ಕಲಬುರಗಿ: ಇಲ್ಲಿನ ಗುಬ್ಬಿ ಕಾಲೋನಿಯಲ್ಲಿ ಸ್ಟಾರ್ ಕೇರ್ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟನೆ ಏ. 7ರಂದು ಉದ್ಘಾಟನೆಯಾಗಲಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ. ಪ್ರಶಾಂತ ಮಾಳಿ ತಿಳಿಸಿದರು.
ಕಲಬುರಗಿಯಲ್ಲಿ ಈಗಾಗಲೇ ಸಾಕಷ್ಟು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಇರಬಹುದು. ಆದರೆ ನಮ್ಮದು ಮಾತ್ರ ಪೇಸೆಂಟ್ ಕೇರ್, ಕ್ವಾಲಿಟಿ ಕೇರ್ ಆಸ್ಪತ್ರೆಯಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಗಳನಾಗಾಂವ ಮಠದ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
40 ಹಾಸಿಗೆಗಳ ಆಸ್ಪತ್ರೆ ಇದಾಗಿದ್ದು, ಎಬಿಆರ್ ಸ್ಕೀಮ್ ಕೂಡ ಇರಲಿದೆ. ರೋಗಿಗಳ ಶುಶ್ರೂಷೆಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ವಿವರಿಸಿದರು.
ಡಾ. ಬಸವರಾಜ, ಡಾ. ರಾಜ್ ಅಹ್ಮದ್, ಡಾ.ಶ್ರೀನಿಥ್ ಪಾಟೀಲ, ಡಾ.ಅರುಣಕುಮಾರ, ಡಾ. ಹರ್ಷ ಆರ್.ಎಂ. ಇತರರಿದ್ದರು.