ಸುರಪುರ: ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಶ್ರದ್ಧಾ, ಭಕ್ತಿಯೊಂದಿಗೆ ಆಚರಿಸಲಾಯಿತು, ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಕಬಾಡಗೇರಾದ ಕಡ್ಲೆಪ್ಪನವರ ನಿಷ್ಠಿ ವಿರಕ್ತಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ,ಲಕ್ಷ್ಮೀಪುರ ಶ್ರೀಗಿರಿ ಮಠದ ಡಾ:ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ,ನಾಗನಟಗಿಯ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಗ್ರೇಡ-2 ತಹಸಿಲ್ದಾರ್ ಮಲ್ಲಯ್ಯ ದಂಡು,ಉಪ ತಹಸಿಲ್ದಾರ್ ರೇವಪ್ಪ ತೆಗ್ಗಿನಮನಿ,ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಬೇಡ ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಸುನೀಲಕುಮಾರ ಪಂಚಾಂಗಮಠ, ಶರಣಯ್ಯಸ್ವಾಮಿ ಶ್ರೀಗಿರಿಮಠ, ಸಾಗರ ಪುರಾಣಿಕಮಠ, ಮುರಗಯ್ಯಸ್ವಾಮಿ ತಂಬೂರಿಮಠ, ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪನವರಮಠ, ದೇವಿಂದ್ರಯ್ಯಸ್ವಾಮಿ ಸತ್ಯಂಪೇಟ, ಮಲ್ಲಿಕಾರ್ಜುನಸ್ವಾಮಿ ಹಿರೇಮಠ,ಶಿವರಾಜ ಕಲಕೇರಿ,ಶರಣು ಬಳಿ ಜಾಲಿಬೆಂಚಿ, ಶರಣಬಸವ ಪುರಾಣಿಕಮಠ, ಶಿವಪುತ್ರಯ್ಯ ಹಿರೇಮಠ ಮುಷ್ಠಳ್ಳಿ, ಬಸಯ್ಯಶಾಸ್ತ್ರಿ ದೇವತ್ಕಲ್, ಬಸಯ್ಯಸ್ವಾಮಿ ಶ್ರೀಗಿರಿಮಠ, ಮಂಜುನಾಥಸ್ವಾಮಿ ಸತ್ಯಂಪೇಟೆ, ಕ್ಷ್ಮೀರಲಿಂಗಯ್ಯ ಬೋನಾಳ ಸೇರಿದಂತೆ ಸಮಾಜದ ಅನೇಕರು ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಇದ್ದರು.