ಕಲಬುರಗಿ: ಈ ಬಾರಿ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ಅಳಿಯ ರಾಧಕೃಷ್ಣ ದೊಡ್ಡಮನಿ ಅವರನ್ನು ಕಾಂಗ್ರೆಸ್ ಪಕ್ಷ ಗುರುವಾರ ಅಧಿಕೃತ ಘೋಷಣೆ ಮಾಡಿ ದೇಶದ 57 ಕ್ಷೇತ್ರಗೇ ಪಟ್ಟಿ ಬಿಡುಗಡೆ ಮಾಡಿದೆ.
ಎಐಸಿಸಿ ಅಧ್ಯಕ್ಷ ಹಾಗೂ ಇಂಡಿಯಾ ಒಕ್ಕೂಟದ ನಾಯಕರಾಗಿರುವ ಡಾ. ಮಲ್ಲಿಕಾರ್ಜುನ್ ಖರ್ಗೆ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಘೋಷಿದಕ್ಷಣದಿಂದ ಮುಂದಿನ ಅಭ್ಯರ್ಥಿಯಾರು ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಅದರೂ ಅಂದಿನಿಂದ ಮುಂಚೂಣಿಯಲ್ಕಿದ ಹೆಸರು ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ಸಿಗಲಿದೆ ಎಂಬ ಮಾತುಗಳು ಪಕ್ಷದಲ್ಲಿ ಇತ್ತು. ರಾಧಕೃಷ್ಣ ಹೊರತು ಪಡಿಸಿದರೆ ಬೇರೆಯಾರ ಹೆಸರು ಚರ್ಚೆಗೆ ಬಂದಿರಲಿಲ್ಲ. ಖರ್ಗೆ ಅವರು ಕೊನೆಗೂ ಸ್ಪರ್ಧೆಗೆ ನಿರಾಕರಿಸಿರುವುದರಿಂದ ಪಕ್ಷದ ಶಾಸಕರು, ಸಚಿವರು ಹಾಗೂ ಮುಖಂಡ ಅಭಿಪ್ರಾಯ ಪಡೆದು ಕೊನೆಗೂ ರಾಧಕೃಷ್ಣ ದೊಡ್ಡಮನಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಲಬುರಗಿ ಮೀಸಲು ಕ್ಷೇತ್ರದಿಂದ ಕಣಕ್ಕೆ ಇಳಿಸಿರುವ ಬಹು ನಿರೀಕ್ಷಿತ ಹೆಸರು ಫೈನಲ್ ಆಗಿದೆ.