ಕಲಬುರಗಿ: ಇಲ್ಲಿನ ಶಹಾಬಾದ್ ತಾಲೂಕಿನ ಮಾಲಗತ್ತಿ ಗ್ರಾಮದ ಹತ್ತಿರ ರಸ್ತೆ ದಾಟುತ್ತಿದ್ದ ಪಾದಚಾರಿ ಮೇಲೆ ಸಾರಿಗೆ ಬಸ್ ಹರಿದ ಪರಿಣಾಮ ಸ್ಥಳದಲ್ಲಿಯೇ ಪಾದಚಾರಿ ಓರ್ವ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ..
ಮಲಕಪ್ಪ ಎಂಟಮನಿ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಮಾಲಗತ್ತಿ ಬಳಿ ಹೋಗುವಾಗ ಪಾದಚಾರಿ ರಸ್ತೆ ದಾಟುತ್ತಿದ್ದಗ ಅದೇ ಸಮಯಕ್ಕೆ ನಗರ ಸಾರಿಗೆ ಬಸ್ ಹರಿದಿದೆ. ಈ ಹಿನ್ನೆಲೆ ಮಲಕಪ್ಪ ಸ್ಥಳಿದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದ್ದು, ಘಟನಾ ಸ್ಥಳದಲ್ಲಿ ಉದ್ರಿಕ್ತಗೊಂಡ ಸ್ಥಳಿಯರು ಬಸ್ ಮೇಲೆ ಕಲ್ಲು ತೂರಾಟ ಮಾಡಿ ಆಕ್ರೋಶ ವ್ಯಕ್ತಪಡಿಸದಲ್ಲದೇ , ಚಾಲಕನನ್ನು ಹಿಡಿದು ಥಳಿಸಿದ್ದಾರೆ ಎಂದು ತಿಳಿದುಬಂದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಚಾಲಕನನ್ನು ರಕ್ಷಿಸಿ ಠಾಣೆಗೆ ಕೊರೆದೊಯಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.