ಜನಪರ ಹೋರಾಟಗಾರ ವಾಲ್ಮೀಕಿ ನಾಯಕ್ ಸೇವೆ ಅವಿಸ್ಮರಣೀಯ: ಡಾ.ಉಮೇಶ್ ಜಾಧವ್

0
16

ವಾಡಿ: ಮಾಜಿ ಶಾಸಕರಾದ ವಾಲ್ಮೀಕಿ ನಾಯಕ ಅವರು ಕಡುಬಡತನದಲ್ಲಿ ಹುಟ್ಟಿ ಸಮಾಜದ ನೋವನ್ನು ಅರಿತು ಸಮಾಜಕ್ಕೆ ಬೆಳಕಾಗಿ ಮಾಡಿದ ಸೇವೆ ಅವಿಸ್ಮರಣೀಯ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದರು .

ವಾಡಿಯಲ್ಲಿ ಮಾರ್ಚ್ 19 ರಂದು ಮಂಗಳವಾರ ಸಾಹೇಬ್ ಪಂಕ್ಷನ್ ಹಾಲ್ ನಲ್ಲಿ ನಡೆದ ವಾಲ್ಮೀಕಿ ನಾಯಕ ಅವರ ಮೂರನೇ ಪುಣ್ಯತಿಥಿ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು ಬಡ ಕುಟುಂಬದಲ್ಲಿ ಹುಟ್ಟಿ ಕಾರ್ಮಿಕ ನಾಯಕನಾಗಿ ಬೆಳೆದು ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕ ನಾಯಕನಾಗಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ನಂತರ ಶಾಸಕರಾಗಿ ಚಿತಾಪುರದಲ್ಲಿ ಬಡವರ ದೀನದಲಿತರ ಕಲ್ಯಾಣಕ್ಕಾಗಿ ಉತ್ತಮ ಕೆಲಸ ಮಾಡಿದ ಒಬ್ಬ ನಿಷ್ಠಾವಂತ ಕಾರ್ಯಕರ್ತರು. ರಾಮ ಲಾಲ್ ಮಹಾರಾಜರ ಪರಮ ಭಕ್ತರಾಗಿ ವಾಡಿಯಲ್ಲಿ ಸೇವಾಲಾಲ್ ಜಯಂತಿಯನ್ನು ಅದ್ದೂರಿಯಾಗಿ ನಡೆಸುವಲ್ಲಿ ವಾಲ್ಮೀಕಿ ನಾಯಕ ಅವರು ಆರ್ ಬಿ.ಚೌಹಾಣ್,ಡಾ. ರಾಮ ಮುಂತಾದವರ ನೇತೃತ್ವದಲ್ಲಿ ಪ್ರಮುಖ ಪಾತ್ರ ವಹಿಸಿದವರು.

Contact Your\'s Advertisement; 9902492681

ಜನಪರ ಹೋರಾಟಗಾರನಾಗಿ ಬಡ ಬಗ್ಗರ ಕಣ್ಣೀರು ಒರೆಸಿದ ಜನನಾಯಕ. ಅವರು ಭೌತಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ಅವರ ಆದರ್ಶ ಸದಾ ನಮ್ಮೊಂದಿಗೆ ಇರುತ್ತದೆ ನನಗೂ ಅವರು ಪ್ರೇರಣೆಯ ವ್ಯಕ್ತಿತ್ವ ಎಂದು ತಿಳಿಸಿದರು.

ವಾಲ್ಮೀಕಿ ನಾಯಕ ಅವರ ಸುಪುತ್ರ ಯುವ ಮುಖಂಡ ವಿಠಲ ನಾಯಕ್ ಕೂಡಾ ತಂದೆಯ ಮಾರ್ಗದಲ್ಲಿ ನಡೆದು ಜನಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಜಾಧವ್ ಹೇಳಿದರು.

ನಂತರ ಅವರು ವಾಲ್ಮೀಕಿ ನಾಯಕ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಏರ್ಪಡಿಸಿದ ಆರೋಗ್ಯ ಶಿಬಿರವನ್ನು ಚಿತ್ತಾಪುರದ ಶ್ರೀ ಸೋಮಶೇಖರ ಶಿವಾಚಾರ್ಯರು ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ವಿಠಲ್ ನಾಯಕ್, ಶಿವಲಿಂಗಪ್ಪ ವಾಡೆದ, ಲಿಂಗಾ ರೆಡ್ಡಿ ಶೇರಿ, ರಾಮಚರಣರೆಡ್ಡಿ, ಮೆಹಬೂಬ್ ಸಾಬ್, ರಮೇಶ್ ಕಾರಬಾರಿ, ಕೃಷ್ಣಾ ನಾಯಕ್, ಬಾಬು ಮಿಯಾ, ಭೀಮಾ ರಾವ್ ದೋನಿ, ಸಿದ್ದಣ್ಣ ಕಲಶೆಟ್ಟಿ, ಭೀಮಶಾ ಜಿರಳ್ಳಿ, ಅಶೋಕ್ ಪವಾರ್, ಕಿಶನ್ ಜಾಧವ್, ಅಂಬಾದಾಸ್ ಜಾಧವ್, ಗಿರಿ ಮಲ್ಲಪ್ಪ ಕಟ್ಟಿಮನಿ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here