ಕಾಳಗಿ : ಶಾಶ್ವತ ಬರಪೀಡಿತ ಚಿಂಚೋಳಿ ಕಲ್ಲು-ಬಂಡೆಗಳಿಂದ ಸುತ್ತುವರೆದಿರುವ ಪ್ರದೇಶ. ಪರಿಣಾಮ ಬೇಸಿಗೆಯಲ್ಲಿ ಸಹಜವಾಗಿಯೇ ಬೆಂಕಿ ಕೆಂಡದಂಥ ಬಿಸಿಲ ತಾಪ. ಸದ್ಯ 40 ರಿಂದ 44 ಡಿಗ್ರಿ ಸೆಲ್ಸಿಯೆಸ್‌ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು ಸಾರ್ವಜನಿಕರು ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಎಂದು ಪರಿವರ್ತನ ಫೌಂಡೇಶನ್ ಅಧ್ಯಕ್ಷರಾದ ರೇವಣಸಿದ್ಧ ಬಡಾ ತಿಳಿಸಿದ್ದಾರೆ.
ಏಪ್ರಿಲ್, ಮೇ ನಲ್ಲಿ 46 ಡಿಗ್ರಿ ಮುಟ್ಟಲೂಬಹುದು.ಈಗಲೇ ಉರಿ ಬಿಸಿಲಿನ ಧಗೆಗೆ ಜನರು ತತ್ತರಿಸಿದ್ದಾರೆ. ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನತೆ ಹೈರಾಣಾಗಿದ್ದಾರೆ. ಬೆಳಗ್ಗೆ ಎಳೆ ಬಿಸಿಲು ಚುರುಕು ಮುಟ್ಟಿಸುವಂತಿರುಆಗುತ್ತದೆಗಳಲ್ಲಿ ಫ್ಯಾನ್ , ಎಸಿ ಇದ್ದೂ ಸಾಲುತ್ತಿಲ್ಲ. ಜನತೆ ಇನ್ನೂ ಮನೆಯಿಂದ ಹೊರಗೆ ಬಂದರೆ ನೆತ್ತಿ ಸುಡುವಂಥ ಝಳ. ಎಳೆನೀರು, ಮಜ್ಜಿಗೆ, ಪಾನಕ, ಕಲ್ಲಂಗಡಿ, ಐಸ್ ಕ್ರೀಮ್, ಕಬ್ಬಿನ ಹಾಲು, ತಂಪು ಪಾನಿಯ ಮೊರೆ ಹೋಗುತ್ತಿದ್ದಾರೆ.
ಇವುಗಳಿಂದ ದಾಹ ಇಂಗದ ಜನರು ಈಜಿಗಾಗಿ ಈಜುಕೊಳ, ಕೆರೆ, ಬಾವಿ, ಜಲಮೂಲಗಳನ್ನು ಹುಡುಕಿಕೊಂಡು ಹೋಗುತ್ತಾರೆ. ರಟಕಲ ಗ್ರಾಮದ ಹತ್ತಿರವಿರುವ ಬಾವಿಗಳಲ್ಲಿ ಈಜಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.ಈಜಿನಿಂದ ದೇಹ ತಂಪಾಗುತ್ತದೆ ಜತೆಗೆ ದೈಹಿಕ ವ್ಯಾಯಾಮವೂ ಆಗುತ್ತದೆ ಎಂಬ ಬಲವಾದ ನಂಬಿಕೆ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಜು ತುಂಬಾ ಖುಷಿ ಕೂಡ ಕೊಡುತ್ತದೆ. ಸ್ನೇಹಿತರೆಲ್ಲರೂ ಆಗಾಗ್ಗೆ ಈಜುಕೊಳಕ್ಕೆ ಬರುತ್ತೇವೆ. ಇದರಿಂದ ದೇಹದ ಆಯಾಸವೂ ಕಡಿಮೆ ಆಗುತ್ತದೆ