ಕಲಬುರಗಿ; ಸಿಡಿಲು ಬಡಿದು ಸ್ಥಳದಲ್ಲೇ ಯುವಕ ಸಾವು

0
185

ಕಲಬುರಗಿ: ಸಿಡಿಲು ಬಡೆದು ಯುವಕ ಮತ್ತು ಎರಡು ಕುರಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೇಡಂ ತಾಲೂಕಿನ ಮುಧೋಳ ವ್ಯಾಪ್ತಿಯ ಕಿಷ್ಟಪೂರ ಗ್ರಾಮದಲ್ಲಿ ಸೋಮವಾರ ಸಂಜೆ ವೇಳೆ ನಡೆದಿದೆ.

ಕಿಷ್ಟಪುರ ಗ್ರಾಮದ ಶಾಂತಕುಮಾರ್ (30) ಮೃತಪಟ್ಟ ಯುವಕ. ಹತ್ತಿರದ ಹೋಲದಲ್ಲಿ ಕುರಿ ಕಾಯುವ ವೇಳೆ ಗಾಳಿ ಮಳೆ ಬರಲು ಶುರುವಾದಗ ಅಲ್ಲೇ ಇದ್ದ ಗೀಡದ ಕೇಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜೊತೆಗೆ ಎರಡು ಕುರಿಗಳು ಕೂಡ ಮೃತಪಟ್ಟಿವೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಮಾಹಿತಿ ತಿಳಿದಂತೆ ಘಟನಾ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಸಹಾಯಕ ನೊಂದಣಾಧಿಕಾರಿ ಶಿವಾನಂದ ಮೆತ್ರಿ, ಮುಧೋಳ ಪೋಲಿಸ್ ಠಾಣೆ ಪಿಐ ದೌಲತ್ ಎನ್ ಕುರಿ, ಎಎಸ್ ಆಯ್ ನಾಗೇಂದ್ರಪ್ಪ, ಓಪಿ ಯಾನಾಗುಂದಿ, ರೈಟರ್ ಶಿವುಕುಮಾರ ಹಾಗೂ ಪೋಲಿಸ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶಿಲನೆ ನಡೆಸಿದ್ದರು.

ಈ ಕುರಿತು ಮುಧೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here