ಕಲಬುರಗಿ ಕಸಾಪ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ; ಕೇಂದ್ರ ಸಮಿತಿಗೆ ನಿಯೋಗ ತೆರಳುವುದಾಗಿ ಅಷ್ಟಗಿ ಸ್ಪಷ್ಟನೆ

0
137

ಕಲಬುರಗಿ: ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧಕ್ಷರಾದ ವಿಜಯಕುಮಾರ ತೆಗಲತಿಪ್ಪಿಯವರು ಪರಿಷತ್ತಿನ ನಿಯಮಾವಳಿಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು ಜಿಲ್ಲಾ ಕಾರ್ಯಕಾರಿ ಮಂಡಳಿಯ ಸದಸ್ಯರು ಹಾಗೂ ಪದಾದಿಕಾರಿಗಳನ್ನು ಯಾವುದಕ್ಕೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಮುಖವಾಗಿ ನಿರ್ಧಾರ ತೆಗೆದು ಕೊಳ್ಳುತ್ತಿದ್ದಾರೆ. ಅದೇ ನಿಟ್ಟಿನಲ್ಲಿ ಕಸಾಪ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆಯನ್ನು ಪಡೆಯದೆ ಇನ್ನೊಬ್ಬರನ್ನು ನೇಮಿಸಿಕೊಂಡಿದ್ದಾರೆಂದು ಯಶವಂತರಾಯ ಅಷ್ಟಗಿ ಆರೋಪಿಸಿದರು.

ಪ್ರತಿನಿತ್ಯ ಸಾಹಿತ್ಯಕ ಹಾಗೂ ಸಾಂಸ್ಕೃತಿಕವಲ್ಲದ ಅರ್ಥ ರಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಗೌರವ ಕಾರ್ಯದರ್ಶಿ ಹಾಗೂ ಇತರೆ ಪದಾಧಿಕಾರಿಗಳಿಗೆ ಕಾರ್ಯಕ್ರಮಗಳ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ ಹಾಜರಿರುವಂತೆ ಒತ್ತಾಯ ಪಡಿಸುತ್ತಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಪದಾಧಿಕಾರಿಗಳಿಗೆ ಅಬಿಪ್ರಾಯ ನೀಡಲು ಸ್ವಾತಂತ್ರವಿಲ್ಲ, ಕಾರ್ಯಕ್ರಮಗಳ ಅರ್ಥಪೂರ್ಣ ಯಶಸ್ವಿಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದವರಿಗೆ ಮತ್ತು ಪ್ರತಿಭಾವಂತರಿಗೆ ಪರಿಷತ್ತಿನ ಪದಾದಿಕಾರಿ ಸ್ಥಾನದಿಂದ ತಮ್ಮಿಷ್ಟದಂತೆ ಬದಲಾಯಿಸುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾ ಕ.ಸಾ.ಪ ಕಾರ್ಯಕಾರಿ ಮಂಡಳಿಯಲ್ಲಿ ನನ್ನ ಬದಲಾವಣೆಯ ಕುರಿತು ಯಾವುದೇ ನಿರ್ಣಯ ತೆಗೆದುಕೊಂಡು ಕಸಾಪ ರಾಜ್ಯಾದ್ಯಕ್ಷರ ಅನುಮೋದನೆ ಪಡೆಯಲಾಗಿದೆಯೇ? ಎಂಬ ಕುರಿತು ನನಗೆ ಯಾವುದೇ ಲಿಖಿತ ಮಾಹಿತಿ ನೀಡಿರುವುದಿಲ್ಲ ಹಾಗಾಗಿ ಜಿಲ್ಲಾಧ್ಯಕ್ಷರು ಪರಿಷತ್ತನ್ನು ತಮ್ಮ ಸ್ವಂತ ಆಸ್ತಿಯ ಹಾಗೆ ಬಳಸಿಕೊಳ್ಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಶರಣಗೌಡ ಪಾಟೀಲ್ ಪಾಳಾ, ಬಸವಂತರಾಯ ಕೋಳಕೂರ, ಶಿವಯೋಗಿ ಭಜಂತ್ರಿ, ಪರಮೇಶ್ವರ ದಂಡಿನಕರ್ ಇದ್ದರು.

ಕಲಬುರಗಿ ಕ.ಸಾ.ಪ ಜಿಲ್ಲಾಧ್ಯಕ್ಷರನ್ನು ಈ ಕೂಡಲೇ ವಜಾಗೊಳಿಸಿ ಹೊಸದಾಗಿ ಚುನಾವಣೆಯನ್ನು ನಡೆಸಿ, ಕ.ಸಾ.ಪ ಘನತೆ ಮತ್ತು ಗೌರವ ಎತ್ತಿ ಹಿಡಿಯಬೇಕೆಂದು ಕ.ಸಾ.ಪ ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರಲ್ಲಿ ನಿಯೋಗದೊಂದಿಗೆ ತೆರಳಿ ಮನವಿ ಮಾಡಲಾಗುವುದು. -ಯಶವಂತರಾಯ ಅಷ್ಟಗಿ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here