ಸುರಪುರ: ವ್ಯವಹಾರ, ಅಧ್ಯಾಯನ, ವೃತ್ತಿ ಹಾಗೂ ಹೆಚ್ಚಿನ ಜ್ಞಾನಕ್ಕಾಗಿ ಹಿಂದಿ ಭಾಷೆಯ ಬಗ್ಗೆ ಜ್ಞಾನ ಹೊಂದುವುದು ಅವಶ್ಯಕವಾಗಿದೆ ಎಂದು ಶಿಕ್ಷಕ ಶಿವಕುಮಾರ ಕಮತಗಿ ಅಭಿಪ್ರಾಯ ಪಟ್ಟರು.
ನಗರದ ರಂಗಂಪೇಟೆಯ ಬಸವೇಶ್ವರ ಕಾಲೇಜಿನಲ್ಲಿ ಇಂದು ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಹಿಂದಿ ದಿವಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು ಹಿಂದಿ ಭಾಷೆಗೆ ಪ್ರಾಚೀನ ಕಾಲದಿಂದಲು ಮಹತ್ತರವಾದ ಸ್ಥಾನವಿದೆ, ಭಾರತವು ೧೯೪೯ ಸೆಪ್ಟೆಂಬರ್ ೧೪ ರಂದು ಹಿಂದಿ ಭಾಷೆಯನ್ನು ಆಡಳಿತ ಬಾಷೆಯನ್ನಾಗಿ ಸ್ವಿಕರಿಸಿದ ನೆನಪಿಗಾಗಿ ಪ್ರತಿ ವರ್ಷ ಈ ದಿನವನ್ನು ಹಿಂದಿ ದಿನಾಚಾರಣೆಯನ್ನಾಗಿ ಆಚರಿಸುತ್ತಿದ್ದೆವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿ, ಕನ್ನಡ ಭಾಷೆಯನ್ನು ಪ್ರೀತಿಸಿ ಪೂಜಿಸುವುದರ ಜೊತೆಗೆ ಬೇರೆ ಭಾಷೆಯನ್ನು ನಾವು ಗೌರವಿಸಬೇಕು ಅನೇಕ ಭಾಷೆಗಳ ಜ್ಞಾನವಿರಬೇಕು. ಉದ್ಯೋಗ, ವ್ಯವಹಾರ, ಪ್ರವಾಸ ಇವುಗಳಲ್ಲಿ ಹಿಂದಿ ಭಾಷೆಯ ಜ್ಞಾನ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ತಾಲೂಕಾ ವೀರಶೈವ ಸಮಿತಿ ಕಾರ್ಯದರ್ಶಿ ಶಿವಶರಣಪ್ಪ ಹೆಡಿಗಿನಾಳ ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಶಿಕ್ಷಕ ಈರಪ್ಪ ಗಾದಿ, ಸಂಘಟಕ ಮಲ್ಲಯ್ಯ ಸ್ವಾಮಿ ಇಟಗಿ, ಪ್ರಾಂಶುಪಾಲರುಗಳಾದ ಶಾಂತು ನಾಯಕ, ವಿರೇಶ ಹಳಿಮನಿ, ಉಪನ್ಯಾಸಕರುಗಳಾದ ಬಿರೇಶ ಕುಮಾರ ದೇವತ್ಕಲ್, ಬಲಭೀಮ ಪಾಟೀಲ್, ರುದ್ರಪ್ಪ ಕೆಂಭಾವಿ, ಶ್ರೀಮತಿ ಭಾರತಿ ಪೂಜಾರಿ ಉಪಸ್ಥಿತರಿದ್ದರು. ಕುಮಾರ ಲಂಕೇಶ ದೇವತ್ಕಲ್ ನಿರೂಪಿಸಿದರು, ಬಸವರಾಜ ಚನ್ನಪಟ್ನ ಸ್ವಾಗತಿಸಿದರು, ಸಂತೋಷ ಸಾತಿಹಾಳ ವಂದಿಸಿದರು, ಹಿಂದಿ ದಿವಸ ಅಂಗವಾಗಿ ವಿದ್ಯಾರ್ಥಿಗಳಿಂದ ಪ್ರಬಂಧ ಹಾಗೂ ಭಾಷಣ ಸ್ಪರ್ದೆ ಹಮ್ಮಿಕೊಳ್ಳಲಾಗಿತ್ತು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನಿಡಲಾಯಿತು.