ಶಹಾಪುರ: ಭೂಮಿಯ ಭಾಗಶಃ ಮೂರರಷ್ಟು ನೀರು ಹೊಂದಿದ್ದರೂ ಇತ್ತೀಚಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಿ ಕಂಟಕ ತಂದಿದೆ,ಇದು ನಿಜಕ್ಕೂ ಸಂಕಟದ ವಿಚಾರ ಎಂದು ಪ್ರಗತಿಪರ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ತಿಳಿಸಿದರು.
ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಶಹಾಪುರದ ಸಾರ್ವಜನಿಕ ಸ್ಥಳಗಳಲ್ಲಿ ಹಮ್ಮಿಕೊಂಡಿರುವ ವಿಶ್ವ ಜಲ ದಿನಾಚರಣೆ ಅಂಗವಾಗಿ ನೀರಿನ ಮಹತ್ವ ಹಾಗೂ ನೀರಿನ ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಈ ಅಭಿಯಾನದಲ್ಲಿ ಪಾಲ್ಗೊಂಡು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು,
ಮುಖ್ಯ ಅತಿಥಿಯಾಗಿದ್ದ ಸಿದ್ಧಲಿಂಗಣ್ಣ ಆನೆಗುಂದಿ ಮಾತನಾಡಿ, ಹನಿ ನೀರಿಗೂ ಮಹತ್ವ ಕೊಡಿ, ಬೇಜವಾಬ್ದಾರಿ ಬೇಡ,ಜೀವ ಜಲವನ್ನು ಜೀವದಂತೆ ಕಾಪಾಡಿ ವಿಶ್ವ ಜಲ ದಿನದ ಇತಿಹಾಸ ಮತ್ತು ಮಹತ್ವವನ್ನು ಅರಿತುಕೊಳ್ಳುವುದು ಅಗತ್ಯತೆ ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರನಾಥ್ ಹೊಸಮನಿ ಮಾತನಾಡಿ,ನೀರು ಜಗತ್ತಿನ ಅತ್ಯಮೂಲ್ಯ ವಸ್ತುಗಳಲ್ಲಿ ಇದೊಂದು. ಪ್ರಪಂಚದಲ್ಲಿ ಸಕಲ ಜೀವಿಗಳಿಗೂ ನೀರು ಅತ್ಯಮೂಲ್ಯವಾಗಿ ಬೇಕಾಗಿದೆ. ಮನುಷ್ಯನು ಕೂಡ ಒಂದು ದಿನವೂ ನೀರು ಇಲ್ಲದೆ ಬದುಕಲಾರ ಎಂದು ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ, ಹಿರಿಯ ಸಾಹಿತಿ ಶಿವಣ್ಣ ಇಜೇರಿ, ವಿಶ್ವನಾಥ್ ಜವಳಿ, ಗುರು ಪ್ರಸಾದ್ ಹೋಟೆಲ್ ಮಾಲೀಕರು ಹಾಗೂ ಇತರರು ಜೊತೆಗಿದ್ದರು.