ಅಫಜಲಪೂರ: ಪಟ್ಟಣದ ಮಾಶ್ಯಾಳ ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಹಂತದ ಸಮುದಾಯ ಆಧಾರಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಶಿಬಿರದಲ್ಲಿ ಸುಮಾರು 108 ಜನರಿಗೆ ಎಚ್ಐವಿ/ಏಡ್ಸ್, ಹೇಪಟೈಟೀಸ್ ಬಿ, (Hbsag,) ಸಿಪ್ಲೀಸ ರೋಗಗಳ ಕುರಿತು ಮತ್ತು ಓರಲ್ ಡೇಂಟಲ್ ಹೆಲ್ತ್ ಚೆಕ್ಕಪ್ ಸಮುದಾಯ ಜನರಿಗೆ ಮಾಹಿತಿ ನೀಡುವುದರ ಜೊತೆಗೆ, ರಕ್ತ ಪರೀಕ್ಷೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದಂತ ವೈದ್ಯರಾದ ಡಾ. ಮನಾಲಿ ,, ಡಾ. ಆರಾಧನಾ , ಐಸಿಟಿಸಿ ಆಪ್ತಸಮಾಲೋಚಕ ರವಿಕುಮಾರ ಭುಲೆ೯ ಪ್ರಯೋಗ ಶಾಲಾ ತಂತ್ರಜ್ಞ ಗೌತಮ್ ಮೈಸಲಗಿ. ಎನ್ ಸಿ ಡಿ ಆಪ್ತಸಮಾಲೋಚಕ ಸುನಿತಾ ಕಂಬಳಿಮಠ, ಆರ್.ಕೆ.ಎಸ್.ಕೆ. ಆಪ್ತ ಸಮಾಲೋಚಕರಾದ ಸುಜಾತ ಹೀರೆಮಠ. ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆಯ ಸಾವಿತ್ರಿ, ಜ್ಯೋತಿ ಜಗದೇವಿ ಹಾಗೂ ರಾಜೇಶ್ವರಿ ಅವರು ಗ್ರಾಮದ ಜನರಿಗೆ ಉಚಿತ ಚಿಕಿತ್ಸಾ ಶಿಬಿರದ ಲಾಭ ಪಡೆದುಕೊಂಡರು. ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.