ತಾತಾ ಅಪ್ಪ ಚಿಕ್ಕಪ್ಪಂದಿರು ಅಣ್ಣ ಯಾರೂ ಇಲ್ಲಾ ನೀವೆ ಎಲ್ಲಾ ನಮಗೆ; ಆರ್.ವಿ ನಾಯಕ ಭಾವುಕ ನುಡಿ

0
100

ಸುರಪುರ: ನಮ್ಮ ತಾತಾ ರಾಜಾ ಕುಮಾರ ನಾಯಕ ನಮಗೆ ಆದರ್ಶವನ್ನು ಕಲಿಸಿದ್ದಾರೆ,ಈಗ ತಾತಾ ಇಲ್ಲಾ,ಸ್ನೇಹಿತನಂತಿದ್ದ ಚಿಕ್ಕಪ್ಪ ರಾಜಾ ಶ್ರೀರಾಮ ನಾಯಕ ಇಲ್ಲಾ,ರಾಜಾ ರಂಗಪ್ಪ ನಾಯಕ,ರಾಜಾ ಮೌನೇಶ್ವರ ನಾಯಕ ಹಾಗೂ ಅಣ್ಣನಾದ ರಾಜಾ ರೂಪಕುಮಾರ ನಾಯಕ ಮತ್ತು ನಮ್ಮ ಶಕ್ತಿಯಾಗಿದ್ದ ನಮ್ಮ ತಂದೆ ರಾಜಾ ವೆಂಕಟಪ್ಪ ನಾಯಕ ಯಾರೂ ಇಲ್ಲಾ ನಮಗೀಗ ಎಲ್ಲಾ ನೀವೆ ಎಂದು ರಾಜಾ ವೇಣುಗೋಪಾಲ ನಾಯಕ ಕಣ್ಣೀರಿನೊಂದಿಗೆ ಭಾವುಕರಾಗಿ ಮಾತನಾಡಿದರು.

ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರು ಹಾಗೂ ಶಾಸಕ ದಿ.ರಾಜಾ ವೆಂಕಟಪ್ಪ ನಾಯಕ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ,ಅಪ್ಪ ನಮಗೆ ದೊಡ್ಡ ಶಕ್ತಿಯಾಗಿದ್ದರು,ಈಗ ಅವರಿಲ್ಲ ಎನ್ನುವುದು ನೋವಿನ ಸಂಗತಿ ನೀವೆಲ್ಲರು ನಮಗೆ ಆಶಿರ್ವದಿಸಿ ಅನೇಕ ಹಿರಿಯರು ಮಾರ್ಗದರ್ಶನ ಮಾಡುತ್ತಿದ್ದು ಇಡೀ ಕ್ಷೇತ್ರದ ಅಭಿವೃಧ್ಧಿಗೆ ಅಪ್ಪನ ಕಾರ್ಯವನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ,ನಮ್ಮೊಂದಿಗೆ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಇದ್ದಾರೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ,ಫೆಬ್ರವರಿ 25 ರಂದು ರಾಜಾ ವೆಂಕಟಪ್ಪ ನಾಯಕ ಅವರು ನಿಧನರಾಗಿರುವ ಸುದ್ದಿ ಕೇಳಿದಾಗ ತುಂಬಾ ಆಘಾತವಾಯಿತು.ರಾಜಾ ವೆಂಕಟಪ್ಪ ನಾಯಕ ಅವರು ಈ ಭಾಗದ ದೊಡ್ಡ ಶಕ್ತಿ,ಅವರ ನಿಧನ ದಿಂದ ಕಾಂಗ್ರೆಸ್ ಪಕ್ಷಕ್ಕೆ,ಕ್ಷೇತ್ರಕ್ಕೆ ದೊಡ್ಡ ನಷ್ಟವುಂಟಾಗಿದೆ,ಅವರನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಎಂದು ಊಹಿಸಿರಲಿಲ್ಲ,ಅವರು ಸಚಿವರಾಗಬೇಕಿತ್ತು,ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಬರುತ್ತಿತ್ತು,ಈಗ ಉಗ್ರಾಣ ನಿಗಮದ ಅಧ್ಯಕ್ಷರಾದಾಗ ನಾನು ಸಚಿವ ರಾಜಣ್ಣ ಇದ್ದು ಅಧಿಕಾರ ಪದಗ್ರಹಣದಲ್ಲಿ ಜೊತೆ ಇದ್ದೇವು,ನಂತರ ಅವರು ಆಸ್ಪತ್ರೆಗೆ ಹೋದವರು ಮರಳಿ ಬರಲಿಲ್ಲ ಎಂದು ನೋವಿನಿಂದ ಮಾತನಾಡಿದರು.

