ಸುರಪುರ: ಇಂದಿನ ಯುವಕರು ನಮ್ಮ ಮೂಲವನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಮೂಳುಗಿ ತಮ್ಮ ಜೀವನವನ್ನು ಕ್ಲೀಷ್ಟ ವಾಗಿಸಿಕೊಂಡಿದ್ದಾರೆ ನಮ್ಮ ಧರ್ಮ ಗೃಂಥವಾದ ಭಗವದ್ಗೀತೆಯಲ್ಲಿ ಸರ್ವ ಸಮಸ್ಯೆಗಳಿಗೂ ಶ್ರೀ ಕೃಷ್ಣ ಪರಿಹಾರ ವದಗಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ತಾಲೂಕಿನ ಲಕ್ಷ್ಮೀಪುರ ಗ್ರಾಮದ ಬನಶಂಕರಿ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಕೃಷ್ಣಾ ಗೀತಾ ಜ್ಷಾನೋದಯ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ವತಿಯಿಂದ ಭಗವದ್ಗೀತೆ ಪ್ರಚಾರ ಅಭಿಯಾನದಲ್ಲಿ ಗೀತೆ ಭೂಧಿಸುತ್ತಾ ಮಾತನಾಡಿದ ಅವರು ನಮ್ಮ ಧರ್ಮವನ್ನು ನಾವೆ ಆಚರಿಸದೆ ಹೊದರೆ ಹೇಗೆ ಇದನ್ನು ಯುವ ಸಮೂಹ ಅರೆತು ಭಗವದ್ಗೀತೆಯ ಪಾರಾಯಣ ಮತ್ತು ಪ್ರಚಾರ ಅಭಿಯಾನದಲ್ಲಿ ಪಾಲ್ಗೋಂಡು ತಮ್ಮ ಜೀವನವನ್ನು ಸಾರ್ಥಕವಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಸಾಯಿನಂದ ಯಾದವ ಮಾತನಾಡಿ ಭಗವದ್ಗೀತೆಯನ್ನುವ ಗೃಂಥವು ಹಿಂದುಗಳಿಗೆ ಸಿಕ್ಕ ಮಹಾನ ಶಕ್ತಿಯಾಗಿದೆ ಹಿಂದುಗಳಾಗಿ ಜನಿಸಿದ ನಮಗೆ ನಮ್ಮ ಮೂಲಗೃಂಥವನ್ನು ನಾವೆಲ್ಲರೂ ಮನನಮಾಡಿಕೊಂಡು ಗೀತೆಯಲ್ಲಿ ಹೇಳಿದಹಾಗೆ ಧರ್ಮವನ್ನು ರಕ್ಷಿಸುತ್ತಾ ನಮ್ಮ ಬದುಕನ್ನು ಸಾರ್ಥಕವಾಗಿಸುವ ಉದ್ದೇಶದಿಂದ ಈ ಭಗವದ್ಗೀತೆ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ದೇವು ಮೂಲಿಮನಿ, ವೆಂಕಟೇಶ ಮಿಠ್ಠ ಸೇರಿದಂತೆ ಗ್ರಾಮಸ್ಥರಿದ್ದರು.