರು, ಕಲಬುರ್ಗಿ ಜಿಲ್ಲಾಧ್ಯಕ್ಷ ದೇವೇಂದ್ರ ಕ್ಯಾಸಪಳ್ಳಿ, ಕಾರ್ಯದರ್ಶಿ ಶ್ರೀಮಂತ ಮಾವನೂರ್, ಜೇವರ್ಗಿ ತಾಲೂಕ ಅಧ್ಯಕ್ಷ ಮಹಾಂತೇಶ್ ಔರಾದ್, ಶಾಬಾದ್ ತಾಲೂಕ್ ಅಧ್ಯಕ್ಷ ರಮೇಶ್ ಕಮ್ಮೇಶ್ವರ್ , ಮಹಿಳಾ ಘಟಕದ ಅಧ್ಯಕ್ಷರಾದ ಅಂಬಿಕಾ ಬಂಡಗಾರ್ ಯುವ ಘಟಕದ ಅಧ್ಯಕ್ಷ ಸಾಹೇಬಣ್ಣ ಅರಳಗುಂಡಗಿ , ವಿಜಯ್ ಕುಮಾರ್, ದಿವಾಕರ್ , ಭೀಮಣ್ಣ ಕಟ್ಟಿ ಸೇರಿದಂತೆ ಇತರೆ ನೂರಾರು ಜನ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here