ಮುಂದೆ ರಾಜಾ ವೆಂಕಟಪ್ಪ ನಾಯಕ ಅವರಿಗೆ ಕೊಟ್ಟಂತ ಪ್ರೀತಿ,ಬೆಂಬಲ ರಾಜಾ ವೇಣುಗೋಪಾಲ ನಾಯಕ ಮತ್ತು ಅವರು ಎಲ್ಲಾ ತಮ್ಮಂದಿರಿಗೆ ಕುಟುಂಬಕ್ಕೆ ನೀಡಿ ಎಂದು ಎಲ್ಲರಲ್ಲಿ ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಮಾತನಾಡಿ,ರಾಜಾ ವೆಂಕಟಪ್ಪ ನಾಯಕ ಅವರು ಎಂದೂ ಬೇರೆಯವರ ಬಗ್ಗೆ ರಾಜಕೀಯ ಮಾಡಿದ ವ್ಯಕ್ತಿಯಲ್ಲ,ಅವರು ಎಂತಹ ಮುಗ್ಧರು ಎನ್ನುವುದು ಜೊತೆಗಿದ್ದು ನಾನು ಕಂಡಿದ್ದೇನೆ,ನನಗೇನು ಕೋಟಿ ರೂಪಾಯಿ ಕೆಲಸ ಕೊಟ್ಟಿಲ್ಲ ಆದರೆ ಅಂತಹ ವ್ಯಕ್ತಿಯನ್ನು ಕಳೆದುಕೊಂಡಿದ್ದು ತುಂಬಾ ದುಖಃ ತಂದಿದೆ ಎಂದು ಗಳ ಗಳನೆ ಅಳುತ್ತಿದ್ದರೆ ಎಲ್ಲರ ಕಣ್ಣಾಲಿಗಳು ಒದ್ದೆಯಾದವು.

ಕಾರ್ಯಕ್ರಮದ ಆರಂಭದಲ್ಲಿ ಅನೇಕ ಜನ ಪೂಜ್ಯರು ಹಾಗೂ ಮುಖಂಡರು ದಿ.ರಾಜಾ ವೆಂಕಟಪ್ಪ ನಾಯಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ,ನಂತರ ಎರಡು ನಿಮಿಷಗಳ ಮೌನಾಚರಣೆ ಮಾಡಿ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿದರು.ನಂತರ ತಿಂಥಣಿ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಎಲ್ಲರಿಗೂ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಕುರಿತಾದ ಹಿತನುಡಿ ಬೋಧಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕೊಡೇಕಲ್ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ,ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದ ಪ್ರಭುಲಿಂಗ ಮಹಾಸ್ವಾಮೀಜಿ,ಮುದನೂರ ಕಂಠಿ ಮಠದ ಶಾಂತಚನ್ನಮಲ್ಲಿಕಾರ್ಜುನ ಸ್ವಾಮೀಜಿ,ವಿಠ್ಠಲ್ ಸೇವಾ ಮಹಾರಾಜ,ಸಂತ ಸೇವಾಲಾಲ್ ಮಹಾರಾಜ,ಪೇಠ ಅಮ್ಮಾಪುರದ ಸ್ವಾಮೀಜಿ ಹಾಗೂ ತೊಗರಿ ಅಭಿವೃಧ್ಧಿ ಮಂಡಳಿ ಅಧ್ಯಕ್ಷ ಮರಿಗೌಡ ಹುಲಕಲ್,ಶರಣಪ್ಪ ಸದಲಾಪುರ,ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್,ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ್ ಅನಪೂರ,ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್,ಭೀಮರಾಯ ಮೂಲಿಮನಿ,ಬಾಪುಗೌಡ ಹುಣಸಗಿ,ಮಹಾದೇವಿ ಬೇವಿನಾಳಮಠ ಮಾತನಾಡಿದರು.ಮಾನಪ್ಪ ಸೂಗೂರ ನಿರೂಪಿಸಿದರು,ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಹುಣಸಗಿ ಸ್ವಾಗತಿಸಿದರು,ಹಣಮಂತ್ರಾಯ ಮಕಾಶಿ ವಂದಿಸಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ವಿಠ್ಠಲ್ ಯಾದವ್,ರಾಜಾ ವಾಸುದೇವ ನಾಯಕ,ರಾಜಾ ಪಿಡ್ಡ ನಾಯಕ,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ವೆಂಕಟೇಶ ಹೊಸ್ಮನಿ,ರಾಜಾ ಸಂತೊಷಕುಮಾರ ನಾಯಕ,ರಾಜಾ ವಿಜಯಕುಮಾರ ನಾಯಕ,ರಾಜಾ ಸುಷಾಂತ ನಾಯಕ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

ರಾಜಾ ವೆಂಕಟಪ್ಪ ನಾಯಕ ಅವರಿಗೆ ನೀವೆನಾದರು ಕೊಡುಗೆ ನೀಡಬೇಕೆಂದಿದ್ದರೆ ಎಲ್ಲರು ರಾಜಾ ವೇಣುಗೋಪಾಲ ನಾಯಕ ಅವರನ್ನು ಗೆಲ್ಲಿಸಿ ರಾಜಾ ವೆಂಕಟಪ್ಪ ನಾಯಕ ಅವರ ಕ್ಷೇತ್ರದ ಸೇವೆಗೆ ಗೌರವ ಸಲ್ಲಿಸಿ. – ಶರಣಬಸಪ್ಪಗೌಡ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವರು.

ನಮಗೆ ಎಲ್ಲಾ ನೀವೆ ಆಗಿರುವಿರಿ,ನೀವೆಲ್ಲರು ನಮ್ಮ ತಂದೆಗೆ ನೀಡಿದ ಪ್ರೀತಿ ಶಕ್ತಿಯನ್ನು ನೀಡುವಂತೆ ನಿಮ್ಮೆಲ್ಲರಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇವೆ. – ರಾಜಾ ವೇಣುಗೋಪಾಲ ನಾಯಕ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here