ಕಲಬುರಗಿ: ನಗರದ ಕನ್ನಡ ಭವನದಲ್ಲಿ ಭಾರತೀಯ ಮಹಿಳಾ ಒಕ್ಕೂಟ ಜಿಲ್ಲಾ ಮಂಡಳಿ ದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಕುಟುಂಬ ವೈದ್ಯ ಡಾ. ಸಂಗೀತಾ ಎಮ್. ಶೃಂಗೇರಿ, ಪತ್ರಕರ್ತೆ ಆಸ್ಮಾ ಇನಾಮದಾರ ಇವರಿಗೆ ಗೌರವ ಸನ್ಮಾನಿಸಲಾಯಿತು.
ಎನ್.ಎಫ್.ಐ.ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ರೇಣುಕಾ ಕೇಸರಹಳ್ಳಿ ಉದ್ಘಾಟಿಸಿದರು. ಎನ್.ಎಫ್.ಐ.ಡಬ್ಲ್ಯೂ ಜಿಲ್ಲಾಧ್ಯಕ್ಷೆ ಪದ್ಮಾವತಿ ಎನ್. ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದರು.
ಕುಟುಂಬ ವೈದ್ಯ ಡಾ. ಸಂಗೀತಾ ಎಮ್. ಶೃಂಗೇರಿ ಅವರು ವಿಶೇಷ ಉಪನ್ಯಾಸ ನೀಡಿದರು, ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿ ಊಟ ತಯಾರಕರ ಪೇಡರೇಷನ್ ಎ.ಐ.ಟಿ.ಯು.ಸಿ. ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷೆ ಕಲ್ಪನಾ ವಿ. ಗುರುಸಿಣಿಗಿ ಆಗಮಿಸಿದರು. ನಗರ ಅಧ್ಯಕ್ಷೆ ಶಿವಲಿಂಗಮ್ಮ ವಿ ಲೆಂಗಟಿಕರ, ಶ್ರೀದೇವಿ ವೈ. ಕೊಡಲಗಿ, ವಿಜಯಲಕ್ಷ್ಮೀ ಪಿ. ಯಳಸಂಗಿ, ಶಿವಲಿಂಗಮ್ಮ ವಿ. ಲೇಂಗಟಿಕರ್, ಶರಣಮ್ಮ ಎ. ಪೂಜಾರಿ, ಜಯಶ್ರೀ ಕೊಸಾಳೆ, ಯಶೋಧಾ ರಾಠೋಡ, ಅನಿತಾ ಭಕರೆ, ನಾಗಮ್ಮ ಗುಡ್ಡಾ, ಸಿದ್ದಮ್ಮ ಪೂಜಾರಿ, ಸವಿತಾ ಮುಗಟಿ, ಲಕ್ಷ್ಮೀಬಾಯಿ ರಾಜೋಳ, ಚಂದಮ್ಮ ಉದನೂರ ಇದ್ದರು. ನಂತರ ಕು.ವರ್ಷ ನಾಗಯ್ಯಾಸ್ವಾಮಿ ಅವರು ನೃತ್ಯ ಸೇವೆ ಸಲ್ಲಿಸಿದರು. ಕು.ಸುನಂದಾ ಬಿ ಮುನ್ನಳ್ಳಿ ನಿರುಪಿಸಿದರು. ಸೇರಿದಂತೆ ಮಹಿಳೆಯರು ಭಾಗವಹಿಸಿದರು.