ಕಲಬುರಗಿ: ದಲಿತ ಸಂಘರ್ಷ ಸಮಿತಿ – ಕರ್ನಾಟಕ ಸಂಘಟನೆ ಜಿಲ್ಲಾ ಶಾಖೆ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ, ವಿಶೇಷ ಉಪನ್ಯಾಸ ಕಾರ್ಯಕ್ರಮ ಮಾ.30ರಂದು ನಡೆಯಿದೆ ಎಂದು ಸಂಘಟನೆ ಜಿಲ್ಲಾ ಕಾನೂನು ಸಲಹೆಗಾರ ಮಸ್ತಾನ್ ಚಂದ್ರಶಾ ಸಂಡೆ ಹೇಳಿದರು.
ನಗರದ ಕನ್ನಡ ಭವನದಲ್ಲಿ ಮಾ.30ರ ಬೆಳಗ್ಗೆ 11ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಹಾಗೂ ಹಟ್ಟಿ ಚಿನ್ನದ ಗಣಿ ಕಾನೂನು ಸಲಹೆಗಾರರಾದ ಬಾಬಾ ದಾಹೇಬ್ ಎಲ್ ಜಿನರಾಳಕರ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಸಂಚಾಲಕ ವಿನೋದಕುಮಾರ ಎಸ್ ಕಾಂಬಳೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಶೋಧನಾ ಬರಹಗಾರ ಡಾ.ವಿಠ್ಠಲ ವಗ್ಗನ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಜೆಸ್ಕಾಂ ಕಾರ್ಯ ನಿರ್ವಾಹಳ ಅಭಿಯಂತರ ಬಿ.ಆರ್.ಬುದ್ಧಾ ಭಾವಚಿತ್ರಕ್ಕೆ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ಪಾಲಿಕೆ ಮಾಜಿ ಮೇಯರ್‌ಗಳಾದ ದಶರಥಬಾಬು ಒಂಟಿ, ಕಲಾವಿದರ ಸಂಘದ ರಾಜ್ಯ ಸಂಚಾಲಕ ವಿ.ಯಲ್ಲಪ್ಪ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಮಾಜಿ ಮೇಯರ್ ಚಂದ್ರಿಕಾ ಪರಮೇಶ್ವರ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಸಂಚಾಲಕ ವಿನೋದಕುಮಾರ ಎಸ್ ಕಾಂಬಳೆ, ಪದಾಧಿಕಾರಿಗಳಾದ ಧೂಳಪ್ಪ ದ್ಯಾಮನಕರ್, ಅನಿಲ ವಳಕೇರಿ, ಮೋಹನ, ಸತೀಶ ನಾಗನೂರು, ಸೂರ್ಯಕಾಂತ ಜಾನೆ, ಪ್ರದೀಪ್, ಗೌತಮ, ಹಣಮಂತ ಇತರರಿದ್ದರು.